ಗುಲ್ಬರ್ಗಾ

ಇಂದು ಕಂಬಾರ ಬರ್ತಾರ್ರಿ: ಮಹಿಪಾಲರೆಡ್ಡಿ

Published On :

ಗುಲ್ಬರ್ಗ: ಸಾಹಿತಿ ಚಂದ್ರಶೇಖರ ಕಂಬಾರರ ಗುಲ್ಬರ್ಗಕ್ಕೆ ಜು.27ರಂದು ಬಂದೇ ಬರುತ್ತಾರೆ. ಯಾವುದೇ ಕಾರಣಕ್ಕೂ ಅವರ ಭೇಟಿ ಮುಂದೆ ಹೋಗುವುದಾಗಲಿ, ರದ್ದಾಗುವುದಾಗಲಿ ಆಗದು ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸ್ಪಷ್ಪಪಡಿಸಿದ್ದಾರೆ. ಜು.27ರಂದು ದಾವಣಗೆರೆಯಲ್ಲಿ ವಿವಿ ಘಟಿಕೋತ್ಸವವಿದ್ದು, ಕಂಬಾರರು ದಾವಣಗೆರೆಗೆ ಹೋಗುವರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದರಿಂದ ಗುಲ್ಬರ್ಗ ಸಾಹಿತ್ಯಾಸಕ್ತರಲ್ಲಿ ಗೊಂದಲ ಮೂಡಿದೆ. ಆದರೆ ಕಂಬಾರರು ಗುಲ್ಬರ್ಗ ಭೇಟಿ ಮುಂದೆ ಹಾಕಲಾಗದು ಎಂದಿದ್ದಾರೆ. ಗೌರವ ಡಾಕ್ಟರೇಟ್ ಪದವಿಯನ್ನೇ ನಂತರದ ದಿನಗಳಲ್ಲಿ ಸ್ವೀಕರಿಸುವ ನಿರ್ಧಾರ ಮಾಡಿದ್ದಾರೆ. ಕಂಬಾರರ ಜುಲೈ 27ರ ಗುಲ್ಬರ್ಗ ಕಾರ್ಯಕ್ರಮಗಳು ಎಂದಿನಂತೆ ನೆರವೇರುತ್ತವೆ ಎಂದು ಕಸಾಪ ಅಧ್ಯಕ್ಷ ಮುನ್ನೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.