ಮೋಸ ಮಾಡುವುದರಲ್ಲಿ ಕಾಂಗ್ರೆಸ್ ನಂ.1
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜೂ.9
ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಕಾರ್ಯಕರ್ತರು ಎದೆಗುಂದಬೇಡಿ. ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಮುಂದೆ ಬಿಜೆಪಿ ಪಕ್ಷ ಬೆಳವಣಿಗೆಗೆ ಹಾಗೂ ಕಾರ್ಯಕರ್ತರ ಕೆಲಸಗಳಿಗೆ ನಾನಿದ್ದೇನೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋಲಿಗಾಗಿ ಕುರಿತು ಆತ್ಮಾವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರಕ್ಕೆ ಕೋಟಿ ಗಟ್ಟಲೇ ಅನುದಾನ ಬಿಜೆಪಿ ಸರ್ಕಾರ ಕಲ್ಪಿಸಿದೆ ಎಂದರು.
ಆಮಿಷದ ಗೆಲವು: ಹಣ, ಹೆಂಡ ಹಂಚುವ ಮೂಲಕ ಕಾಂಗ್ರೆಸ್ ಇಲ್ಲಿ ಗೆಲವು ಸಾಧಿಸಿದೆ. ಆಮಿಷಗಳು ತೋರಿಸುವ ಮೂಲಕ ಕೆಲ ಬಿಜೆಪಿಯ ಕಾರ್ಯಕರ್ತರನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಮೋಸ ಮಾಡುವುದರಲ್ಲಿ ಕಾಂಗ್ರೆಸ್ ನಂ. 1 ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರ ಭಯದಿಂದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಅನ್ಯ ಮಾರ್ಗದಿಂದ ಕಾಂಗ್ರೆಸ್ ಗೆಲವು ಸಾಧಿಸಿದೆ ಎಂದು ಆರೋಪಿಸಿದರು.
ದ್ರೋಹ ಬಗೆದಿಲ್ಲ: ಕೆಜೆಪಿ ಹಾಗೂ ಇತರ ಪಕ್ಷಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ತಾಯಿಗೆ ದ್ರೋಹ ಮಾಡಿದಂತೆ. ನಾನು ಪಕ್ಷಕ್ಕೆ ಎಂದು ದ್ರೋಹ ಬಗೆದಿಲ್ಲ. ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ದ್ರೋಹ ಮಾಡುವವರು ಪಕ್ಷಕ್ಕೆ ಬೇಡ. ಕಾರ್ಯಕರ್ತರು ಸಂಘಟಿತರಾಗಿ ಒಗ್ಗಟ್ಟಾಗಿ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಜನಪರ ಹೋರಾಟ ಮಾಡಲು ಪ್ರಯತ್ನಿಸೋಣ ಎಂದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ಸೋಲಿಗೆ ಬೇರೆಯವರ ಹೆಗಲಿಗೆ ಹಾಕುವುದು ಬೇಡ. ಸೋಲಿಗೆ ದೈವವೇ ಕಾರಣ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಚಂದ್ರಶೇಖರ ದಿಗ್ಗಾಂವಕರ್, ತಮ್ಮಣ್ಣ ಡಿಗ್ಗಿ, ಬಸವರಾಜ ಪಂಚಾಳ, ಕಲ್ಯಾಣರಾವ ಪಾಟೀಲ್ ಮಾತನಾಡಿದರು.
ತಾಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಪುರಸಭೆ ಸದಸ್ಯರಾದ ಸುರೇಶ ಬೆನಕನಹಳ್ಳಿ, ದಶರಥ ದೊಡ್ಮನಿ, ಮುಖಂಡರಾದ ಶಶಿಕಾಂತ ಪಾಟೀಲ್, ಮಲ್ಲಿಕಾರ್ಜುನ ಎಮ್ಮನೋರ, ಬಾಲಾಜಿ ಬುರುಬುರೆ, ಗುರುನಾಥರೆಡ್ಡಿ ಕರದಾಳ, ಡಾ. ಮಹೇಂದ್ರ ಕೋರಿ, ಮಲ್ಲಿಕಾರ್ಜುನ ಬೋಮ್ಮ, ಶರಣು ಜ್ಯೋತಿ, ರಮೇಶ ಪಾಟೀಲ್, ಮಹೇಶ ಬಟಿಗೇರಿ, ಗುರುಬಸ್ಸಪ್ಪ ಗೌಡ ಸಾತನೂರ, ಚಂದ್ರು ಕಡೆಸೂರ ಇದ್ದರು. ಅಮರೇಶ ಸುಲೇಗಾಂವ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

