ಗುಲ್ಬರ್ಗಾ

ಅನಂತ ಕುಲಕರ್ಣಿಗೆ 'ಹರಿದಾಸ ಸಂಗೀತ ರತ್ನ'

Published On :

ಗುಲ್ಬರ್ಗ: ಬಾಗಲಕೋಟೆಯ ಖ್ಯಾತ ಸಂಗೀತ ಕಲಾವಿದ ಅನಂತ ಕುಲಕರ್ಣಿ ಅವರು ನಗರದ ಹರಿದಾಸ ಸಾಹಿತ್ಯ, ಸಂಗೀತ ಪ್ರತಿಷ್ಠಾನ ನೀಡುವ ಹರಿದಾಸ ಸಂಗೀತರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹರಿದಾಸ ಸಾಹಿತ್ಯ ವಿಚಾರ ವಾಹಿನಿ ವೇದಿಕೆ ಹಾಗೂ ಸ್ವರಮಾಧುರಿ ಸಂಗೀತ ವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಜೂ.23 ಮತ್ತು 24ರಂದು ನಡೆಯುವ ಹರಿದಾಸ ವೈಭವ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಸ್ವಾಮಿರಾವ ಕುಲಕರ್ಣಿ, ಮಹೇಶ ಬಡಿಗೇರ ತಿಳಿಸಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯೊಂದಿಗೆ 5 ಸಾವಿರ ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಪಾಲಕರ ಪತ್ತೆಗೆ ಮನವಿ
ಗುಲ್ಬರ್ಗ: ಯಾದಗಿರಿಯ ಬಾಲಕಿಯರ ಬಾಲ ಮಂದಿರದಲ್ಲಿದ್ದ 17 ವರ್ಷದ ಕು. ಜ್ಯೋತಿಯನ್ನು ಮೇ 30ರಂದು ಗುಲ್ಬರ್ಗದ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರಕ್ಕೆ ವರ್ಗಾವಣೆ ಮುಖಾಂತರ ದಾಖಲಿಸಲಾಗಿದೆ. ಇವಳ ತಂದೆಯ ಹೆಸರು ಯಲ್ಲಪ್ಪ ಹಾಗೂ ತಾಯಿ ಲಕ್ಷ್ಮೀ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡುವ ಜ್ಯೋತಿ ಗೋದಿ ಮೈಬಣ್ಣ ಹೊಂದಿದ್ದು, ಬುದ್ಧಿಮಾಂದ್ಯಳು. ಹೆಚ್ಚಿನ ಮಾಹಿತಿಗಾಗಿ ದೂ. 08472-230053, ಮೊ. 9880153371ಕ್ಕೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.