ಗುಲ್ಬರ್ಗಾ

ಪರೋಪಕಾರ ಗುಣ ಅಗತ್ಯ: ರುಕ್ಮಾಪುರಶ್ರೀ

Published On :

ಸುರಪುರ: ಉತ್ತಮ ಸಂಸ್ಕೃತಿ, ಸಂಸ್ಕಾರ ಹೊಂದಿದ ಪ್ರತಿಯೊಬ್ಬರು ಸೇವಾ ಮನೋಭಾವದಿಂದ ಕೂಡಿರಲು ಸಾಧ್ಯ. ಪರೋಪಕಾರ ಗುಣಗಳನ್ನು ನಾವು ಕಲಿತುಕೊಳ್ಳಬೇಕಾಗಿದೆ. ಇದರಿಂದ ಸಮಾಜದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂದು ರುಕ್ಮಾಪುರ ಹಿರೇಮಠದ ಗುರುಶಾಂತ ಶಿವಮೂರ್ತಿ ಶಿವಾಚಾರ್ಯರು ತಿಳಿಸಿದರು. ಸಮೀಪದ ರುಕ್ಮಾಪುರ ಹಿರೇಮಠದಲ್ಲಿ 20ನೇ ಶಿವಾನುಭವಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮೊದಲು ನಾವು ಜೀವನದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಮಾನವ ಜನ್ಮದ ಮಮತೆಯ ಮಡಿಲಿನಲ್ಲಿ ಇದ್ದಾಗ ಸೌಖ್ಯ ಇರುವಂತೆ, ವಿಚಾರ ಪೂರ್ವಕ ಸಂಸ್ಕಾರಗಳ ಮೈಲಿಗಲ್ಲು ರಚಿಸಿಕೊಂಡಾಗ ಹಲವಾರು ಮಾರ್ಗಗಳನ್ನು ಹಿಮ್ಮೆಟ್ಟಿಸಿ ಸನ್ಮಾರ್ಗದತ್ತ ನಮ್ಮ ಜೀವನ ಕೊಂಡ್ಯೊಯಬಹುದು ಎಂದರು. ಹುಣಸಗಿ ಕಸಾಪ ಘಟಕದ ಅಧ್ಯಕ್ಷ ವಿರೇಶ ಹಿರೇಮಠ ಹಳ್ಳೂರು ಉಪನ್ಯಾಸ ನೀಡಿದರು. ಬಸಣ್ಣ ಬನಗುಂಡಿ, ಸದಾಶಿವ ಮಿಣಜಗಿ, ಕಾಶಿನಾಥ ಬಣಗಾರ, ಶಂಕ್ರಪ್ಪ ಭಾವಿ, ರುದ್ರಸ್ವಾಮಿ ಹಿರೇಮಠ, ಶಂಕ್ರಪ್ಪ ಬಡಗಾ, ಚನ್ನಪ್ಪ ಪಂಚಗಲ್, ಬಸಪ್ಪ ಹಿರೇಗೌಡ ಇತರರಿದ್ದರು. ಚಂದ್ರಶೇಖರಸ್ವಾಮಿ ಪ್ರಾರ್ಥಿಸಿದರು. ಮಂಜುನಾಥ ಚೆಟ್ಟಿ ನಿರೂಪಿಸಿದರು. ಉಮಾಕಾಂತ ವಂದಿಸಿದರು.
ಉಸ್ತುವಾರಿ ಸಚಿವ
ಚಿಂಚನಸೂರ ಪ್ರವಾಸ
ಯಾದಗಿರಿ: ಜಿಲ್ಲಾ ಉಸ್ತುವಾರಿ ಮತ್ತು ಜವಳಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ್ ಜೂ.14ರಿಂದ 16ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ.14ರಂದು ಬೆ.11.30ಕ್ಕೆ ಯಾದಗಿರಿ ಸನ್ನತಿ ಏತ ನೀರಾವರಿ ಯೋಜನೆ ವೀಕ್ಷಣೆ, ಯಾದಗಿರಿ ನಗರ ಅಭಿವೃದ್ಧಿ ಕುರಿತು ಪರಿಶೀಲನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ, ಸಂಜೆ 6ಕ್ಕೆ  ಗುಲ್ಬರ್ಗಕ್ಕೆ ಪ್ರಯಾಣ. ಜೂ.15ರಂದು ಬೆ.11ಕ್ಕೆ ಜಿಪಂ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಎಲ್ಲ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಜೆ 6ಕ್ಕೆ ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸುವರು. 16ರಂದು ಬೆ.11ಕ್ಕೆ ಗುರುಮಠಕಲ್ ಬಂದಳ್ಳಿಯಲ್ಲಿ ಬ್ಯಾರೇಜ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳುವರು.
ವೀರಶೈವ ಯುವ ವೇದಿಕೆಗೆ ನೇಮಕ
ಸುರಪುರ: ತಾಲೂಕು ವೀರಶೈವ ಯುವ ವೇದಿಕೆಯ ನೂತನ ಪದಾಧಿಕಾರಿಗಳನ್ನು ಚಂದ್ರಶೇಖರ ಪಂಚಾಂಗಮಠ ಸಾನ್ನಿಧ್ಯ ಮತ್ತು ಸುರೇಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನೇಮಿಸಲಾಗಿದೆ. ಸಭೆಯಲ್ಲಿ ಪ್ರಮುಖರಾದ ದೇವಿಂದ್ರಪ್ಪ ಕಳ್ಳಿಮನಿ, ವಿರೇಶ ನಿಷ್ಠಿ ದೇಶಮುಖ, ಶಾಂತರಾಜ ಬಾರಿ, ಸೂಗರೇಶ ಮಡ್ಡಿ, ಈರಣ್ಣ ಸಾಹು ಬಲಶೆಟ್ಟಿಹಾಳ ಹಲವರಿದ್ದರು. ನೂತನ ಪದಾಧಿಕಾರಿಗಳು- ಮಿಟಲಾಕ್ಷಿ ಪಂಚಾಂಗಮಠ(ಗೌರವಾಧ್ಯಕ್ಷ), ಕೊಟ್ರಯ್ಯಸ್ವಾಮಿ (ಅಧ್ಯಕ್ಷ), ಮಂಜುನಾಥ, ಪ್ರಕಾಶ(ಉಪಾಧ್ಯಕ್ಷ), ಗಿರೀಶ್(ಪ್ರ.ಕಾರ್ಯದರ್ಶಿ), ದೇವೆಂದ್ರ(ಸ.ಕಾರ್ಯದರ್ಶಿ), ಸುರೇಶ ಗಲಗಿನ್(ಕೋಶಾಧ್ಯಕ್ಷ), ವಿನೋದ ಜೇವರ್ಗಿ(ಕಾನೂನು ಸಲಹೆಗಾರ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.