ಗುಲ್ಬರ್ಗಾ

ಸಮೂಹ ಶಿಲ್ಪಕಲಾ ಶಿಬಿರಕ್ಕೆ ಚಾಲನೆ

Published On :

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್‌ನ್ನು ಕಲಾತ್ಮಕಗೊಳಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗವು ಜು.25 ರಿಂದ ಆ.18 ರವರೆಗೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಮೂಹ ಶಿಲ್ಪಕಲಾ ಶಿಬಿರಯನ್ನು ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಸಿದ ಸುಮಾರು 20ಜನ ಶಿಲ್ಪಕಲಾವಿದರು ಮತ್ತು ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು, ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕರು ಸೇರಿ ಈ 25 ದಿನದ ಶಿಬಿರದಲ್ಲಿ ಆನೆ, ಜಿರಾಫೆ, ಡೈನೋಸಾರಸ್ ಮತ್ತು ನವಿಲುಗಳ ಶಿಲ್ಪವನ್ನು ಸಿಮೆಂಟ್ ಮತ್ತು ಫೈಬರ್ ಮಾಧ್ಯಮದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪ್ರತಿ ವರ್ಷ ಹಲವಾರು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ  ಪ್ರವಾಸಕ್ಕೆ ಬಂದು ಕೇವಲ ಗ್ರಂಥಾಲಯವನ್ನು ಮಾತ್ರ ನೋಡಿಕೊಂಡು ಹೋಗುತ್ತಿದ್ದರು. ಈಗ ಶೈಕ್ಷಣಿಕ ಪ್ರವಾಸಕ್ಕೆ ಬರುವ ಈ ಭಾಗದ ವಿದ್ಯಾರ್ಥಿಗಳು ಬೃಹತ್ ಗಾತ್ರದ ಶಿಲ್ಪಗಳನ್ನು ವೀಕ್ಷಿಸಿ ಖುಷಿ ಪಡೆಯಬಹುದಾಗಿದೆ ಎಂದರು. ವಿವಿ ಕುಲಸಚಿವ ಪ್ರೊ. ದಯಾನಂದ ಅಗಸರ್, ದೃಶ್ಯಕಲಾ ವಿಭಾಗದ ಸಂಯೋಜನಾಧಿಕಾರಿಗಳಾದ ಡಾ. ಪಿ.ಕೆ. ಖಂಡೋಬಾ, ಸುಶೀಲಾ ಈ.ಟಿ. ಪುಟ್ಟಯ್ಯ ಮತ್ತು ಶಿಬಿರದ ಸಂಚಾಲಕ ಶಿಲ್ಪಕಲಾವಿದರಾದ ಬಾಬುರಾವ.ಎಚ್ ಮತ್ತು ಸಹ ಸಂಚಾಲಕರಾದ ಡಾ. ಪರಶುರಾಮ ಪಿ, ಡಾ. ಕಾಶಿನಾಥ ಡಿ. ಹಾಗೂ ದೃಶ್ಯಕಲಾ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.