ಪಪಂ ವಾಣಿಜ್ಯ ಸಂಕೀರ್ಣ ಈಗ ಶೌಚಾಲಯ!
ಅಫಜಲ್ಪುರ: ಪಟ್ಟಣದಲ್ಲಿ ಸುಮಾರು 3 ವರ್ಷಗಳ ಹಿಂದೆ 30 ಲಕ್ಷ ವೆಚ್ಚ ಮಾಡಿ ಪಟ್ಟಣ ಪಂಚಾಯ್ತಿ ವತಿಯಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಆದರೆ ಅದು ಬಳಕೆಗೆ ಬಾರದೆ ಹಾಳಾಗುತ್ತಿದೆ. ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಈ ವಾಣಿಜ್ಯ ಸಂಕೀರ್ಣವನ್ನು ಕಟ್ಟಲಾಗಿದೆ. ಆದರೆ ನಂತರ ಪಟ್ಟಣ ಪಂಚಾಯ್ತಿಯವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಟ್ಟಡದ ಮುಂದೆ ಗಿಡಗಂಟೆಗಳು ಬೆಳೆದಿವೆ. ಇದನ್ನು ಶೌಚಾಲಯ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ. ಪಟ್ಟಣ ಪಂಚಾಯ್ತಿಯವರು ತಲಾ 8 ಲಕ್ಷ ವೆಚ್ಚದಲ್ಲಿ 8 ಹೈಟೆಕ್ ಮಹಿಳಾ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಈ ಶೌಚಾಲಯಗಳು ಸೂಕ್ತ ನಿರ್ವಹಣೆಯಿಲ್ಲದೆ ಬಳಕೆಗೆ ಬಾರದಂತಾಗಿವೆ. ಮಹಿಳೆಯರು ಶೌಚಾಯಲಯಕ್ಕಾಗಿ ಪರದಾಡುವಂತಾಗಿದೆ. ಮಹಿಳೆಯರ ಶೌಚಾಲಯದ ವ್ಯವಸ್ಥೆಯ ಬಗ್ಗೆ ಪಪಂ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯ: ಆರೋಪ
ಅಫಜಲ್ಪುರ: ಪಟ್ಟಣ ಪಂಚಾಯತಿಗೆ ಸರ್ಕಾರದಿಂದ ಕೋಟ್ಯಾಂತರ ರು. ಹಣ ಹರಿದು ಬಂದರು ಪೂರಕವಾಗಿ ಅಭಿವೃದ್ಧಿಯಾಗದೆ, ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಚರಂಡಿ ನೀರು ನಿಂತು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಪಟ್ಟಣ ಪಂಚಾಯತಿ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಳೆದ ಮೂರು- ನಾಲ್ಕು ವರ್ಷಗಳಿಂದ ಪಟ್ಟಣ ಪಂಚಾಯತಿಗೆ ಕೋಟ್ಯಾಂತರ ರು. ಅನುದಾನ ಹರಿದು ಬಂದಿದೆ. ಹೊಸ ಹಾಗೂ ಹಳೆಯ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣವಾಗಿವೆ. ಆದರೆ ಚರಂಡಿ ಸ್ವಚ್ಛತೆಯಿಲ್ಲ. ಪಟ್ಟಣದ ವಿವಿಧ ವಾರ್ಡ್ಗಳಿಂದ ನಾಗರಿಕರು ತಮ್ಮ ವಾರ್ಡ್ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೂಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೋಹರ ನೇಮಕ
ಗುಲ್ಬರ್ಗ: ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸರ್ವಾನುಮತದಿಂದ ಮನೋಹರ ತಾಳಮಡಗಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಎಂ. ಸರಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಶೆಟ್ಟಿ ನಿಧನ
ಚಿಂಚೋಳಿ: ಪಟ್ಟಣದ ವೀರಶೆಟ್ಟಿ ಕೋರೆಪ್ಪ ಎದಲ್(58) ಅವರು ಅನಾರೋಗ್ಯದಿಂದ ಬಳಲಿ ಭಾನುವಾರ ನಿಧನರಾಗಿದ್ದಾರೆ. ಮೃತರು 4 ಗಂಡು ಮತ್ತು ಒಬ್ಬ ಹೆಣ್ಣು ಮಗಳು ಮತ್ತು ಹೆಂಡತಿಯನ್ನು ಅಗಲಿದ್ದಾರೆ. ಎಂಎಸ್ಸಿ ಪಧವೀಧರರಾಗಿದ್ದ ಇವರು ಆದರ್ಶ ಕೋಚಿಂಗ್ ಕ್ಲಾಸ್ ನಡೆಸಿ ಬಡ ವರ್ಗದ ಮಕ್ಕಳಿಗೆ ಉಚಿತವಾದ ಶಿಕ್ಷಣ ನೀಡಿದ್ದರು. ಸೋಮವಾರ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಧ್ಯಾಹ್ನ ನೆರವೇರಿತು. ಮೃತರ ನಿಧನಕ್ಕೆ ಎಪಿಎಂಸಿ ನಿರ್ದೇಶಕ ಮಲ್ಲಿನಾಥ ಕೋಡ್ಲಿ, ಪತ್ರಕರ್ತ ಶಾಮರಾವ ಚಿಂಚೋಳಿ, ಉಪನ್ಯಾಸಕರಾದ ಶಾಂತವೀರ ಹೀರಾಪುರ, ಮಲ್ಲಿಕಾರ್ಜುನ ಕೇಶ್ವರ, ರಾಮರಾವ ಶೋಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

