'ಪಕ್ಷಾತೀತವಾಗಿ ಜನಸೇವೆ ಮಾಡೋಣ'
ಕನ್ನಡಪ್ರಭ ವಾರ್ತೆ, ಆಳಂದ , ಜೂ.10
ರಾಜಕಾರಣ ಏನಿದ್ದರೂ ಚುನಾವಣೆಗೆ ಸೀಮಿತಗೊಳಿಸಿ. ಉಳಿದ ಹೊತ್ತಿನಲ್ಲಿ ಪಕ್ಷಾತೀತವಾಗಿ ಜನರ ಕೆಲಸ ಮಾಡೋಣ ಎಂದು ಶಾಸಕ ಬಿ.ಆರ್. ಪಾಟೀಲ್ ಅವರು ಚುನಾಯಿತ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜನರ ವೋಟ್ ಪಡೆದು ಆಯ್ಕೆಯಾದ ನಾವೆಲ್ಲರೂ ಸರ್ಕಾರದ ಯೋಜನೆ ಅನುಷ್ಠಾನ ಮತ್ತು ಸೌಲಭ್ಯ ಒದಗಿಸುವ ಜವಾಬ್ದಾರಿ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದರು.
ಜಿಪಂ.ಗೆ ಇರುವಷ್ಟು ಅಧಿಕಾರವನ್ನು ತಾಪಂ.ಗೆ ಸರ್ಕಾರ ಕೊಟ್ಟಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಷಯವಾಗಿದೆ. ತಾಪಂ.ಗೆ ಶಕ್ತಿ ತುಂಬಿ ಹೆಚ್ಚಿನ ಕೆಲಸ ಮಾಡಲು ಸಿದ್ಧವಾಗಿ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಜನ ಸೇವೆ ಮಾಡೋಣ ಎಂದು ಹೇಳಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಬಾಯಮ್ಮ ಮೋಹನಗೌಡ ಪಾಟೀಲ್, ಜೆಡಿಎಸ್ನ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಸದಸ್ಯ ಮಲ್ಲಣ್ಣ ನಾಗೂರೆ, ಮಲ್ಲಿನಾಥ ಜಮಾದಾರ, ಸಿಪಿಎಂ ಸದಸ್ಯ ಕಲ್ಲಪ್ಪ ಚಿಲ್ಲಿ, ಇಒ ಅಬ್ದುಲ್ ಸಲಾಂ ಸೇರಿದಂತೆ 23 ಕ್ಷೇತ್ರಗಳ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಹಾಜರಿದ್ದರು. ಇದಕ್ಕೂ ಮೊದಲು ಸದಸ್ಯರು ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ್, ವ್ಯವಸ್ಥಾಪಕ ಬಸವರಾಜ ಪಾಟೀಲ್, ಜಲಾನಯನ ಅಧಿಕಾರಿ ಮೋಮಿನ್, ಆರೋಗ್ಯಾಧಿಕಾರಿ ಸುಚಿತ್ರಾ ಬಿಲಗುಂದಿ, ಕಮಲಾಬಾಯಿ ತಮ್ಮನ್ ಇತರ ಅಧಿಕಾರಿಗಳು ವರದಿ ಮಂಡಿಸಿದರು.
--
ಸೇಡಂ; ಸಿಎಂ, ಸಚಿವ, ಶಾಸಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಸೇಡಂ, ಜೂ.10
ಕಾಂಗ್ರೆಸ್ ಸರ್ಕಾರದ ನೂತನ ಸಚಿವರಿಗೆ ಅಖಿಲ ಕರ್ನಾಟಕ ಭೋವಿ ಸಮಾಜದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಸಚಿವರಾದ ಖಮರುಲ್ ಇಸ್ಲಾಂ, ಸತೀಶ ಜಾರಕಿಹೊಳಿ, ಕೃಷ್ಣ ಭೈರೇಗೌಡ, ಶಾಸಕ ಪ್ರಿಯಾಂಕ್ ಖರ್ಗೆ, ದತ್ತಾತ್ರೇಯ ಪಾಟೀಲ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ಅಶೋಕ ಟಿ. ಮನೋಹರ, ಉಪಾಧ್ಯಕ್ಷ ಹುಚ್ಚಪ್ಪ ಭೋವಿ ನವಲಗುಂದ, ಖಜಾಂಚಿ ಶಿವರಾವ ಭೋವಿ ಸೇಡಂ, ಮಾರುತಿ ಭೋವಿ ಸೇರಿದಂತೆ 250ಕ್ಕೂ ಹೆಚ್ಚು ಸಮಾಜದ ಪದಾಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

