ಬುದ್ಧ ವಿಹಾರ ರಸ್ತೆ ಸುಧಾರಣೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಸುರಪುರ ಜೂ.1
ಇಲ್ಲಿಯ ಬುದ್ಧ ವಿಹಾರಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೂಡಲೇ ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಬುದ್ಧವಿಹಾರಕ್ಕೆ ಹೋಗುವ ರಸ್ತೆ ಹಲವಾರು ವಾರ್ಡುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೂ ಇದೇ ರಸ್ತೆ. ದಿನ ಬೆಳಗಾದರೆ ನೂರಾರು ಜನರು ಹೊಸಬಾವಿಗೆ ನೀರು ತರಲು ಹೋಗುತ್ತಾರೆ. ಆದರೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದರಿಂದ ಮಹಿಳೆಯರು, ಮಕ್ಕಳು ನೀರು ತರಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸುಧಾರಣೆಗಾಗಿ ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ- ದೂರು: ಬುದ್ಧ ವಿಹಾರ ಹಾಗೂ ದಲಿತ ಜನರ ಬಡಾವಣೆಗೆ ಹೋಗುವ ರಸ್ತೆಯಾಗಿರುವುದರಿಂದ ಪುರಸಭೆಯವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ದಲಿತರು ಮತ್ತು ಇನ್ನಿತರರು ರಸ್ತೆ ಇಲ್ಲದೆ ಪರದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಸ್ತೆ ನಿರ್ಮಾಣವಾದಾಗಿನಿಂದಲೂ ಇದುವರೆಗೂ ದುರಸ್ತಿ ಕೈಗೊಂಡಿಲ್ಲ. ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದ್ದಾರೆ.
ದೇವರು ವರ ಕೊಟ್ಟರೂ..: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಜುಗೌಡ ತಮ್ಮ ಅಧಿಕಾರವದಿಯಲ್ಲಿ ಕಾಳಜಿ ವಹಿಸಿ ಶಾಸಕರ ಅನುದಾನದಲ್ಲಿ ರಸ್ತೆ ಸುಧಾರಣೆಗಾಗಿ ಅನುದಾನ ಒದಗಿಸಿದ್ದರು. ದೇವರು ವರ ಕೊಟ್ಟರೆ ಪೂಜಾರಿ ಕೊಡಲಿಲ್ಲ ಎಂಬಂತೆ ಅಧಿಕಾರಿಗಳ ತಾರತಮ್ಯ ನೀತಿ ಹಾಗೂ ನಿರ್ಲಕ್ಷ್ಯದಿಂದ ಇದುವರೆಗೂ ರಸ್ತೆ ಸುಧಾರಣೆ ಕಾಣುತ್ತಿಲ್ಲ. ಈಗ ಮಳೆಗಾಲ ಆರಂಭವಾಗಿದೆ. ಇಳಿಜಾರು ಪ್ರದೇಶವಾಗಿರುವುದರಿಂದ ಮಳೆ ನೀರಿನ ರಭಸಕ್ಕೆ ಇರುವಷ್ಟು ರಸ್ತೆ ಸಂಪೂರ್ಣ ಕಿತ್ತು ಹೋಗುವ ಸಾಧ್ಯತೆ ಇದೆ. ಕಾರಣ ಕೂಡಲೇ ಸಿಸಿ ರಸ್ತೆ ಮತ್ತು ಎರಡು ಬದಿಗಳಲ್ಲಿ ತಡಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದೆ.
ಬೀಗಮುದ್ರೆ ಎಚ್ಚರಿಕೆ: ವಿಳಂಬ ನೀತಿ ಅನುಸರಿಸಿದಲ್ಲಿ ಸಂಘಟನೆಯಿಂದ ಕಾರ್ಯಲಯಕ್ಕೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆಂದು ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಡುನ ಕ್ರಾಂತಿ, ಸಂಘಟನಾ ಸಂಚಾಲಕ ಶರಣಪ್ಪ ದಖನಿ ಪುರಸಭೆ ಮುಖ್ಯಾಧಿಕಾರಿಗೆ ಬರೆದ ಮನವಿಯಲ್ಲಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

