ನಾಲವಾರ ಶಾಲೆಗೆ ಪುಸ್ತಕ ದೇಣಿಗೆ
ಗುಲ್ಬರ್ಗ/ಶಹಾಬಾದ್: ಮಕ್ಕಳಲ್ಲಿ ಪುಸ್ತಕಗಳ ಬಳಕೆ ಬಗ್ಗೆ ಉತ್ತೇಜನ ನೀಡಲು ಸರ್ಕಾರದ ವಿನೂತನ ಯೋಜನೆಯಾದ ಶಾಲಾ ಶ್ರದ್ಧಾ ವಾಚನಾಲಯ ಕ್ರಾರ್ಯಕ್ರಮದಿಂದ ಉತ್ತೇಜಿತರಾದ ವಿಕ್ರಮ ಎಸ್. ನಿಂಬೇಣಗೋಳ ಅವರು ಸರ್ಕಾರಿ ಪ್ರೌಢಶಾಲೆಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು.
ಪುಸ್ತಕ ಪ್ರೇಮಿಗಳಾದ ನಿಂಬೇಣಗೋಳರವರು ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟನ ಉಕ್ಕಿನ ಮಹಿಳೆ, ಹುಲಿಕಲ್ ನಟರಾಜ ಅವರ ನೀವೂ ಮಾಡಿ ಪವಾಡ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಭಾರಿ ಮುಖ್ಯ ಶಿಕ್ಷಕಿ ಮೇರಿ ಸ್ನೇಹಲತಾ ಅವರಿಗೆ ನೀಡಿದರು. ಶಿಕ್ಷಕಾರಾದ ಹುಸೇನಿ ರಾಠೋಡ, ಚಂದ್ರಕಾಂತ, ಅಬ್ದುಲ್, ನಿರ್ಮಲಾದೇವಿ, ಭೀಮರಾವ, ಮಲ್ಲೇಶಿಗೌಡ, ಶೈಲೇಂದ್ರನಾಥ, ಗ್ರಾಮದ ರಾಜಶೇಖರ ನಿಲಭಾ, ರಾಜು ನಾಯಕೊಡಿ ಸೂಗೂರ, ಮೈಬೂಬಸಾಬ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

