ಗುಲ್ಬರ್ಗಾ

ವಿಕಲಚೇತನರಿಗೆ ಬಜೆಟ್‌ನಲ್ಲಿ ಅನ್ಯಾಯ; ಹಳ್ಳಿ ದೂರು

Published On :

ಗುಲ್ಬರ್ಗ/ಶಹಾಬಾದ್: ರಾಜ್ಯದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವಿಕಲಚೇತರಿಗೆ ಮೂರು ಸಾವಿರ ಮಾಶಾಸನ ನೀಡುವುದಾಗಿ ಆಶ್ವಾಸನೆ ನೀಡಿ, ಮುಖ್ಯಮಂತ್ರಿ  ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಿತ್ತಾಪುರ ತಾಲೂಕು ಮಹಾತ್ಮಾಗಾಂಧಿ ಅಂಗವಿಕಲರ ಸಂಘದ ಅಧ್ಯಕ್ಷ ಈರಣ್ಣ ಹಳ್ಳಿ ಕಾರ್ಗಿಲ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ರೈತರಿಗೆ, ವಿವಿಧ ಜಾತಿಗಳಿಗೆ ನೀಡಿದ ಸಾಲವನ್ನು ಮನ್ನಾ ಮಾಡಿದ ಸರ್ಕಾರ, ಆಧಾರ ಯೋಜನೆಯ ಅಡಿಯಲ್ಲಿ ವಿಕಲಚೇತರಿಗೆ ಸ್ವಯಂ ಉದ್ಯೋಗಕ್ಕಾಗಿ ಒಂದು ಡಬ್ಬಾ, 20 ಸಾವಿರ ಸಾಲ ನೀಡಿದ್ದು, ಅದನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದ ಅವರು, ಆಧಾರ ಯೋಜನೆಯಲ್ಲಿ ಪ್ರತಿ ತಾಲೂಕಿಗೆ ಕೇವಲ ಒಬ್ಬರಿಗೆ ಮಾತ್ರ ಡಬ್ಬಾ, ಸಾಲ ನೀಡುತ್ತಿದ್ದು, ಅದನ್ನು ಹೆಚ್ಚಿಸಬೇಕು ಮತ್ತು ವೀಕಲಚೇತರಿಗೆ ಸ್ವಯಂ ಉದ್ಯೋಗಕ್ಕಾಗಿ ಬಡ್ಡಿ ರಹಿತ ಸಾಲ ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರ ಕಲೆ, ಸಾಹಿತ್ಯ ಸೇರಿದಂತೆ ವಿವಿಧೆಡೆ ಸಾಧನೆ ಮಾಡಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ನಾಮನಿರ್ದೇಶನ ಮಾಡಬೇಕು, ಇದರಿಂದ ವಿಧಾನಸಭೆಯಲ್ಲಿ ವಿಕಲಚೇತರ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಲು ಅನುಕೂಲ ಎಂದು ಅಭಿಪ್ರಾಯಪಟ್ಟಿದ್ದಾರೆ.
--
ಬೋಧಗಯಾ ಸ್ಫೋಟ ಖಂಡಿಸಿ ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್: ಬೋಧಯಾದಲ್ಲಿ ಬಾಂಬ್ ಸ್ಫೋಟ ಖಂಡಿಸಿ ನಗರ ದಲಿತ ಸೇನಾ ವತಿಯಿಂದ ಚಿತ್ತಾಪುರ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಚಿತ್ತಾಪುರ ಕ್ರಾಸ್ ಬಳಿ ನಗರ ಅಧ್ಯಕ್ಷ ರಾಜಕುಮಾರ ಹುಗ್ಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಗತ್ತಿಗೆ ಶಾಂತಿ ಸಂದೇಶ ಸಾರಿದ ಬುದ್ಧರ ಪವಿತ್ರ ಸ್ಥಳದಲ್ಲಿ ಬಾಂಬ್ ಸ್ಟೋಟ ನಡೆಸಿದವರನ್ನು ಕೂಡಲೇ ಬಂಧಿಸಿಬೇಕು ಎಂದು ಆಗ್ರಹಿಸಿ ಬಿಹಾರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಸ್ತೆತಡೆ ನಡೆಸಿ ಪ್ರತಿಭಟಿಸಿದ ಸೇನಾ ಕಾರ್ಯಕರ್ತರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು  ಉಪ ತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು. ಪಿಎಸ್‌ಐ ರಘು ಎನ್. ಇದ್ದರು.
ದಲಿತ ಸೇನೆಯ ಪ್ರಧಾನ ಕಾರ್ಯದರ್ಶಿ ಲೋಹಿತ ಉದಯಕರ್, ಜಿಲ್ಲಾ ಸಲಹೆಗಾರ ಶಿವಣ್ಣ ಮಾಸ್ಟರ್, ರಂಗನಾಥ ಹೊಸಮನಿ, ಮಹಿಳಾ ಅಧ್ಯಕ್ಷ ರೋಹಿಣಿ ಭಾಗೋಡಿ, ಶರಣು ನಾಟೀಕಾರ್, ಉಮೇಶ, ಶ್ರವಣಕುಮಾರ ಮುಸಲಗಿ, ಸಾಯಬಣ್ಣ ನಾಟೀಕಾರ್, ರಾಹುಲ್ ಜಂಬರಿ, ರಾಜು ನಾಟೀಕಾರ್, ಗುರು ಪಾಳಾ  ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.