ಗುಲ್ಬರ್ಗಾ

ಧರ್ಮ ಪ್ರಜ್ಞೆ ಬೆಳಸುವುದೇ ಧರ್ಮ ಪೀಠಗಳ ಗುರಿ: ರಂಭಾಪುರಿ ಶ್ರೀ

Published On :

ಕ.ಪ್ರ.ವಾರ್ತೆ, ಜೇವರ್ಗಿ,  ಜೂ.21
ಬದುಕಿ ಬಾಳುವ ಮನುಷ್ಯನಿಗೆ ಧರ್ಮ ಪರಿಪಾಲನೆಯ ಅಗತ್ಯವಿದೆ. ಉದಾತ್ಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕ. ವೀರಶೈವ ಧರ್ಮದ ಪಂಚ ಪೀಠಗಳು ಜನ ಸಮುದಾಯದಲ್ಲಿ ಧರ್ಮ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಬೆಳಸುವುದೇ ಧರ್ಮಪೀಠದ ಗುರಿಯಾಗಿದೆ ಎಂದು ಬಾಳೆಹೊನ್ನೂರ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ,  ಜಗದ್ಗುರು ಪಂಚಾಚಾರ್ಯ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಹಾಗೂ ತಾಲೂಕು ಮಟ್ಟದ ಪ್ರಥಮ ಜಂಗಮ ಸಮಾವೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದಸರಾ ದರ್ಬಾರ: ಇದಕ್ಕೂ ಮುನ್ನ ಮಾತನಾಡಿದ ಶಾಸಕ  ಡಾ. ಅಜಯಸಿಂಗ್, ರಂಭಾಪುರಿ ಆಶೀರ್ವಾದದಿಂದ ತಾವು ಶಾಸಕರಾಗಿ ಆಯ್ಕೆಯಾಗಿದ್ದೇನೆ. ಹಿಂದೆ 1998ರಲ್ಲಿ ಯಡ್ರಾಮಿಗೆ ಆಗಮಿಸಿದ ಪಂಚ ಪೀಠದ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಧರ್ಮಸಿಂಗ್ ಅವರು ಪಂಚ ಪೀಠಾಧೀಶರ ಆಶೀರ್ವಾದದಿಂದ ಲೋಕೋಪಯೋಗಿ ಮಂತ್ರಿಯಾದರು ಎಂದು ಸ್ಮರಿಸಿಕೊಂಡ ಅವರು, ಮುಂದಿನ ದಸರಾ ಹಬ್ಬವನ್ನು ರಂಭಾಪುರಿ ಶ್ರೀಗಳ ಸನ್ನಿಧಾನದಲ್ಲಿ ಜೇವರ್ಗಿಯಲ್ಲಿ ದಸರಾ ದರ್ಬಾರ ಏರ್ಪಡಿಸುವುದಾಗಿ ಹೇಳಿದರು.
ಗಣ್ಯರ ಉಪಸ್ಥಿತಿ: ಸಮಾವೇಶದಲ್ಲಿ ಮಾಗಣಗೇರಿ ಶ್ರೀ, ಹಿಪ್ಪರಗಾ ಶ್ರೀ, ಶಖಾಪುರ ಶ್ರೀ, ಕಡಕೋಳ ಶ್ರೀ, ಆಲೂರ ಶ್ರೀ, ಯಡ್ರಾಮಿ ಶ್ರೀ, ಸೊನ್ನ ಶ್ರೀ, ರೋಜಾ ಶ್ರೀ, ಗಡಿಗೌಡಗಾಂವ ಶ್ರೀ, ಕುಕನೂರ ಶ್ರೀ, ಕಟ್ಟಿಸಂಗಾವಿ ಹಾಗೂ ಹೊನ್ನಾಳ ಶ್ರೀಗಳು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಗೌಡ ಪಾಟೀಲ್ ದುಮ್ಮದ್ರಿ, ಚನ್ನಮಲ್ಲಯ್ಯ ಹಿರೇಮಠ, ಎಂ.ಎಸ್. ಹಿರೇಮಠ, ಶಿವಶರಣಪ್ಪ ಸೀರಿ, ಡಾ.ಎಸ್.ಎಸ್. ಗುಬ್ಬಿ, ಎನ್.ಎಸ್. ಹಿರೇಮಠ, ಜಿ.ಎಂ. ವಿಶ್ವನಾಥ, ಗೋಲ್ಲಾಳಪ್ಪಗೌಡ ಮಾಗಣಗೇರಿ, ರಾಜಶೇಖರ ಸೀರಿ, ಶರಣು ಗದ್ದುಗೆ, ರವಿ.ಆರ್. ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೆ.ಎಸ್. ಮಠ, ಡಾ. ಪಿ.ಎಂ. ಮಠ, ವಿರುಪಾಕ್ಷಯ್ಯ ನಂದಿಕೋಲಮಠ, ಶಾಂತಮೂರ್ತಿ ಗೊಂಬಿಮಠ, ಶಿವಾನಂದ ಘಂಟಿಮಠ, ಎಂ.ಎಸ್. ಹಿರೇಮಠ, ಗುಂಡಯ್ಯ ಸ್ಥಾವರಮಠ, ಶಿವಕವಿ ಹಿರೇಮಠ, ರಾಚಯ್ಯ ಕಲ್ಮಠ, ಬಸಯ್ಯಸ್ವಾಮಿ ಸ್ಥಾವರಮಠ, ಸಿದ್ಧಬಸಯ್ಯಸ್ವಾಮಿ, ಶಿವುಕುಮಾರ ದೇವತ್ಕಲ್ ಭಾಗವಹಿಸಿದ್ದರು.
ಪ್ರವೀಣಕುಮಾರ ಕುಂಟೋಜಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಪುರಾಣಿಕ ಸ್ವಾಗತಿಸಿದರು. ಭಾರತಿ ಸಾಲಿಮಠ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣ ಬಸವೇಶ್ವರ ವೃತ್ತದಿಂದ ಸಜ್ಜನ್ ಕಲ್ಯಾಣ ಮಂಟಪದವರೆಗೆ ರಂಭಾಪುರಿ ಜಗದ್ಗುರುಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಸಾವಿರಾರೂ ಜಂಗಮ ಸಮಾಜದ ಭಾಂದವರು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.