ಮುಂಗಾರು ಹಂಗಾಮಿನ ತರಬೇತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಆಳಂದ, ಜೂ.11
ಸಂಕಷ್ಟದಲ್ಲಿರುವ ಕೃಷಿ ಮತ್ತು ಕೃಷಿಕರ ಉಳಿವಿಗಾಗಿ ಸರ್ಕಾರ ಪೂರಕವಾದ ಯೋಜನೆ ರೂಪಿಸುವ ಮೂಲಕ ನಿಜವಾದ ಸಹಕಾರಕ್ಕೆ ಮುಂದಾಗಬೇಕು ಎಂದು ಶಾಸಕ ಮತ್ತು ಕೆಜೆಪಿ ಶಾಸಕಾಂಗ ಪಕ್ಷದ ಉಪನ್ಯಾಯಕ ಬಿ.ಆರ್. ಪಾಟೀಲ್ ಆಗ್ರಹಿಸಿದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಜಿಪಂ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಭೂಚೇತನ ಯೋಜನೆಯಡಿ ಮುಂಗಾರು ಹಂಗಾಮಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಷಡ್ಯಂತ್ರ: ಸರ್ಕಾರದ ಹಣ ಖರ್ಚಾದರೂ ವಾಸ್ತವಿಕವಾಗಿ ರೈತರಿಗೆ ಯೋಜನೆಯ ಲಾಭ ತಟ್ಟುತ್ತಿಲ್ಲ. ದಿನ ಕಳೆದಂತೆ ರೈತರ ಮತ್ತು ಕೃಷಿ ಪರಿಸ್ಥಿತಿ ಚಿಂತಾಜನಕವಾಗಿದೆ. ಅಪರೋಕ್ಷವಾಗಿ ಸರ್ಕಾರವೇ ಕೃಷಿ ದಮನ ಮಾಡಲು ಖಾಸಗಿ ಕಂಪನಿಗಳ ಮೂಲಕ ಷಡ್ಯಂತ್ರ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ ಶಾಸಕರು. ಈ ನಿಟ್ಟಿನಲ್ಲಿ ಕೃಷಿಕರು ಸಂಘಟಿತ ಹೋರಾಟ ಕೈಗೊಳ್ಳಲು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.
ಇಂದಿಗೂ ಪೊಳ್ಳು ಯೋಜನೆ ಮತ್ತು ಸೌಲಭ್ಯಗಳ ನೀಡುವ ಹೆಸರಿನಲ್ಲಿ ಸರ್ಕಾರವೇ ಕೃಷಿಯನ್ನು ದಿವಾಳಿ ಅಂಚಿಗೆ ತಲುಪಿಸಿರುವುದು ಸರಿಯಲ್ಲ. ರೈತರ ಏನೆಯಲ್ಲ ಪ್ರಯತ್ನ ನಡೆಸಿದಾಗ್ಯೂ ಸರ್ಕಾರದ ಸವಲತ್ತು ದೊರೆಯುತ್ತಿಲ್ಲ. ಕೃಷಿ ಕ್ಷೇತ್ರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ ಪುನರುಚ್ಛರಿಸಿದರು.
ದುಷ್ಪರಿಣಾಮ: ಕೃಷಿಕರ, ಬಡವರ ಉದ್ದಾರ ಯೋಜನೆ ಜಾರಿಮಾಡುವ ಬದಲು ದಿವಾಳಿ ಮಾಡುವ ತಂತ್ರ ಹಣೆಯಲಾಗಿದೆ. ಉದ್ಯೋಗ ಖಾತ್ರಿ ಬಂದ ಮೇಲೆ ಕೃಷಿ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರಿದ ವರದಿಗಳಿವೆ. ಈ ಭಾಗದಲ್ಲಿ ಜನ ಅಕ್ಕಿಗಿಂತ ಹೆಚ್ಚು ಜೋಳ, ಗೋಧಿ ಉಪಯೋಗಿಸುತ್ತಾರೆ. ಸರ್ಕಾರದ ಅಕ್ಕಿ ವ್ಯರ್ಥವಾಗಬಾರದು. ಇಲ್ಲಿಯ ಕಾರ್ಮಿಕರು ಮುಂಬೈ, ಬೆಂಗಳೂರು ಪುಣೆಗಳಿಗೆ ದುಡಿಯಲು ಹೋಗಿದ್ದಾರೆ. ಕೃಷಿ ಉಳಿಸಬೇಕು, ಗುಳೆ ಹೋದವರನ್ನು ಮರಳಿ ಕರೆಸಿ ಕೆಲಸ ನೀಡುವಂತಾಗಬೇಕು ಎಂದರು.
