ಗುಲ್ಬರ್ಗಾ

ಎಲ್ಲಮ್ಮ ದೇವಿಗೆ ನೈವೇದ್ಯ ಸಲ್ಲಿಸಿದ ಅಪಾರ ಭಕ್ತಸಾಗರ

Published On :

ಚಿತ್ತಾಪುರ: ಇಲ್ಲಿನ ಹೊರವಲಯದಲ್ಲಿರುವ ನಾಗಾವೇಲ್ಲಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಅಪಾರ ಭಕ್ತ ಸಾಗರವೇ ಸೇರಿದ್ದು, ಅಲ್ಲಿ ಸಹಸ್ರ ಸಂಖ್ಯೆಯಲ್ಲಿ ನೈವೇದ್ಯ ಸಲ್ಲಿಸುವ ಮೂಲಕ ದರ್ಶನ ಪಡೆದರು.
ಭಕ್ತರು ಕುಂಕುಮ, ಕುಪ್ಪಸ, ಬಳೆ ಹಾಗೂ ನೈವೇದ್ಯದ ಹರಕೆ ದೇವಿಗೆ ಸಮರ್ಪಿಸಿದರು.
ಕಾರಹುಣ್ಣಿಮೆ ಇನ್ನೂ 15 ದಿವಸ ಇರುವಾಗಲೇ ಇಲ್ಲಿನ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ದರ್ಶನಕ್ಕೆಂದು ಬರುತ್ತಾರೆ. ಕರ್ನಾಟಕ, ಸೇರಿದಂತೆ ಸುತ್ತಲಿನ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.
ಬಾವಿಯಲ್ಲಿ ಪುಣ್ಯಸ್ನಾನ: ಈ ದಿನಗಳಲ್ಲಿ ಪ್ರತಿಯೊಬ್ಬರು ನೈವೇದ್ಯ ತಯಾರಿಸಿ ದೇವಿಗೆ ಸಲ್ಲಿಸುವುದೇ ವಿಶೇಷವಾಗಿದೆ. ದೇವಸ್ಥಾನಕ್ಕೆ ಆಗಮಿಸಿ ಇಲ್ಲಿಯೇ ಕೆಲವರು ಬಾವಿಯಲ್ಲಿ ಪುಣ್ಯಸ್ನಾನ ಮಾಡಿ ನೈವೇದ್ಯ ತಯಾರಿಸುತ್ತಾರೆ. ಇನ್ನೂ ಕೆಲವರು ಅವರ ಗ್ರಾಮದ ಮನೆಯಲ್ಲಿಯೇ ನೈವೇದ್ಯ ತಯಾರಿಸಿ ಇಲ್ಲಿಗೆ ಬಂದು ದೇವಿ ಸಮರ್ಪಿಸಿದರು. ಪ್ರತಿ ಕುಟುಂಬದ ಭಕ್ತರು ನೈವೇದ್ಯ ಸಲ್ಲಿಸುವುದೇ ಇಲ್ಲಿನ ವಾಡಿಕೆಯಾಗಿದೆ. ಇದರಿಂದಾಗಿ ರೈತನ ಜಮೀನುಗಳಲ್ಲಿ ಉತ್ತಮ ಫಸಲು ಬರುತ್ತದೆ ಎಂಬ ಪ್ರತೀತಿ ಕೂಡ ಇದೆ.
ದೇವಸ್ಥಾನದ ಒಳಗೆ ಹಾಗೂ ಹೊರಗೆ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ಸಾಲು ಇದ್ದರೂ ನೂಕು ನೂಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ದೇವಸ್ಥಾನ ಸಮಿತಿಯವರು ಹರಸಾಹಸಪಡಬೇಕಾಯಿತು.
ಅದು ಅಲ್ಲದೇ ಇತ್ತೀಚೆಗೆ ಮದುವೆಯಾದ ನವ ದಂಪತಿಗಳು ದೇವಿಯ ದರ್ಶನಕ್ಕೆ ಬರುತ್ತಾರೆ. ಹಲವರು ತಮ್ಮ ವಾಹನಗಳಲ್ಲಿ ಬಂದರೇ ಇನ್ನೂ ಕೆಲವರು ಗ್ರಾಮೀಣ ಜನತೆ ಎತ್ತಿನ ಗಾಡಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು.
ಅನ್ನ ದಾಸೋಹ ಸೇವೆ: ಬಂದ ಭಕ್ತರಿಗೆ ಶಿವಶಂಕರಯ್ಯ ಸ್ವಾಮಿ ಗದವಾಲ ಎಂಬುವರು ಅನ್ನದಾಸೋಹ ಸೇವೆ ಮಾಡಿದ್ದರಿಂದ ಪ್ರಸಾದ ಸೇವಿಸಿದ ಭಕ್ತರು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.