371ನೇ(ಜೆ) ಅಡಿ ಪತ್ರಿಕೆಗಳಿಗೆ ನೆರವು
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.22
371ನೇ(ಜೆ) ವಿಧಿ ಅಡಿಯಲ್ಲಿ ಕಾನೂನು ರೂಪಿಸುವಾಗ ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಪ್ರಕಟವಾಗುತ್ತಿರುವ ಜಿಲ್ಲಾ ಮಟ್ಟದ ದಿನಪತ್ರಿಕೆಗಳಿಗೆ ಆಗತ್ಯ ನೆರವು ಕಲ್ಪಿಸುವುದಾಗಿ ಹೈದ್ರಾಬಾದ್ ಕರ್ನಾಟಕ 371ನೇ(ಜೆ) ಅನುಷ್ಠಾನ ಉಪಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ. ಪಾಟೀಲ್ ಭರವಸೆ ನೀಡಿದರು.
ಈಚೇಗೆ ಗುಲ್ಬರ್ಗ ಜಿಲ್ಲಾ ಸಂಪಾದಕರ ಸಂಘದ ನಿಯೋಗ ಹಿರಿಯ ಸಂಪಾದಕ ಶಿವರಾಯ ದೊಡ್ಮನಿ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಅವರು ಸಣ್ಣ ಪತ್ರಿಕೆಗಳ 5 ಬೇಡಿಕೆಗಳಲ್ಲಿ ಒಂದನ್ನು ಹೊರತುಪಡಿಸಿ 4 ಬೇಡಿಕೆಗಳಾದ ಪ್ರತಿ ತಿಂಗಳು 2 ಪುಟ ಜಾಹಿರಾತು, ಪ್ರತಿ ವರ್ಷ ಶೇ.20 ರಷ್ಟು ದರ ಹೆಚ್ಚಳ, ಕೈಗಾರಿಕಾ ನಿಗಮದಿಂದ ಶೆಡ್ ನಿರ್ಮಾಣ, ಗಡಿನಾಡು ಪತ್ರಿಕೆಗಳಿಗೆ ವಾರ್ತಾ ಇಲಾಖೆ ನಿಗದಿಪಡಿಸಿದಂತೆ ಪ್ರಸಾರ ಪತ್ರಿಕೆಗಳ ಪ್ರಸಾರ ಸಂಖ್ಯೆ ನಿಗದಿಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಾವನೂರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅನುಷ್ಠಾನ ಸಮಿತಿ ಸದಸ್ಯರು, ಸಚಿವರುಗಳಾದ ಡಾ. ಶರಣಪ್ರಕಾಶ ಪಾಟೀಲ್, ಬಾಬುರಾವ ಚಿಂಚನಸೂರ, ಪರಮೇಶ್ವರ, ಉಮಾಶ್ರೀ, ಟಿ.ಬಿ. ಜಯಚಂದ್ರರವರಿಗೂ ಮನವಿ ಪತ್ರ ಸಲ್ಲಿಸಲಾಯಿತು.
ನಿಯೋಗದಲ್ಲಿ ಹಿರಿಯ ಪತ್ರಕರ್ತರಾದ ವೆಂಕಟರಾವ ಖಮಿತಕರ್, ದೇವೇಂದ್ರ ಕಪನೂರ, ವಿಶ್ವನಾಥ ಸ್ವಾಮಿ, ನಜೀರ್ ಅಹ್ಮದ್, ಈರಣ್ಣಗೌಡ ಯಡ್ಡಳ್ಳಿ, ಸುರೇಶ ಸಿಂಧೆ, ಗುರುರಾಜ ಕುಲಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

