ಗುಲ್ಬರ್ಗಾ

ಚರಂತೇಶ್ವರ ಶ್ರೀಗಳಿಂದ ತಪೋನುಷ್ಠಾನ

Published On :

ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಸಮೀಪದ ತೊನಸನಳ್ಳಿ(ಎಸ್) ಗ್ರಾಮದ ಮೂಲ ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಲೋಕ ಕಲ್ಯಾಣಾರ್ಥವಾಗಿ ಬುಧವಾರ ಸಂಜೆಯಿಂದ 48 ದಿನಗಳ ಕಾಲ ತಪೋನುಷ್ಠಾನವನ್ನು ಆರಂಭಿಸಿದ್ದಾರೆ.
ಜು.24ರಿಂದ ಪ್ರಾರಂಭವಾದ ಅನುಷ್ಠಾನ ಸೆ.9ರವರೆಗೆ ನಡೆದು, ಮಂಗಲಗೊಳ್ಳಲಿದೆ ಎಂದು ಮಠದ ಪ್ರಕಟಣೆ ತಿಳಿಸಿದ್ದು, ಪ್ರತಿ ದಿನ ಸಂಗಮೇಶ್ವರ ಕರ್ತೃ ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ ಹಾಗೂ ಸಂಗಮೇಶ್ವರ ಅಕ್ಕನ ಬಳಗ, ಬಸವೇಶ್ವರ ಅಕ್ಕನ ಬಳಗದ ವತಿಯಿಂದ ಭಜನೆ ನಡೆಯಿತು.
ಮಠದ ಭಕ್ತರಾದ ಅನೀಲಕುಮಾರ್ ಮರಗೋಳ, ಶಿವಶರಣಪ್ಪ ಮಾಲಿಪಾಟೀಲ್, ಮಲ್ಲಿಕಾರ್ಜುನ ಗೊಳೇದ್, ಸಂಗುಗೌಡ ರಾಮಶೆಟ್ಟಿ, ಶರಣಪ್ಪ ಇಂಗಿನ, ಮಲ್ಲಿಕಾರ್ಜುನ ಬಂದಳ್ಳಿ ಸೇರಿದಂತೆ ಅಪಾರ ಭಕ್ತರು ಅನುಷ್ಠಾನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಾದ ಪಡೆದರು.
ಆದಿಶೇಷಶ್ರೀ ಅನುಷ್ಠಾನ: ನಾಲವಾರ ಗ್ರಾಮದ ಆದಿಶೇಷ ಮಠದ ಚಂದ್ರಶೇಖರ ಸ್ವಾಮೀಜಿ ಪ್ರತಿ ವರ್ಷದಂತೆ ಗುರು ಪೂರ್ಣಿಮೆಯ ದಿನದಿಂದ ತಮ್ಮ 42ನೇ ಅನುಷ್ಠಾನವನ್ನು ಪ್ರಾರಂಭಿಸಿದರು.
21 ದಿನ ನಡೆಯುವ ಉಪವಾಸ ಅನುಷ್ಠಾನ ನಾಗರ ಪಂಚಮಿಯ ದಿನದಂದು ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗದಿಂದ ಭಕ್ತರ ಸಮೂಹದೊಂದಿಗೆ ಹಾವಿನ ಹುತ್ತಕ್ಕೆ ಹಾಲು ಎರೆಯುವುದರೊಂದಿಗೆ ಅನುಷ್ಠಾನ ಮಂಗಳಗೊಳ್ಳುವುದು ಎಂದು ಮಠದ ಯುವರಾಜ ಸ್ವಾಮಿ ಜಾಗೀರದಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.