ಸರ್ಕಸ್ ಮಾಡಿಯೇ ಶಾಲೆಗೆ ಹೋಗಬೇಕು...
ಹುಣಸಗಿ: ಕೈ ಕೆಸರಾದರೆ ಬಾಯಿ ಮೊಸರು. ಆದರೆ ಕಾಲು ಕೆಸರಾದರೇ ಚಪ್ಪಲಿಗಳಿಗೆಲ್ಲ ರಾಡಿ. ಓಹೋ ಫನ್ನಿ ಲೈನ್ ಎಂದು ಹುಬ್ಬೇರಿಸಬೇಡಿ
ಹೌದು ಸ್ವಾಮಿ, ಹುಣಸಗಿಯ ಹೃದಯ ಭಾಗವೆಂದು ಹೆಸರಾದ ಯುಕೆಪಿ ಕ್ಯಾಂಪ್ನ್ನು ಪ್ರವೇಶಿಸುವ ಸಂದರ್ಭದಲ್ಲಿ ಎಲ್ಲರಿಗೂ ನೆನಪಾಗುವ ಗಾದೆ ಇದು. ಪಟ್ಟಣದಲ್ಲಿ ಮೂರು-ನಾಲ್ಕು ದಿನಗಳಿಂದ ಸುರಿದ ಜಿಟಿಜಿಟಿ ಮಳೆಗೆ ಪಟ್ಟಣ ಸೇರಿದಂತೆ ಕ್ಯಾಂಪಿಗೆ ಪ್ರವೇಶಿಸುವ ರಸ್ತೆಗಳಲ್ಲಿಯೂ ಮಳೆನೀರು ನಿಂತು, ಕೆಸರುಮಯವಾಗಿದೆ.
ಯುಕೆಪಿ ಕ್ಯಾಂಪ್ಅನ್ನು ಮೂರು ರಸ್ತೆಗಳಿಂದ ಪ್ರವೇಶ ಪಡೆಯಬಹುದು. ಈ ಮೂರು ಮಾರ್ಗಗಳಲ್ಲಿ ಎರಡು ಮಾರ್ಗಗಳು ಸಂಪೂರ್ಣ ಜಲಾವೃತಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಮೂರನೆಯ ಮಾರ್ಗ ಬಳಸಬೇಕಾದರೆ ಸುಮಾರು ಎರಡು ಕಿಮೀನಷ್ಟು ನಡೆಯಬೇಕಾಗುವ ಪರಿಸ್ಥಿತಿ ಇರುವುದರಿಂದ ಪಾಲಿಗೆ ಬಂದದ್ದು ಪಂಚಾಮೃತವೆಂದು ಇವೆರಡೇ ದಾರಿಗಳಲ್ಲಿ ಜನತೆ ನಡೆದಾಡುತ್ತಿದ್ದಾರೆ. ಸರ್ಕಸ್: ಸೈಕಲ್, ಬೈಕ್ ಹೇಗೋ ಮಳೆ ನೀರನ್ನು ಚಿಮ್ಮಿಕೊಂಡು ಹೋಗಬಹುದು. ಆದರೆ ಪಾದಚಾರಿಗಳು ರಸ್ತೆಯಲ್ಲಿ ನಡೆಯಬೇಕಾರೆ ಸರ್ಕಸ್ ಮಾಡುವಂತಹ ಸ್ಥಿತಿ ಬಂದೊದಗಿದೆ.
ಈ ರಸ್ತೆಯ ಮುಖಾಂತರ ಬಾಲಕಿಯರ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಖಾಸಗಿಯ ಸುಮಾರು ಎಂಟತ್ತು ಶಾಲೆಗಳಿಗೆ ವಿದ್ಯಾರ್ಥಿಗಳು ಇದೇ ದಾರಿಯಲ್ಲಿ ಹೋಗಬೇಕಾಗುತ್ತದೆ.
ಆದರೆ ಈ ರಸ್ತೆ ಸುಧಾರಣೆ ಮಾತ್ರ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಗಮನ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ರಸ್ತೆಯಲ್ಲಿ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಮಳೆ ನೀರು ನಿಂತು ಈ ರಸ್ತೆಯಲ್ಲಿ ಶಾಲೆಗೆ ಹೋಗುವುದೇ ದುಸ್ತರವಾಗಿದೆ. ಹೇಗಾದರೂ ರಸ್ತೆ ಸುಧಾರಣೆ ಮಾಡಿಸಿ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

