ನಿವೇಶನ ನೀಡಿದ್ರೆ 2 ಎಕರೆಯಲ್ಲಿ ಶೆಡ್ ನಿರ್ಮಾಣ: ನಾಯಕ
ಕ.ಪ್ರ. ವಾರ್ತೆ ಸುರಪುರ ಜೂ.25
ಕೈಮಗ್ಗ ನೇಕಾರರು ನಿವೇಶನ ನೀಡಿದರೆ 2 ಎಕರೆ ಸ್ಥಳದಲ್ಲಿ ಶೆಡ್ ನಿರ್ಮಿಸಿ ಕೊಡುವುದಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಅಜೀತ್ ನಾಯಕ್ ಭರವಸೆ ನೀಡಿದರು.
ಸಮೀಪದ ರುಕ್ಮಾಪುರದಲ್ಲಿ ಜಿವೇಶ್ವರ ಕೈಮಗ್ಗ ನೇಕಾರರ ಉತ್ಪಾದಕರ ಮತ್ತು ಮಾರಾಟ ಸಹಕಾರ ಸಂಘ ಹಾಗೂ ಜಿಲ್ಲಾ ಜವಳಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2012- 13ನೇ ಸಾಲಿನಲ್ಲಿ ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.
ಅನೇಕ ಅಭಿವೃದ್ಧಿ ಕಾರ್ಯ: ಜವಳಿ ಮತ್ತು ಕೈಮಗ್ಗ ಇಲಾಖೆ ಇಲ್ಲಿಯವರೆಗೂ ಅನೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದ ಅವರು, ರಂಗಂಪೇಟೆ ಮತ್ತು ರುಕ್ಮಾಪುರ ಗ್ರಾಮಗಳ 60 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನ ಪಡೆದಿದ್ದಾರೆ ಎಂದರು.
ಜೆಸ್ಕಾಂ ಇಲಾಖೆ ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರಿ ಮಾತನಾಡಿ, ಯುವಕ ಯುವತಿಯರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕಲಿಯುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದೆಂದು ಸಲಹೆ ನೀಡಿದರಲ್ಲದೆ, ಆಸಕ್ತಿಯಿಂದ ಕಲಿತರೆ ಯಾವುದೇ ವಿದ್ಯೆಯನ್ನು ಕರಗತ ಮಾಡಿಕೊಳ್ಳಬಹುದು ಎಂದರು.
ಖಾನಾಪುರ ಎಸ್ಎಚ್ ಗ್ರಾಪಂ ಸದಸ್ಯ ಚೆನ್ನಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುರೇಶ ಕೊಡೇಕಲ್, ಮಲ್ಲಿಕಾರ್ಜುನ ರಾಹುತ್, ಭೀಮಾಶಂಕರ ಠಾಣಾಗುಂದಿ, ಅನಿಲಕುಮಾರ ರಾಹುತ್ ಇದ್ದರು.
ವಿದ್ಯಾರ್ಥಿಗಳಾದ ಆನಂದ ಗೋಗಿ, ಅರುಣಕುಮಾರ ಸಾಲೆಗಾರ, ನೀಲಮ್ಮ ಪೊಲೀಸ್ ಪಾಟೀಲ್ ತಮ್ಮ ಅನಿಸಿಕೆ ಹಂಚಿಕೊಂಡರು. ಅಮರೇಶ ಚಿಲ್ಲಾಳ ನಿರೂಪಿಸಿದರು. ಬಸವರಾಜ ಯಾಳಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

