ಗುಲ್ಬರ್ಗಾ

ಗುಲ್ಬರ್ಗ ಆಕಾಶವಾಣಿ ಸಂಗೀತ ಸ್ಪರ್ಧೆ

Published On :

ಗುಲ್ಬರ್ಗ: ಉದಯೋನ್ಮುಖ, ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಆಕಾಶವಾಣಿ ಸಂಗೀತ ಸ್ಪರ್ಧೆಗಳನ್ನು ಎರಡು ಹಂತಗಳಲ್ಲಿ ನಡೆಸಲಿದೆ.
ಪ್ರಾಥಮಿಕ ಹಂತದ ಸ್ಪರ್ಧೆ ಪ್ರತಿ ಆಕಾಶವಾಣಿಯಲ್ಲಿ ನಡೆಸಲಾಗುತ್ತದೆ. ಅಂತಿಮ ಸ್ಪರ್ಧೆ ಹಿಂದೂಸ್ತಾನಿ ಸಂಗೀತಕ್ಕೆ ದೆಹಲಿಯಲ್ಲಿ, ಕರ್ನಾಟಕ ಸಂಗೀತಕ್ಕೆ ಚೆನ್ನೈನಲ್ಲೂ ನಡೆಸಲಾಗುವುದು. ಜೂ.22ಕ್ಕೆ ಅನ್ವಯಿಸುವಂತೆ 16ರಿಂದ 24 ವರ್ಷದ ಒಳಗಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಈಗಾಗಲೇ ಆಕಾಶವಾಣಿಯಲ್ಲಿ ಗ್ರೇಡ್ ಪಡೆದಿರುವ ಕಲಾವಿದರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಸ್ಪರ್ಧೆಯನ್ನು ಈಗ ಹೇಳುವ ವಿಭಾಗಗಳಲ್ಲಿ ನಡೆಸಲಾಗುವುದು. ಹಾಡುಗಾರಿಕೆ- ಶಾಸ್ತ್ರೀಯ, ಲಘು ಶಾಸ್ತ್ರೀಯ ಹಾಗೂ ಭಾವಗೀತೆ. ವಾದ್ಯ ಸಂಗೀತ- ಇದರಲ್ಲಿ ಶಾಸ್ತ್ರೀಯ(ಹಿಂದೂಸ್ತಾನಿ ಹಾಗೂ ಕರ್ನಾಟಕ) ಮಾತ್ರ. ವೃಂದಗಾನ- ಸಂಗೀತ ಸಂಯೋಜಕರು, ಹಾರ್ಮೋನಿಯಂ ವಾದನ, ಜನಪದ ಹಾಡುಗಳು
ಪ್ರಾಥಮಿಕ ಹಂತದ ಸ್ಪರ್ಧೆಗಳು ಆ.5ರಿಂದ ನಡೆಯುತ್ತವೆ.
ಪ್ರಾಥಮಿಕ ಹಂತದಲ್ಲಿ ವಿಜೇತರಾದವರ ಸಂಗೀತವನ್ನು ಧ್ವನಿ ಮುದ್ರಿಸಿಕೊಂಡು ಅಂತಿಮ ಸ್ಪರ್ಧೆಗೆ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ವಿಭಾಗಕ್ಕೂ 300 ಪ್ರವೇಶ ಧನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಪ್ರವೇಶ ಧನವನ್ನು, ನಿಲಯ ನಿರ್ದೇಶಕರು, ಆಕಾಶವಾಣಿ ಗುಲ್ಬರ್ಗ, ಇವರಿಗೆ ಮನಿ ಆರ್ಡರ್ ಮುಖಾಂತರ ಸಲ್ಲಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಾಗಿ ನಿಲಯ ನಿರ್ದೇಶಕರು, ಸಂಗೀತ ವಿಭಾಗ, ಆಕಾಶವಾಣಿ ಗುಲ್ಬರ್ಗ- 585103 ಇವರನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಜೂ.19 ಕೊನೆ ದಿನ ಎಂದು ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಅಂಜನಾ ಯಾತನೂರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.