ರೈತರಿಗೆ ಸಾಲ ನೀಡುವಾಗ ವಿಮೆ ಕಂತು ಕಡಿತಗೊಳಿಸಿ ಸಾಲ ನೀಡುವ ಬ್ಯಾಂಕ್ಗಳು ಬರಗಾಲ ಬಿದ್ದು, ಬೆಳೆ ಹಾಳಾದರೂ ವಿಮೆ ಹಣ ನೀಡುತ್ತಿಲ್ಲ. ಇನ್ನೂ ಮುಂದಾದರೂ ಅಧಿಕಾರಿಗಳು ರೈತ ಪರ ಕೆಲಸ ಮಾಡಬೇಕು. ಕೃಷಿ ವಿಜ್ಞಾನಿಗಳ ವಿಚಾರ ಹೊಸ ಅವಿಷ್ಕಾರವನ್ನು ರೈತರಿಗೆ ತಲುಪಬೇಕು. ರೈತರ ಮತ್ತು ವಿಜ್ಞಾನಿಗಳ ಮಧ್ಯ ನಿರಂತರವಾಗಿ ಚಿಂತನ ಮಂಥನ ನಡೆಯಬೇಕು ಎಂದರು.
ಕೃಷಿಯತ್ತ ಒಲವಿರಲಿ: ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪಾ ಪಾಟೀಲ್ ಧಂಗಾಪುರ ಮಾತನಾಡಿ, ಸರ್ಕಾರ ಯುವಕರನ್ನು ಕೃಷಿಯೆಡೆಗೆ ವಾಲುವಂತೆ ಮಾಡಬೇಕು ಎಂದರು.
ತಾಲೂಕು ಅಧ್ಯಕ್ಷ, ಮಾಜಿ ಶಾಸಕ ಅಣ್ಣರಾವ ಪಾಟೀಲ್ ಕೊರಳ್ಳಿ ಮಾತನಾಡಿದರು. ಕೃಷಿ ಜಾಗೃತದಳ ಅಧಿಕಾರಿ ಜಿ.ಆರ್.ಕೋಟಿ, ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ, ವಿಜ್ಞಾನಿ ಡಾ. ಡಿ.ಎಚ್. ಪಾಟೀಲ್, ಡಾ. ಮಂಜುನಾಥ ಪಾಟೀಲ್ ಅವರು ಹಂಗಾಮಿನ ಕೃಷಿ ನಿರ್ವಹಣೆ ಮಾಹಿತಿ ಒದಗಿಸಿದರು.
ಮುಖಂಡ ಗುರುಶರಣ ಪಾಟೀಲ್ ಕೊರಳ್ಳಿ, ಅಧ್ಯಕ್ಷತೆ ವಹಿಸಿದ್ದ ತಾಪಂ. ಅಧ್ಯಕ್ಷೆ ಬಾಯಮ್ಮ ಮೋಹನಗೌಡ ಪಾಟೀಲ್, ಸದಸ್ಯ ಲಕ್ಷ್ಮಿಪುತ್ರ ಯಂಕಂಚಿ, ಶರಣಗೌಡ ಪಾಟೀಲ್, ಆಕಾಶ ಪಾಟೀಲ್ ಉಪಸ್ಥಿತರಿದ್ದರು. ವಿವಿಧ ಗ್ರಾಮಗಳಿಂದ ನೂರಾರು ಮಂದಿ, ರೈತರು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ನಂದರ್ಗಿ ಕಾರ್ಯಕ್ರಮ ನಿರೂಪಿಸಿದರು. ಸಿದ್ರಾಮ ಬುಕ್ಕೆ ಸ್ವಾಗತಿಸಿದರು. ರಾಠೋಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

