ಗುಲ್ಬರ್ಗಾ

ಕುಡಿವ ನೀರಿನ ಘಟಕ: ಅಧಿಕಾರಿಗಳ ದಾಳಿ

Published On :

ಗುಲ್ಬರ್ಗ: ಐಎಸ್‌ಐ ಮಾರ್ಕ್ ಇಲ್ಲದ ಕುಡಿವ ನೀರಿನ ಘಟಕಗಳ ಮೇಲೆ ನೋಡಲ್ ಅಧಿಕಾರಿಗಳಾದ ಡಾ. ಅಮರೇಶ ಕೊಳ್ಳೂರ್ ಮತ್ತು ಆರ್.ಎಸ್. ಬಿರಾದಾರ ಹಾಗೂ ಸಿಬ್ಬಂದಿ ಬುಧವಾರ ದಾಳಿ ನಡೆಸಿದ್ದಾರೆ. ಶಾಂತಿ ನಗರದ ಡ್ಯೂಡ್ರಾಪ್, ಜಿಡಿಎ ಕಾಲೋನಿಯಲ್ಲಿರುವ ಸ್ವಿಂಗ್ ವಾಟರ್ ಮತ್ತು ಎನ್‌ಜಿಓ ಕಾಲೋನಿಯಲ್ಲಿರುವ ವರ್ಷಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.ಐಎಸ್‌ಐ ಅನುಮತಿ ಪಡೆಯದೆ ಘಟಕಗಳನ್ನು ನಡೆಸಲಾಗುತ್ತಿತ್ತು. ಬಾಟಲಿ ಮತ್ತು ಪಾಕೇಟ್‌ಗಳಲ್ಲಿ ನೀರನ್ನು ತುಂಬಿ ಮಾರಾಟ ಮಾಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಈ ಘಟಕಗಳ ಮೇಲೆ ದಾಳಿ ನಡೆಸಿ ಈ ಮೂರು ಘಟಕಗಳಿಗೆ ಬೀಗ ಹಾಕಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 61 ಘಟಕಗಳಿದ್ದು, 3 ಘಟಕಗಳು ಮಾತ್ರ ಐಎಸ್‌ಐ ಮಾರ್ಕ್ ಹೊಂದಿವೆ. 12 ಘಟಕಗಳು ಐಎಸ್‌ಐ ಅನುಮತಿ ಕೋರಿವೆ ಎಂದು ತಿಳಿದು ಬಂದಿದೆ.ಐಎಸ್‌ಐ ಮಾರ್ಕ್ ಇಲ್ಲದೆ ಕುಡಿಯುವ ನೀರಿನ ಘಟಕ ನಡೆಸುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಅಫಜಲ್ಪುರ: ತಾಲೂಕಿನ ದೇವಲಗಾಣಪುರದಲ್ಲಿ ಭೀಮಾ ನದಿ ಸಂಪೂರ್ಣ ಬತ್ತಿದ್ದು ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ಕೊಡುವ ಯಾತ್ರಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನದಿಯಲ್ಲಿ ತಗ್ಗುಗಳನ್ನು ತೋಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ತಾಪಂ.ಗೆ ಸದಸ್ಯ ದತ್ತು ಸಿಂಧೆ ಒತ್ತಾಯಿಸಿದ್ದಾರೆ.ಈಗಾಗಲೇ ದೇವಲಗಾಣಪುರದಲ್ಲಿ 8 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಆದರೂ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿ ಸಮಸ್ಯೆ ಪರಿಹರಿಸಬೇಕೆಂದು  ಒತ್ತಾಯಿಸಿದ್ದಾರೆ.
ಜನಸ್ಪಂದನದಲ್ಲಿ ಶ್ರೀಕಾಂತ ಕಟ್ಟಿಮನಿ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಜು. 25ರಂದು ಸಂಜೆ 6.30ಕ್ಕೆ ಜನಸ್ಪಂದನ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ  ಕಾರ್ಯ ಚಟುವಟಿಕೆಗಳು ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ. ಮಹಾನಗರ ಪಾಲಿಕೆಯ ಆಯುಕ್ತ ಶ್ರೀಕಾಂತ ಬಿ. ಕಟ್ಟಿಮನಿ ಅವರು ಭಾಗವಹಿಸಲಿದ್ದಾರೆ. ದೂ.220491, 220492 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.