ಗುಲ್ಬರ್ಗಾ

ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Published On :

ಗುಲ್ಬರ್ಗ: ನಗರದ ದೊಡ್ಡಪ್ಪ ಅಪ್ಪ ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಪ್ರೊ. ರವೀಂದ್ರ ಪಾಟೀಲ್ ಮಾತನಾಡಿ, ಈ ಭೂಮಿಯ ಮೇಲೆ ನಾವು ಬಾಡಿಗೆಗೆ ಇದ್ದು, ಬದುಕಲು ಬಂದಿದ್ದೇವೆ. ಹಿಂದೆ ನಮ್ಮ ಪೂರ್ವಜರು ಇಲ್ಲಿ ವಾಸಿಸಿದ್ದರು. ಈಗ ನಾವಿದ್ದೇವೆ, ಮುಂದೆ ನಮ್ಮ ಸಂತಾನ ಇಲ್ಲಿ ವಾಸಿಸುತ್ತಾರೆ. ಹಾಗಾದರೆ ನಾವು ಇಲ್ಲಿರುವ ಸಂಪನ್ಮೂಲ ಶೋಷಣೆಯ ರೂಪದಲ್ಲಿ ಬಳಸಿದರೆ ಮುಂದೆ ಈ ಪ್ರಕೃತಿ ಉಳಿಯುವುದಿಲ್ಲ. ನಮ್ಮ ಸಂತಾನ ಹೇಗೆ ಬದುಕಬೇಕು. ಈ ಕುರಿತು ಚಿಂತನೆಯಾಗಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ರಾಮಕೃಷ್ಣರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಮತ್ತು ಸಂಗಡಿಗರ ಪ್ರಾರ್ಥನೆ ಗೀತೆ ಹಾಡಿದರು.ವಿದ್ಯಾರ್ಥಿಗಳಾದ ರೂಪಾಲಿ ಕುಮಾರ, ನಾಗರಾಜ ಬಿ, ರಾಜಶ್ರೀ ಜಿ.ಎಚ್ ಪರಿಸರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೂಜಾ ಕೆ.ಎಂ. ಸ್ವಾಗತಿಸಿದರು. ಅಕ್ಷಯ ಎನ್.ಜಿ. ಅತಿಥಿ ಪರಿಚಯ ಮಾಡಿಕೊಟ್ಟರು. ಶಶಿಕಲಾ  ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.