ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಹಾಪುರ, ಜೂ.24
ತಾಲೂಕಿನ ಗುಂಡಾಪುರ ಕಳೆದ ಅನೇಕ ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜೆಸ್ಕಾಂ ಅಧಿಕಾರಿಗಳ ಧೋರಣೆ ಖಂಡಿಸಿ ಜೆಡಿಎಸ್ ಮುಖಂಡ ಶರಣಪ್ಪ ಸಲಾದಪುರ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಇಲ್ಲಿಯ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಕಾಳಜಿ ವಹಿಸುತ್ತಿಲ್ಲ ಎಂದು ಶರಣಪ್ಪ ಸಲಾದಪುರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ಕೇವಲ 63 ಕೆವಿ ವಿದ್ಯುತ್ ಪರಿವರ್ತಕವಿದ್ದು, ಇದರಿಂದ ನಾಲ್ಕು ದಿನಕ್ಕೊಮ್ಮೆ ಪರಿವರ್ತಕ ಸುಟ್ಟುಹೋಗುತ್ತಿದ್ದು ಗ್ರಾಮಕ್ಕೆ ಶಾಶ್ವತ ವಿದ್ಯುತ್ ಪರಿಹಾರ ಕಲ್ಪಿಸಲು 100 ಕೆವಿ ವಿದ್ಯುತ್ ಪರಿವರ್ತಕ ಕೂಡಿಸುವಂತೆ ಆಗ್ರಹಿಸಿದರು.
ಪ್ರತಿಭಟನೆ ಅನಿವಾರ್ಯ: ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೂ ಸೂಕ್ತ ಕಾಳಜಿ ವಹಿಸಬೇಕು. ಅನೇಕ ಹಳ್ಳಿಗಳು ವಿದ್ಯುತ್, ಕುಡಿಯುವ ನೀರಿನ ಸೌಲಭ್ಯದಿಂದ ಕೆಂಗಟ್ಟಿವೆ. ಅಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ಕೆಲವೇ ದಿನಗಳಲ್ಲಿ ಬೃಹತ್ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಜೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ, ಕೆಲವು ದಿನ ಕಾಲಾವಕಾಶ ಕೊಡಿ. ಗುಂಡಾಪುರ ಗ್ರಾಮದ ವಿದ್ಯುತ್ ಬವಣೆಯನ್ನು ನೀಗಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಈ ವೇಳೆ ಪ್ರಮುಖರಾದ ಮಹಾದೇವಪ್ಪ ನಾಟೇಕರ, ಸಿದ್ದಯ್ಯ ಹಿರೇಮಠ, ಶರಣುರಡ್ಡಿ, ಗೌಸುದ್ದಿನ್, ರಾಯಣ್ಣಾ ಕನ್ಯಕೊಳೂರು, ಶರಣಪ್ಪ ಹುರಸಗುಂಡಿಗಿ, ಬಸವರಾಜ ಸಜ್ಜನ್, ಹಣಮಂತ್ರಾಯಗೌಡ, ಭೀಮಣ್ಣಾ, ಸಿದ್ದಪ್ಪ ಬಳಬಟ್ಟಿ, ದೇವಿಂದ್ರಪ್ಪ, ಬೀರಲಿಂಗ, ಮಾನಪ್ಪ ನಿಂಗಪ್ಪ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

