ಗುಲ್ಬರ್ಗಾ

ಲೋಕಸಭೆಗೆ ಚುನಾವಣೆಗೆ ಸಿದ್ಧರಾಗಿ

Published On :

ಗುಲ್ಬರ್ಗ/ಶಹಾಬಾದ್: ಜನಪರ ಕಾರ್ಯಗಳಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕೆಂದು ಚಿತ್ತಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ ಹೇಳಿದರು.
ನಾಲವಾರ ವಲಯ ಬಿಜೆಪಿ ಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಡಾ. ಮಹೇಂದ್ರ ಕೋರೆ ಮಾತನಾಡಿದರು. ನಾಲವಾರ ವಲಯ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಶರಣಗೌಡ ಕರಡ್ಡಿ ಕೊಲ್ಲೂರ- ಅಧ್ಯಕ್ಷ, ನೆಹರು ಉಳಂಡಗೇರಾ, ಶರಣಗೌಡ ಮಾರಡಗಿ, ಮಾನಪ್ಪ ಚಾಮನೂರ- ಉಪಾಧ್ಯಕ್ಷರು, ಗೋಪಿಚಂದ ಶ್ಯಾಂಪೂರಹಳ್ಳಿ- ಪ್ರಧಾನ ಕಾರ್ಯದರ್ಶಿ, ಶಿವಣ್ಣಗೌಡ ಕನಗನಳ್ಳಿ- ಖಜಾಂಚಿ  ಅವರನ್ನು ಆಯ್ಕೆ ಮಾಡಲಾಯಿತು.
ಮುಖಂಡರಾದ ಮಹೇಶಗೌಡ ಸೂಗೂರ, ನ್ಯಾಯವಾದಿ ಶರಣಗೌಡ ಸೂಗೂರ್, ಜೈಪ್ರಕಾಶಗೌಡ ಮಾಲಿಪಾಟೀಲ್, ಅಮೀನರೆಡ್ಡಿ ತರಕಸಪೇಟ್, ಮಹಿಪಾಲರೆಡ್ಡಿಗೌಡ ಸೂಗೂರ, ಡಾ. ವೀರೇಶ ಎಣ್ಣಿ, ಹಣಮಂತ ಹೆಡಗಿಮದ್ರಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.