ಗುಲ್ಬರ್ಗಾ

ಅನ್ಯ ಭಾಷೆಯಲ್ಲಿ ಪ್ರಮಾಣ ವಚನ, ಕರವೇ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಜೂ.2
ವಿಧಾನಸಭೆಯ ಕೆಲವು ನೂತನ ಶಾಸಕರು ಕನ್ನಡವನ್ನು ಮರೆತು ಅನ್ಯ ಭಾಷೆಯಲ್ಲಿ ಪ್ರಮಾಣ ವಚನ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕವು ತೀವ್ರವಾಗಿ ಖಂಡಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ನಾಯಕ ಬಿಜಾಸ್ಪೂರ ಮಾತನಾಡಿ, ಕನ್ನಡ ನಾಡಿನ ಅನ್ನ, ನೀರು ಸೇವಿಸಿ ಇಲ್ಲಿಯ ಜನರಿಂದಲೇ ಆಯ್ಕೆಯಾಗಿ ಅಧಿಕಾರ ಪಡೆದ ಕೆಲ ಶಾಸಕರು ತಾಯಿ ಭಾಷೆಯನ್ನು ಮರೆತು ಅನ್ಯ ಭಾಷೆಯಲ್ಲಿ ಪ್ರಮಾಣ ವಚನ ಮಾಡಿದ್ದು ಮಾತೃ ಭಾಷೆಗೆ ಅವಮಾನ ಮಾಡಲಾಗಿದೆ. ಇದು 6 ಕೋಟಿ ಕನ್ನಡಿಗರಿಗೆ ದ್ರೋಹ ಬಗೆದಂತಾಗಿದೆ ಎಂದು ಆರೋಪಿಸಿದರು.
ಬೇಲಿಯೇ ಎದ್ದು ಹೊಲ ಮೇಯ್ದಂತೆ: ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ಕೆಲ ಶಾಸಕರು ಕನ್ನಡವನ್ನು ಮರೆತು ಅನ್ಯಭಾಷೆಯ ಮೋಹ ತೋರುತ್ತಿರುವುದು ನಾಚಿಕೆಗೇಡಿನ ಪ್ರಸಂಗ. ನಾಡಿನ ನೆಲ- ಜಲ, ಭಾಷೆ ಸಂರಕ್ಷಣೆಯ ಜವಾಬ್ದಾರಿ ಸ್ಥಾನದಲ್ಲಿರುವ ಶಾಸನ ಸಭೆಯ ಸದಸ್ಯರೇ ಈ ರೀತಿ ದಾರಿ ತಪ್ಪಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದರು.
ಕ್ಷಮೆಯಾಚಿಸದಿದ್ರೆ ಉಗ್ರ ಹೋರಾಟ: ಕೂಡಲೇ ಅನ್ಯ ಭಾಷೆಯಲ್ಲಿ ಪ್ರಮಾಣವಚನ ಮಾಡಿದ ಶಾಸಕರು ರಾಜ್ಯದ ಜನತೆಗೆ ಮುಕ್ತವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮೊಹ್ಮದ್ ಗೌಸುದ್ದೀನ್ ಅವರಿಗೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.