ಗುಲ್ಬರ್ಗಾ

ಪಾಲಿಕೆ ಮಾಜಿ ಆಯುಕ್ತರ ಅವ್ಯವಹಾರದ ವಿರುದ್ಧ ದೂರು

Published On :

ಗುಲ್ಬರ್ಗ: ಈ ಹಿಂದೆ ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಮನೋಜಕುಮಾರ್ ಜೈನ್ ಅಧಿಕಾರ ಅವಧಿಯಲ್ಲಿ ನಡೆದ ವ್ಯಾಪಕ ಅವ್ಯವಹಾರ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೈ. ಕ. ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ. ರಾಜು ಕುಳಗೇರಿ ಒತ್ತಾಯಿಸಿದ್ದಾರೆ.
ಗುಲ್ಬರ್ಗಕ್ಕೆ ಆಗಮಿಸಿದ ಕರ್ನಾಟಕ ಲೋಕಾಯುಕ್ತ ಭಾಸ್ಕರ್ ರಾವ ಅವರಿಗೆ ದೂರು ಸಲ್ಲಿಸಿರುವ ಅವರು, ಪಾಲಿಕೆಯಲ್ಲಿ ಶೇ. 22.75 ಪ್ರತಿಶತ ಹಣದ ವಿಷಯದಲ್ಲಿ ನಿರಂತರವಾಗಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಅಂದಿನ ಆಯುಕ್ತರ ವಿರುದ್ಧ ಆಗಿನ ಮಹಾಪೌರರು ಮತ್ತು ಉಪಮಹಾಪೌರರು ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದಾರೆ. ಅದರಂತೆ ಸಚಿವರು ತನಿಖೆಗೆ ಆದೇಶ ನೀಡಿ, ಸಮಗ್ರ ತನಿಖೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ವಿಪರ್ಯಾಸ ಸಂಗತಿಯೆಂದರೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು 14.7.2011ರಂದು ಪತ್ರ ಬರೆದು, ಯಾವ ಆಯುಕ್ತರ ಮೇಲೆ ಹಣ ಮತ್ತು ಅಧಿಕಾರ ದುರ್ಬಳಕೆ ಆಪಾದನೆ ಇರುತ್ತದೆಯೋ ಅದೇ ಅಧಿಕಾರಿಗಳಿಗೆ ವಿಚಾರಣೆ ಮಾಡಿ ವರದಿ ಸಲ್ಲಿಸಿಕ್ಕೆ ಆದೇಶವಿತ್ತಿದ್ದಾರೆ ಎಂದು ಆರೋಪಿಸಿದರು.
ಆಪಾದನೆ ಹೊತ್ತಿರುವ ಅಧಿಕಾರಿಯು ಅದು ಹೇಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ ಎಂದು ಪ್ರಶ್ನಿಸಿದರು.
ಆಗಿನ ಆಯುಕ್ತರ ವಿರುದ್ಧ ಮಹಾಪೌರರು 23.10.2010 ರಂದು ಆಯುಕ್ತರ ಕಾರ್ಯವೈಖರಿ ಹಾಗೂ ಸರ್ವಾಧಿಕಾರಿ ಧೋರಣೆಯ ಬಗ್ಗೆ ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದಾರೆ.  ಎಲ್ಲ ಆಪಾದನೆಗಳ ಬಗ್ಗೆ ಕೂಲಂಕುಷವಾಗಿ ತನಿಖೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಡಾ. ರಾಜು ಕುಳಗೇರಿ ಕರ್ನಾಟಕ ಲೋಕಾಯುಕ್ತರಿಗೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.