ಗೀತಾ-ಸಂಗೀತಾ ಕನಸಿಗೆ 'ಸರ್ವಜ್ಞ' ನೆರವು
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.9
ಮನೆಯಲ್ಲಿ ಬಡತನ, ಅಣ್ಣನಿಗೆ ಚಪ್ಪಲಿ ಹೊಲೆಯಲು ಸಹಾಯ ಮಾಡಿದರೆ ಕೈಯಲ್ಲಿ ಎರಡು ಕಾಸು. ಇಂತಹ ಕಷ್ಟದ ನಡುವೆ ವಿದ್ಯಾರ್ಥಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದಿದ್ದಾಳೆ. ಆದರೆ ಆಕೆಗೆ ಪಿಯು ಶಿಕ್ಷಣ ಮುಂದುವರಿಸುವುದು ಅಸಾಧ್ಯದ ಮಾತು.
ಇದು ಕಮಲಾಪುರ ಬಸ್ ನಿಲ್ದಾಣ ಎದುರು ಸಹೋದರ ರುಕ್ಮಣ್ಣನಿಗೆ ಚಪ್ಪಲಿ ಅಂಗಡಿಯಲ್ಲಿ ಸಹಾಯ ಮಾಡಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ಗೀತಾ ಲಕ್ಷ್ಮಣ ಅವರ ವಾಸ್ತವ ಸ್ಥಿತಿ. ಅಣ್ಣನಿಗೆ ತಂಗಿಯನ್ನು ಪಿಯು ವಿಜ್ಞಾನ ವಿಭಾಗದಲ್ಲಿ ಓದಿಸುವಾಸೆ. ಆದರೆ ಕೈಯಲ್ಲಿ ಕಾಲೇಜು ಶುಲ್ಕ ತುಂಬಲು ಹಣ ಇರದಿದ್ದಕ್ಕೆ ಸುಮ್ಮನಾಗಿದ್ದ. ಈ ವಿಷಯ ತಿಳಿದ ನಗರದ ಕಾಯಕ ಎಜ್ಯುಕೇಷನ್ ಟ್ರಸ್ಟ್‌ನ ಸರ್ವಜ್ಞ ವಿಜ್ಞಾನ ವಸತಿ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಕಮಲಾಪುರಕ್ಕೆ ತೆರಳಿ, ಗೀತಾ ಮನೆಗೆ ಭೇಟಿ ನೀಡಿ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಗೀತಾ ಪಿಯು ಓದಲು ಮುಂದಾಗಿದ್ದಾಳೆ. ತಂಗಿಗೆ ಪಿಯು ಓದಿಸಲಿಕ್ಕಾಗುತ್ತಿಲ್ಲ ಎಂದು ಚಿಂತಿತನಾಗಿದ್ದ ರುಕ್ಮಣ್ಣನಿಗೆ ಸರ್ವಜ್ಞ ಕಾಲೇಜಿನ ಸಹಾಯ ಹಸ್ತ ಸಂತೋಷ ಮೂಡಿಸಿದೆ.
ಹಾಲು ಮಾರು ಸಾಧನೆ: ಅದೇ ರೀತಿ ಚಿತ್ತಾಪುರ ಪಟ್ಟಣದಲ್ಲಿ ಹಾಲು ಮಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.94ರಷ್ಟು ಅಂಕ ಪಡೆದಿದ್ದ ಸಂಗೀತಾಗೆ ಅವರ ತಂದೆ ಪಿಯು ಓದಿಸಲು ಹಿಂದೇಟಿ ಹಾಕಿದ್ದರು. ಇದನ್ನು ಅರಿತ ಚೆನ್ನಾರೆಡ್ಡಿ ಪಾಟೀಲ್ ಅವರು ಚಿತ್ತಾಪುರ ಪಟ್ಟಣಕ್ಕೆ ತೆರಳಿ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯಲು ತಮ್ಮ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದರು.
ಈಗಾಗಲೇ ಸಂಗೀತಾಳ ಸಹೋದರ ರವೀಂದ್ರಕುಮಾರನಿಗೂ ಉಚಿತ ಪ್ರವೇಶ ನೀಡಲಾಗಿದೆ. ಅಲ್ಲದೇ ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ 857 ರ್ಯಾಂಕ್ ಪಡೆದಿದ್ದಾನೆ. “ÈÚßVÚ×Úß ಜಾಣೆ ಇದ್ದಾಳೆ ಶಿಕ್ಷಣ ಮುಂದುವರೆಸಲು ಮನಸ್ಸು ÈÚáÛt’ ಎಂದು ಪಾಟೀಲರು ವಿನಂತಿಸಿದ್ದರು. ಇದಕ್ಕೆ ಸಂಗೀತಾಳ ತಂದೆ ದೇವೀಂದ್ರಪ್ಪ ಪೂಜಾರಿ ಮಗಳ ಶಿಕ್ಷಣದ ಭಾರ ವಹಿಸಲು ತಮ್ಮಿಂದ ಸಾಧ್ಯವಿಲ್ಲ. ಮಗನಿಗೆ ಎಂಜಿನಿಯರಿಂಗ್ ಕಲಿಸಲು ಸಹಾಯ ಮಾಡಿ ಎಂದಿದ್ದರು. ಮಗನ ಎಂಜಿನಿಯರಿಂಗ್ ಶಿಕ್ಷಣಕ್ಕೂ ಸಹಾಯ ಮಾಡಲಾಗುತ್ತಿದೆ.
ಮಗಳನ್ನು ತಮ್ಮ ಕಾಲೇಜಿಗೆ ಕಳುಹಿಸಿ ಕೊಡಿ ಎಂದು ವಿನಂತಿಸಿದಾಗ ದೇವೇಂದ್ರಪ್ಪ ಒಪ್ಪಿದ್ದಾರೆ. ಈಗ ಸಂಗೀತಾ ಸರ್ವಜ್ಞ ವಿಜ್ಞಾನ ವಸತಿ ಪದವಿ ಪೂರ್ವ ಕಾಲೇಜಿಗೆ ಪಿಯು ಪ್ರಥಮ ವರ್ಗದ ಪ್ರವೇಶ ಪಡೆದು ಅಣ್ಣನಂತೆ ಸಾಧನೆ ಮಾಡಲು ಹೊರಟಿದ್ದಾಳೆ. ಇದಕ್ಕೆ ಕಾಯಕ ಎಜ್ಯುಕೇಷನ್ ಟ್ರಸ್ಟ್ ಕೈ ಜೋಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

