ಗುಲ್ಬರ್ಗಾ

ಅಪೂರ್ಣ ಮಾಹಿತಿ: ಪಿಡಿಒಗಳಿಗೆ ತರಾಟೆ

Published On :

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜು.10
ತಾಲೂಕಿನ 27 ಗ್ರಾಪಂ ಪಿಡಿಒಗಳು ಜಿಪಂಗೆ ಕಳಿಸಿದ ವಸತಿ ಯೋಜನೆಯ ಅನುಮೋದನೆ ಪಟ್ಟಿ ಅಪೂರ್ಣ ಮಾಹಿತಿಯಿಂದ ಕೂಡಿದೆ ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಗ್ರಾಪಂ ಪಿಡಿಒಗಳಿಗೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಉದ್ಯೋಗ ಖಾತ್ರಿ, ವಸತಿಯೋಜನೆ, ಇನ್ನಿತರ ಯೋಜನೆಗಳ ಪಗ್ರತಿ ಪರಿಶೀಲನೆ ನಡೆಸಿ ಮಾತನಾಡಿ, ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಿದ ಪಲಾನುಭವಿಗಳ ಅನೂಮೋದನೆ ಪಟ್ಟಿಯನ್ನು ಚೆಕ್ ಲಿಸ್ಟ್ ಪ್ರಕಾರ ಜಿಪಂಗೆ ಗ್ರಾಪಂ ಪಿಡಿಒಗಳು ಕಳಿಸಿಲ್ಲ ಅದನ್ನು ಸರಿಯಾಗಿ ಪರಿಶೀಲಿಸದೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪೋಸ್ಟಮ್ಯಾನ್ ಕೆಲಸದಂತೆ ರವಾನೆ ಮಾಡಿದ್ದಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜನರಿಗೆ ತಪ್ಪು ಮಾಹಿತಿ: ತಾವು ತಪ್ಪು ಮಾಡಿ ಅನುಮೋದನೆ ಜಿಪಂ ಕಚೇರಿಗೆ ಕಳಿಸಿದೆ. ಸಿಒ ಅವರು ಅನುಮೋದನೆ ಮಾಡಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿರಿ ಇದರಿಂದ ಜನರು ಜಿಪಂ ಕಚೇರಿಗೆ ಬಂದು ಹೋರಾಟ, ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿರಿ ಎಂದರು.
ಅಪೂರ್ಣ ಮಾಹಿತಿಯಿಂದಾಗಿ 27 ಗ್ರಾಪಂ ವಸತಿ ಯೋಜನೆಯ ಅನುಮೋದನೆಗಳನ್ನು ವಾಪಸ್ಸು ಕಳಿಸಲಾಗಿದೆ ಎಂದ ಅವರು, ತಕ್ಷಣ ಸರಿಪಡಿಸಿಕೊಂಡು ಜಿಪಂಗೆ ಕಳಿಸಲು ಸೂಚಿಸಿದರು.
ಹಣ ವಾಪಸ್ಸು ಕಳಿಸಿ: ಗ್ರಾಮ ಸಭೆ ನಡುವಳಿಕೆ, ಜಾಗೃತಿ ಸಭೆ ನಡುವಳಿಕೆ ಸಭೆಯಲ್ಲಿ ಭಾಗವಹಿಸಿದ 100 ಜನರ ಸಹಿ ಹಾಗೂ ಮನೆಯಿಲ್ಲದ ಬಗ್ಗೆ ದೃಢಿಕರಣ ಪತ್ರ ಕಡ್ಡಾಯವಾಗಿ ಲಗತ್ತಿಸಬೇಕು. ತಾಪಂ ಕಚೇರಿಯಿಂದ ಆಶ್ರಯ ಮನೆ ಪಲಾನುಭವಿಗಳಿಗೆ ಆಡಿಟ್ ವರದಿ ಪ್ರಕಾರ 15.57 ಲಕ್ಷ ಹಣ ಪಾವತಿ ಮಾಡಬೇಕಾಗಿದೆ. ಇದನ್ನು ಪರಿಶೀಲಿಸಿ ಪಾವತಿಸಿ ಇಲ್ಲವಾದರೆ ರಾಜೀವಗಾಂದಿ ಅಭಿವೃದ್ಧಿನಿಗಮಕ್ಕೆ ವಾಪಸ್ಸು ಕಳಿಸುವಂತೆ ಜೂ.17 ರಂದು ಸೂತ್ತೋಲೆ ಕಳಿಸಲಾಗಿದೆ. ಏಕೆ ಕಳಿಸಿಲ್ಲ ಎಂದು, ತಕ್ಷಣ ಹಣ ವಾಪಸ್ಸು ಕಳಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಅಧಿಕಾರಿಗಳಾದ ಕೆಂಚಣ್ಣ, ವಸಂತ ಕುಲಕರ್ಣಿ, ವಿರುಪಾಕ್ಷಿ, ಕಿರಣಿಗಿ ಅವರು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಆಧಿಕಾರಿ ಸುರೇಶ ಬಿರಾದಾರ, ಲಕ್ಷ್ಮಣ ಶೃಂಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.