ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

12ರಂದು ಮಾಜಿ ಸೈನಿಕರ ಸಮಾವೇಶ
ಗುಲ್ಬರ್ಗ: ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ, ಬೆಳಗಾವಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಕುಂದುಕೊರತೆಗಳ ಸಮಾವೇಶವನ್ನು ಜೂ.12ರಂದು ಗುಲ್ಬರ್ಗ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಬೆಂಗಳೂರಿನ ಬ್ರ್ಯಾಂಚ್ ರಿಕ್ರೂಮೆಂಟ್ ಕಚೇರಿ ಹಿರಿಯ ಸೇನಾಧಿಕಾರಿಗಳು ಭಾಗವಹಿಸಲಿದ್ದಾರೆ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ತಿಳಿಸುವಂತೆ ಗುಲ್ಬರ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೇವರ್ಗಿಯಲ್ಲಿ ಬಿಜೆಪಿ ಪ್ರಚಾರ...
ಗುಲ್ಬರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿ ತಿಂಗಳಾಗುತ್ತ ಬಂದರೂ ಜೇವರ್ಗಿಯ ಮನಿ ವಿಧಾನಸೌಧ ಮುಂದೆ ಇನ್ನೂ ಬಿಜೆಪಿ ಸರ್ಕಾರದಲ್ಲಿನ ಸಿಎಂ, ಡೆಪ್ಯೂಟಿ ಸಿಎಂ ಫೋಟೋಗಳಿರುವ ಸರ್ಕಾರಿ ಜಾಹೀರಾತು ಫಲಕವೇ ರಾರಾಜಿಸುತ್ತಿದೆ. ಕಂದಾಯ ಇಲಾಖೆಯ ಈ ಜಾಹೀರಾತು ಫಲಕ ಸರ್ಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧ ಆವರಣ ಗೋಡೆಗೇ ಇದ್ದರೂ ಅಲ್ಲಿನ ಕಾಂಗ್ರೆಸ್ ಶಾಸಕ ಡಾ. ಅಜಯ್‌ಸಿಂಗ್, ತಾಲೂಕು ಆಡಳಿತಕ್ಕಾಗಲಿ ಕಂಡಿಲ್ಲವೆ ಎಂಬುದೇ ಈಗಿನ ಪ್ರಶ್ನೆ. ಹೊಸ ಸರ್ಕಾರ ಬಂದಾಕ್ಷಣ ಪ್ರಚಾರ ಫಲಕಗಳನ್ನು ಬದಲಿಸುವುದು ತಕ್ಷಣ ನಡೆಯುವ ಕೆಲಸವಾದರೂ ಜೇವರ್ಗಿಯಲ್ಯಾಕೋ ಈ ಕೆಲಸ ಇನ್ನೂ ಶುರುವಾದಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.