ಗುಲ್ಬರ್ಗಾ

ತಾಪಂ ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ತಡೆಯಾಜ್ಞೆ

Published On :

ಯಾದಗಿರಿ: ಇಲ್ಲಿಯ ತಾಲೂಕಾ ಪಂಚಾಯಿತಿ ಉಪಾಧ್ಯಕ್ಷ ಸಣ್ಣ ಸಾಬಣ್ಣ ವಿರುದ್ಧ ಕೈಗೊಂಡಿದ್ದ ಅವಿಶ್ವಾಸ ನಿರ್ಣಯಕ್ಕೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠವು ತಾಪಂ ಸದಸ್ಯರು ಉಪಾಧ್ಯಕ್ಷ ಸಣ್ಣಸಾಬಣ್ಣ ಅವರ ವಿರುದ್ಧ ಕೈಗೊಂಡಿದ್ದ ಅವಿಶ್ವಾಸ ನಿರ್ಣಯಕ್ಕೆ ತಡೆಯಾಜ್ಞೆ ನೀಡಿದೆ ಎಂದು ಅವರ ಪರ ವಾದ ಮಂಡಿಸಿದ್ದ ಹೈಕೋರ್ಟ್ ನ್ಯಾಯವಾದಿ ನವಲಿ ಕೃಷ್ಣಾಚಾರ ತಿಳಿಸಿದ್ದಾರೆ.  ಸಣ್ಣಸಾಬಣ್ಣ ಅವರು ತಮ್ಮ ವಿರುದ್ಧ ಕೈಗೊಂಡಿದ್ದ ಅವಿಶ್ವಾಸ ನಿರ್ಣಯಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ರಿಟ್ ಪಿಟಿಶನ್ ಸಂಖ್ಯೆ 101946-2013 ಪರಿಶೀಲಿಸಿದ ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದಾರೆ ಎಂದು ನವಲಿ ತಿಳಿಸಿದ್ದಾರೆ.
ಇಲ್ಲಿಯ ತಾಪಂ ಉಪಾಧ್ಯಕ್ಷ ಸಣ್ಣಸಾಬಣ್ಣ ಅವರ ವಿರುದ್ಧ ಕಳೆದ ಜು.4ರಂದು ಸದಸ್ಯರು ಅವಿಶ್ವಾಸಕ್ಕೆ ನಿರ್ಣಯ ಮಂಡಿಸಿದ್ದರು.

ಅರ್ಜಿ ಆಹ್ವಾನ
ಸುರಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರರಿಗೆ ಐಎಎಸ್ ಮತ್ತು ಐಪಿಎಸ್ ಉನ್ನತ ಹುದ್ದೆಗಳಿಗೆ ಪೂರ್ವ ತಯಾರಿಗಾಗಿ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2013-14ನೇ ಸಾಲಿಗೆ ದೆಹಲಿ, ಹೈದರಾಬಾದ, ಬೆಂಗಳೂರಿನ ಪ್ರತಿಷ್ಠಿತ ತರಬೇತಿ ಕೇಂದ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಅಂತರ್ಜಾಲದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ  ತಾಲೂಕು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.