20849.90 ಕ್ಯೂಬಿಕ್ ಮೀಟರ್ ಅಕ್ರಮ ಮರಳು ಜಪ್ತಿ
ಗುಲ್ಬರ್ಗ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಗುಲ್ಬರ್ಗ ಉಪ ವಿಭಾಗದ ಅಭಿಯಂತರರು ಹಾಗೂ ಗುಲ್ಬರ್ಗ ತಹಸೀಲ್ದಾರ್ ಪ್ರಕಾಶ ಮತ್ತು ಅವರ ಸಿಬ್ಬಂದಿ ಗುಲ್ಬರ್ಗ ನಗರದಲ್ಲಿ ಜೂ. 8ರಂದು ಪರಿವೀಕ್ಷಣೆ ಮಾಡಿ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಒಟ್ಟು 20849.90 ಕ್ಯೂಬಿಕ್ ಮೀಟರ್ ಮರಳನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲಾಡಳಿತದ ಮುಂದಿನ ಆದೇಶ ಬರುವವರೆಗೆ ಜಪ್ತಿ ಮಾಡಲಾದ ಅಕ್ರಮ ಮರಳಿಗೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಗುಲ್ಬರ್ಗ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಶೇಖರಣೆ ಮಾಡಿದ ಪ್ರದೇಶ ಮತ್ತು ಮರಳಿನ ಪ್ರಮಾಣ ಇಂತಿದೆ. ಶಕ್ತಿ ನಗರ(ಅಜಾದಪುರ ರಸ್ತೆ)- 6014.15, ಬಿ.ಸಿ.ಎಂ ಕುಕ್ಕಿಂಗ್ ಪಾಯಿಂಟ್ (ಶಹಾಬಾದ್ ರಸ್ತೆ)-2916, ಹಾಗರಗಾ ಗ್ರಾಮದ ಹತ್ತಿರ (ಕ್ರಶರ್)-2430, ಅಫಜಲ್ಪುರ ರಸ್ತೆಯ 33/11 ಕೆ.ವಿ ಸಬ್ ಸ್ಟೇಷನ್ ಟ್ರಾನ್ಸ್ಫಾರ್ಮರ್ ಹತ್ತಿರ-1250, ಅಜಾದ್ಪುರ ರಸ್ತೆಯ ಸಿದ್ದೇಶ್ವರ ಕಾಲೋನಿ-2510.66, ಅಜಾದಪುರ ರಸ್ತೆಯ (ಓವರ್ ಅಪ್ರೋಚ್ ರೋಡ್)-1354.25 ಹಾಗೂ ಸಿದ್ದೇಶ್ವರ ಕಾಲೋನಿ (ವಿಶ್ವವಿದ್ಯಾಲಯ ಎದುರುಗಡೆ)-4374.35.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

