ಸರ್ಕಾರ ಬದಲಾದರೂ ಜಾಹೀರಾತು ಫಲಕ ಬದಲಾಗಿಲ್ಲ
ಆಳಂದ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಕಲಾದ ಸರ್ಕಾರದ ಜಾಹೀರಾತು ಫಲಕವನ್ನು ಕಾಂಗ್ರೆಸ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರು ಫಲಕಗಳು ಮಾತ್ರ ಅಲ್ಲಲ್ಲಿ ಹಾಗೇ ಇರುವುದು ನೋಡುಗರಲ್ಲಿ ಚರ್ಚೆಗೆ ಗ್ರಾಸವಾಗಿಸಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ 36 ಸೇವೆಗಳ ಕಲ್ಪಿಸಲು ಜಾರಿಗೆ ತರಲಾದ ಯೋಜನೆಯಾದ ಅಟೆಲ್ಜೀ ಜನಸ್ನೇಹಿ ಯೋಜನೆ ಕುರಿತು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಪ್ರಧಾನಿ ವಾಜಪೇಯಿ ಮತ್ತು ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ ಅವರು ಒಳಗೊಂಡ ಭಾವಚಿತ್ರದ ಫಲಕಗಳು ತೂಗಾಡುತ್ತಿರುವುದು ಪಟ್ಟಣದಲ್ಲಿ ನೋಡುಗರನ್ನು ತೀವ್ರ ಮುಜುಗರಕ್ಕೊಳಪಡಿಸಿ ಹುಬ್ಬೇರಿಸುವಂತೆ ಮಾಡುತ್ತಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡುವರೆ ತಿಂಗಳಾದರು ಹಿಂದಿನ ಸರ್ಕಾರ ಫಲಕಗಳೇ ಕಾಣುಸುತ್ತಿವೆ.
ಈ ಫಲಕ ಹಾಕುವಂತೆ ಹಿಂದಿನ ಸರ್ಕಾರ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಸಂಬಂಧಿತ ಸ್ಥಳೀಯ ಸಿಬ್ಬಂದಿ ಈ ಫಲಕಗಳನ್ನು ಅಂದು ಹಾಕಿದ್ದರು. ಈಗ ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ಈ ಫಲಕಗಳನ್ನು ತೆಗೆದು ಹಾಕಿ ಅಥವಾ ಇವುಗಳನ್ನೇ ಮುಂದುವರೆಸಬೇಕೆಂಬ ಮೇಲಾಧಿಕಾರಿಗಳ ಮತ್ತು ಸರ್ಕಾರದ ಯಾವುದೇ ಸುತ್ತೋಲೆ ಅಥವಾ ಮಾಹಿತಿ ಇಲ್ಲದೆ ಇರುವುದರಿಂದ ಸ್ಥಳೀಯ ಅಧಿಕಾರಿಗಳು ಗೊಂದಲದಿಂದಾಗಿ ಫಲಕಗಳು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

