ಗುಲ್ಬರ್ಗಾ

ಬೂತ್ ಮಟ್ಟದ ಸಂಘಟನೆಗೆ ಬಿಜೆಪಿ ನಿರ್ಧಾರ

Published On :

ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜೂ.19
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಕಾರ್ಯಕರ್ತರು ಎದೆಗುಂದದೆ ಮುಂದೆ ನಡೆಯುವ ಲೋಕಸಭೆ ಚುನಾವಣೆಗೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಗೆಲವು ಪಡೆಯೋಣ ಎಂದು ಜಿಲ್ಲಾ ಮುಖಂಡ ಹಾಗೂ ತಾಲೂಕು ಸ್ಥಾನಿಕ ಸಮಿತಿ ಚುನಾವಣೆ ಉಸ್ತುವಾರಿ ಅವ್ವಣ್ಣ ಮ್ಯಾಕೇರಿ ಹೇಳಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸ್ಥಾನಿಕ ಸಮಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದಲ್ಲಿ ಉತ್ಸಾಹಿ ನಾಯಕರು ಇದ್ದು, ಅವರು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನೆ ಮಾಡಲು ಹೊರಟಿದ್ದಾರೆ. ಇದಕ್ಕೆ ಬೆಂಬಲವಾಗಿ ನಾವುಗಳು ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ತನು-ಮನದಿಂದ ದುಡಿದಲ್ಲಿ ನಮಗೆ ಜಯ ಖಂಡಿತ ಸಿಗುತ್ತದೆ ಎಂದರು.
ಪಕ್ಷದಲ್ಲಿ ಪ್ರತಿ ಪಂಚಾಯ್ತಿಗೆ 15 ಜನರ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜೂ.25ರೊಳಗಾಗಿ ಜಿಲ್ಲಾ ಸಮಿತಿಗೆ ಸಲ್ಲಿಸಲು ತಿಳಿಸಿದರು. ನಂತರ ಜೂ.30ರೊಳಗೆ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಾಗುವುದು ಎಂದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತ ಜನರಿಗೆ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ವೀಕ್ಷಕರಾಗಿ ಚಂದ್ರಶೇಖರ ರೆಡ್ಡಿ, ಪರಸರೆಡ್ಡಿ, ಎಚ್.ಎ. ರೆಡ್ಡಿ, ಶಶಿಕಲಾ ಟೆಂಗಳಿ, ಮುಖಂಡರಾದ ಗುಂಡಣ್ಣ ಬಾಳಿ, ನೀಲಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲ್ಲೂರ, ಅಣ್ಣಾರಾವ ಬಾಳಿ, ಗುರುನಾಥ ರೆಡ್ಡಿ, ತಮ್ಮಣ್ಣ ಡಿಗ್ಗಿ, ಶಶಿಕಾಂತ ಪಾಟೀಲ್, ಕಲ್ಯಾಣರಾವ ಪಾಟೀಲ್, ಚಂದ್ರಶೇಖರ ದಿಗ್ಗಾಂವಕರ್, ಪುರಸಭೆ ಸದಸ್ಯ ದಶರಥ ತಳವಾರ, ರಾಮದಾಸ ಚವ್ವಾಣ, ನಾಗರಾಜ ಹೂಗಾರ, ತಾಪಂ ಸದಸ್ಯ ಮಲ್ಲಿಕಾರ್ಜುನ ಶಿವಗೋಳ, ವೆಂಕಾರೆಡ್‌ಡಿ ಯರಗಲ್, ನಿಂಗಣ್ಣ ಹುಳಗೋಳ, ಮಹೇಂದ್ರ ಕೋರಿ, ವಿಷ್ಣು ಜಿತುರೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಶರಣು ಜ್ಯೋತಿ ರಾವೂರ ಸ್ವಾಗತಿಸಿ ನಿರೂಪಿಸಿದರು. ಬಾಲಾಜಿ ಬುರಬುರೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.