ಗುಲ್ಬರ್ಗಾ

ಆಳಂದ ಮಳೆ; ಸಿಡಿಲಿಗೆ 3 ಎತ್ತು, 4 ಕುರಿ ಬಲಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.5
ಆಳಂದ ತಾಲೂಕಿನ ವಿವಿಧೆಡೆ ಮಂಗಳವಾರ ಗುಡುಗು, ಮಿಂಚಿನ ಸಮೇತ ಮಳೆಯಾಗಿದೆ. ಸೋಮವಾರ ರಾತ್ರಿ ಸಿಡಿಲಿನ ಆರ್ಭಟಕ್ಕೆ 3 ಎತ್ತು ಹಾಗೂ 4 ಕುರಿಗಳು ಸಾವನ್ನಪ್ಪಿರುವುದು ವರದಿಯಾಗಿದೆ.
ತಾಲೂಕಿನ ಗುಂಜ ಬಬಲಾದ ಗ್ರಾಮದ ಗಂಗಾಧರಯ್ಯ ಸ್ವಾಮಿ ಅವರ 60 ಸಾವಿರ ಮೌಲ್ಯದ ಒಂದು ಎತ್ತು ಹಾಗೂ ಕಲಘಟಗಾ ಗ್ರಾಮದ ಬಸವಣ್ಣಪ್ಪ ಬಿರಾದಾರ ಅವರ ಎರಡು ಎತ್ತುಗಳು ಬಲಿಯಾಗಿವೆ.
ಚಿಂಚನಸೂರ ಗ್ರಾಮದ ಉಸ್ಮಾನಸಾಬ್ ಯಲಗಾರ ಅವರ ನಾಲ್ಕು ಕುರಿಗಳು ಸಾವನ್ನಪ್ಪಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಳೆಯ ಮನೆಗಳ ಗೋಡೆ ಕುಸಿದು ಬಿದ್ದಿವೆ. ಕೆಲವು ಕಡೆ ತಗಡಿನ ಹೆಂಚುಗಳು ಗಾಳಿಗೆ ಹಾರಿಹೋಗಿವೆ ಎಂದು ನರೋಣಾ ವಲಯದ ಕಂದಾಯ ನಿರೀಕ್ಷಕ ಸೂರ್ಯಕಾಂತ ಘಸನೆ ತಿಳಿಸಿದ್ದಾರೆ.
ಕಡಗಂಚಿ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಹಳ್ಳ-ಕೊಳ್ಳ, ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಷ್ಟೊಂದು ರಭಸದ ಮಳೆ ಬಂದಿರಲಿಲ್ಲ ಎಂದು ಗ್ರಾಮದ ಹಿರಿಯರು ಹೇಳುತ್ತಿದ್ದಾರೆ. ಈ ಮಳೆಯಿಂದಾಗಿ ಸರ್ಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲಾ ಆವರಣ ನೀರಿನಿಂದ ಕೂಡಿತ್ತು.
ಮಳೆ ವಿವರ: ಸೋಮವಾರ ರಾತ್ರಿ ಬಿರುಸಿನಿಂದ ಕೂಡಿದ ಭಾರಿ ಮಳೆಯಾಗಿದೆ. ಆಳಂದ- 39.4 ಮಿ.ಮೀ., ಖಜೂರಿ- 2.4 ಮಿ.ಮೀ., ನರೋಣಾ- 10.2 ಮಿ.ಮೀ., ನಿಂಬರ್ಗಾ- 6.0 ಮಿ.ಮೀ., ಮಾದನಹಿಪ್ಪರಗಾ- 5.1 ಮಿ.ಮೀ. ಹಾಗೂ ಕೋರಳ್ಳಿ- 6.6 ಮಿ.ಮೀ.ರಷ್ಟು ಮಳೆಯಾಗಿರುವುದು ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ.
ಡೊನೇಷನ್ ಹಾವಳಿ ತಡೆಗೆ ಆಗ್ರಹ
ಗುಲ್ಬರ್ಗ: ಜಿಲ್ಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ಸಂಸ್ಥೆಗಳು ಪ್ರವೇಶದ ವೇಳೆ ಡೊನೇಷನ್ ವಸೂಲಿ ತಕ್ಷಣ ತಡೆಯಬೇಕೆಂದು ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ ಗುಲ್ಬರ್ಗ ಜಿಲ್ಲಾ ಘಟಕ ಆಗ್ರಹಿಸಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾವಹಿಸಿ ಕಡಿವಾಣ ಹಾಕಬೇಕು. ಎಲ್ಲ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಡೆಯುವ ಶುಲ್ಕಕ್ಕೆ ಕಡಿವಾಣ ಹಾಕಬೇಕು. ಕಡು ಬಡವರು ದಿನ ನಿತ್ಯ ಕೂಲಿ ಕೆಲಸ ಮಾಡಿ ಬದುಕುವ ಜನರ ಮಕ್ಕಳಿಗೆ ಇದು ಬಹಳ ಕಷ್ಟದ ಮಾತಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.