ಗುಲ್ಬರ್ಗಾ

ಹಸಿರೇ ಪ್ರಕೃತಿಯ ಸಂಪತ್ತು: ಭಾಸ್ಕರರಾವ್

Published On :

ಯಾದಗಿರಿ: ಹಸಿರು ಪ್ರಕೃತಿಯ ಸಂಪತ್ತು. ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಗಿಡಮರಗಳಿಲ್ಲದೇ ಏನೆಲ್ಲ ಅನಾಹುತಗಳು ನಡೆಯುತ್ತಿವೆ ಎಂಬುದನ್ನು ಅರಿತು ಇನ್ನು ಮುಂದಾದರೂ ಹಸಿರೀಕರಣಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕು ಎಂದು ನ್ಯಾಯವಾದಿ ಭಾಸ್ಕರರಾವ್ ಮೂಡಬೂಳ ಹೇಳಿದರು.
ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಗುರುವಾರ ಸಮೀಪದ ನಾಯ್ಕಲ್ ಗ್ರಾಮದ ಅಂಬೇಡ್ಕರ್ ನಗರ ಶಾಲೆಯಲ್ಲಿ ಆಯೋಜಿಸಿದ್ದ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು. ಗಿಡ ಮರಗಳನ್ನು ಬೆಳೆಸುವುದರಿಂದ ಪರಿಶುದ್ಧವಾದ ಗಾಳಿ ದೊರೆಯುತ್ತದೆ. ಹೆಚ್ಚಿನ ಗಿಡಮರಗಳಿಂದ ಆಕಾಶದಲ್ಲಿ ಮೋಡಗಳನ್ನು ಆಕರ್ಷಿಸುವ ಮೂಲಕ ಮಳೆ ಸುರಿಯುತ್ತದೆ. ಇದರಿಂದ ವಾತಾರಣವರದಲ್ಲಿ ತೇವಾಂಶ ಹೆಚ್ಚಿ ಕೃಷಿಗೂ ಅನುಕೂಲವಾಗುತ್ತದೆ. ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಗಿಡಮಗರಗಳನ್ನು ಬೆಳೆಸಬೇಕು. ಪ್ರಕೃತಿಯನ್ನು ನಾವು ಆರಾಧನೆ ಮಾಡಬೇಕು. ಭಗವಂತ ನೀಡಿದ ಉಚಿತ ಕೊಡುಗೆಯಾದ ಪ್ರಕೃತಿ ಸಂಪತ್ತುನ್ನು ಹಾಳು ಮಾಡದೇ ಅದನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಪ್ರೋತ್ಸಾಹ ಅಗತ್ಯ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರಲ್ಲಿ ಸಂಸ್ಕಾರ ಬೆಳೆಸಬೇಕು. ಗಿಡಮರಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು. ಹರಿಸಿದ್ದರೆ ಮಾತ್ರ ನಾವು ಬದುಕುಳಿಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಗಿಡ ಮರ ಬೆಳೆಸುವ ಮೂಲಕ ಜಿಲ್ಲೆಯ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಅಪ್ಪಿಕೋ ಚಳವಳಿ: ಡಿಡಿಪಿಐ ರಾಮಾಂಜನೇಯ ಮಾತನಾಡಿದ, ಪರಿಸರ ರಕ್ಷಣೆಗಾಗಿ ಸುಂದರಲಾಲ ಬಹುಗಣ ಅವರು ಅಪ್ಪಿಕೋ ಚಳವಳಿ ನಡೆಸಿದ ಬಗ್ಗೆ ವಿವರಿಸಿದರು. ಅರಣ್ಯ ನಾಶಪಡಿಸದಂತೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಮನೆಯ ನಿರ್ಮಾಣ ಸಮಯದಲ್ಲಿ ಸುತ್ತಮುತ್ತ ಗಿಡಮರಗಳನ್ನು ನೆಡಬೇಕು. ಆದರೆ ಇಂದು ಕೈಗಾರಿಕೆ, ನಗರೀಕರಣದಿಂದ ಅರಣ್ಯ ಸಂಪತ್ತು ಹಾಳಾಗುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ಮುಖಂಡ ಮಲ್ಲಿಕಾರ್ಜುನ ಅನಕಸೂಗುರು, ಎಎಸ್‌ಐ ಕೃಷ್ಣ ಸುಬೇದಾರ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ದೌಲತ್ ಹುಸೇನ, ಲಕ್ಷ್ಮಣ ನಾಟೇಕಾರ್, ಎ.ವೈ. ಪದ್ಮಾಕರ್ ಮರಳಸಿದ್ಧ ಬೈರಳ್ಳಿ, ಜುಬೇದಾ ಬೇಗಂ, ಭೀಮರಾಯ ಸುಂಗಲಕರ್, ಭೀಮರಾಯ ತುಮಕೂರ, ಶರಣು ಉಡುಪಿ, ಭಾಗಪ್ಪ ಕಟ್ಟಿಮನಿ, ಅಲ್ಲಿಸಾಬ್ ಮುಜಾವರ್, ಸಿದ್ರಾಮ ಭಂಡಾರಿ, ಗಾಲಿಬ್, ಮರೆಪ್ಪ ಮದ್ಲಿ, ಮುಖ್ಯಗುರು ಅಶ್ಪಕ್ ಅಹ್ಮದ ಇತರರು ಇದ್ದರು.
ಶಂಕ್ರಪ್ಪ ಸ್ವಾಗತಿಸಿದರು, ಭೀಮರಾಯ ಸುಂಗಲ್ಕರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.