ಗುಲ್ಬರ್ಗಾ

ಕಾರ ಹುಣ್ಣಿಮೆ; ರೈತರ ಸಂಭ್ರಮ ನೋಡಿಲ್ಲಿ...

Published On :

ಕನ್ನಡಪ್ರಭ ವಾರ್ತೆ ,  ಚಿತ್ತಾಪುರ ,  ಜೂ.23
ತಾಲೂಕಿನ ರೈತರು ಭಾನುವಾರ ಕಾರ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಬೆಳಗ್ಗೆ ಹಳ್ಳ, ಬಾವಿಗಳಲ್ಲಿ ತಮ್ಮ ನೇಗಿಲಯೋಗಿಯಾದ ಎತ್ತುಗಳನ್ನು ತೆಗೆದುಕೊಂಡು ಹೋಗಿ ಅವುಗಳಿಗೆ ಮೈ ತೊಳೆದು ವಿವಿಧ ರೀತಿಯ ಚಿತ್ತಾರಗಳಿಂದ ಅವುಗಳನ್ನು ಸಿದ್ಧಗೊಳಿಸಿ ಸಂಭ್ರಮಕ್ಕೆ ಅಣಿಗೊಳಿಸಿದರು.
ಹಬ್ಬದ ಮೊದಲ ದಿನ ಹೊನ್ನುಗ್ಗಿ ಆಚರಣೆಗೆ ಬೇಕಾದ ನಾನಾ ವಸ್ತುಗಳ ಬೆಲೆ ಗಗನಕ್ಕೆರಿದರೂ ಖರೀದಿಯ ಭರಾಟೆ ಕಡಿಮೆಯಾಗದಿರುವುದು ವಿಶೇಷ. ಮಾವಿನ ಮರ ಹುಡುಕಿ ತಳಿರು ತರುವ ಕಾತುರ, ಕೃಷಿ ಸಾಮಗ್ರಿಗಳ ಸಂಗ್ರಹದ ಕೆಲಸ ಪ್ರತಿ ರೈತನ ಮನೆಯಲ್ಲೂ ನಡೆಯಿತು.
ರೈತರು ತಮ್ಮ ಬಂಡಿಗೆ ಬೇಕಾಗುವ ಚಕ್ರ, ತೊಟ್ಟಿಲುಗಳ ಎತ್ತು ಬಂಡಿಯನ್ನು ಅಲಂಕಾರ ಮಾಡಿ ಎತ್ತುಗಳಿಗೆ ಮಘಡಾ, ಮೂಗುದಾಣಿ, ಕವಡೆ ಸರ, ಹಣಿಗೆಜ್ಜಿ, ಸರಪಳಿ, ರಿಬ್ಬನ, ವಿವಿಧ ರೀತಿಯ ಬಣ್ಣಗಳು, ಪೆಂಟ್ ಹೀಗೆ ಹಲವು ವಸ್ತುಗಳಿಂದ ಶೃಂಗರಿಸಲಾಗಿತ್ತು.
ರೈತರ ಪಾಲಿಗೆ ಕಾರು ಹುಣ್ಣಿಮೆ ವಿಶೇಷ ಹಬ್ಬ. ಎತ್ತುಗಳಿಗೆ ಪಟ್ಟಣ ಹಾಗೂ ಗ್ರಾಮಗಳ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ರೈತರು ಅತಿ ಉಲ್ಲಾಸದಿಂದ ಎತ್ತುಗಳಿಗೆ ಸಿಹಿ ಊಟ ತಿನ್ನಿಸಿ, ಎತ್ತುಗಳ ಶೃಂಗಾರಕ್ಕೆ ಸ್ಪರ್ಧೆ ಏರ್ಪಡಿಸಿದರು. ಮೆರವಣೆಗೆಯಲ್ಲಿ ತಮ್ಮ ಎತ್ತುಗಳು ಮುಂದು, ನಮ್ಮ ಎತ್ತುಗಳು ಮುಂದು ಎನ್ನುತ್ತಾ ವಿಜೃಂಭಣೆಯಿಂದ ಕಾರ ಹುಣ್ಣಿಮೆ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.