ಗುಲ್ಬರ್ಗಾ

ಜಿಡಗಾ ಮಠ ಜಾತ್ಯತೀತ, ಭಕ್ತಿಯ ತಾಣ: ಧರ್ಮಸಿಂಗ್

Published On :

ಕನ್ನಡಪ್ರಭ ವಾರ್ತೆ, ಆಳಂದ, ಜು.24
ಭಕ್ತಿ ಪರಂಪರೆಯ ಜಾತ್ಯತೀತ, ಸಮಭಾವದ ಭಕ್ತರ ಮಠವೇ ಜಿಡಗಾ ನವಕಲ್ಯಾಣ ಮಠವಾಗಿದೆ ಎಂದು ಬೀದರ್ ಸಂಸದ, ಮಾಜಿ ಸಿಎಂ ಧರ್ಮಸಿಂಗ್ ಬಣ್ಣಿಸಿದರು.
ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮಾ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಾಶಿ, ಶ್ರೀಶೈಲಕ್ಕೆ ಹೋಗಬೇಕಿಲ್ಲ: ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧಿಪತಿ ಡಾ. ಮುರುಘರಾಜೆಂದ್ರ ಸ್ವಾಮೀಜಿ, ಗುರುಪೂರ್ಣಿಮೆ ನಿಮಿತ್ತ ಭಕ್ತರು ಕಾಶಿ, ಶ್ರೀಶೈಲಕ್ಕೆ ಹೋಗಬೇಕಾಗಿಲ್ಲ. ಲಿಂ.ಸಿದ್ದರಾಮ ಶಿವಯೋಗಿಗಳು ಪಾವನ ಮಾಡಿದ ಮಠವೇ ಇಂದು ಕಾಶಿ, ಶ್ರೀಶೈಲವಾಗಿದೆ ಎಂದರು.
ಪುರಾತನ ಕಾಲದಲ್ಲಿ ಬುದ್ಧನು ಬೌದ್ಧ ಧರ್ಮ ಸ್ವೀಕರಿಸಿ ಶಿಷ್ಯರ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದರು. ಬುದ್ಧ ಪೂರ್ಣಿಮೆ ನಿಮಿತ್ತ ಎಲ್ಲರೂ ಕೂಡಿ ಸಂಭ್ರಮಿಸುತ್ತಿದ್ದರು. ಆದರೆ ನಾವು ಗುರುಪೂರ್ಣಿಮೆ ನಿಮಿತ್ತ ಭಕ್ತರು ಸೇರಿ ಸಂಭ್ರಮಿಸುವಂತಾಗಿದೆ ಎಂದರು.
ಮುಗುಳನಾಗಾಂವದ ಜೇಮಸಿಂಗ್ ಮಹಾರಾಜರು, ದುಧನಿ ಎಪಿಎಂಸಿ ಅಧ್ಯಕ್ಷ ಸಾತಲಿಂಗಪ್ಪ ಮೇತ್ರೆ, ಬೀದರ್- ಗುಲ್ಬರ್ಗ ಕೆಎಂಎಫ್ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರರಾವ್ ದೇಶಮುಖ, ಆರ್.ಕೆ. ಪಾಟೀಲ್, ಗುರುಶರಣ ಪಾಟೀಲ್ ಕೊರಳ್ಳಿ, ಸಿ.ಬಿ. ಪಾಟೀಲ್ ಓಕಳಿ, ಅಪ್ಪಣಗೌಡ ಪಾಟೀಲ್, ಮಾರುತಿ ಪೈಲ್ವಾನ್, ದೇವರಾವ ಜವಳಿ, ಸಿದ್ದಾರಾಮ ಪಾಟೀಲ್, ಬಸವರಾಜ ಹಿರೇಮಠ, ಸಿದ್ದಾರಾಮ ಯಾದವಾಡ, ಗುರುಬಾಳಯ್ಯ ಸ್ವಾಮಿ ಪಾಲ್ಗೊಂಡಿದರು.
ರುದ್ರಾಭಿಷೇಕ, ಭಕ್ತಿಗೀತೆ: ಸಂಗಮೇಶ ಗವಾಯಿ, ಅಶೋಕಕುಮಾರ ಮನಗುಳಿ, ಅಶೋಕ ಆಳಂದ, ನೂರುದ್ದಿನ್ ಬೈಲಹೊಂಗಲ, ಬುಡ್ಡೇಸಾಬ್ ಜಮಖಂಡಿ ಇವರ ಶ್ರೀಗಳ ಕುರಿತಾದ ಭಕ್ತಿಗೀತೆಗಳು ಜನಮನ ಸೆಳೆದವು. ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನಸುಕಿನ ಜಾವ ಗುರು ಸಿದ್ಧರಾಮರ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ ಮತ್ತು ರುದ್ರಾಭಿಷೇಕ ನಡೆಸಿಕೊಟ್ಟರು. ಗುರುಪೂರ್ಣಿಮೆ ನಿಮಿತ್ತ ಭಕ್ತರು ಶ್ರೀಗಳಿಗೆ ಪಾದಪೂಜೆ, ಸುವರ್ಣ ಕಿರೀಟ ಧಾರಣೆ, ತುಲಾಭಾರ ನೆರವೇರಿಸಿದರು.

ಪೆದ್ದು ಮಠದಲ್ಲಿ ಗುರುವಂದನೆ
ಚಿತ್ತಾಪುರ: ಗುರುವಿನ ಸೇವೆ ಮಾಡಿ ಮುಕ್ತಿ ಪಡೆಯಬೇಕೆಂದು ದಿಗ್ಗಾಂವದ ಸಿದ್ದವೀರ ಶಿವಾಚಾರ್ಯರು ಹೇಳಿದರು.
ಸ್ಥಳೀಯ ಪೆದ್ದು ಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂಜೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನೀಲಯ್ಯ ಸ್ವಾಮಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಗುರುವಿನ ಸೇವೆ ಮಾಡಿದರೆ ಗುರು ಬಲ ಬರುತ್ತದೆ ಎಂದರು. ಬಸಯ್ಯಸ್ವಾಮಿ ಸಾತನೂರ, ಅಮಿನರಡ್ಡಿ ಅಲ್ಲೂರ ಕೆ., ವೆಂಕಟಮ್ಮ ಗುರುಪೂಜೆಯ ಮಹತ್ವ ಕುರಿತು ಮಾತನಾಡಿದರು. ನಂದಣ್ಣಗೌಡ ಅಲ್ಲೂರ್,  ಶರಬಸಪ್ಪ ಸಾತನೂರ, ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ದಿಗ್ಗಾಂವ ಶ್ರೀಗಳ ಪಾದಪೂಜೆ ಜರುಗಿತು. ಅಕ್ಕನ ಬಳಗದ ಮಹಿಳೆಯರು, ಸಹ್ರಾರು ಭಕ್ತರು ಪಾಲ್ಗೊಂಡಿದ್ದರು. ಮಂಜುನಾಥ ಜೈಗುರು ಸ್ವಾಗತಿಸಿದರು. ಶಿವಗಂಗಮ್ಮ ಬೈರಿ ಪ್ರಾರ್ಥನೆ ಗೀತೆ ಹಾಡಿದರು. ಚೆನ್ನಬಸಪ್ಪ ಕಲಂಬ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.