ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಗುಲ್ಬರ್ಗ: ನಗರದ 11 ಕೆ.ವಿ. ಜಯನಗರ ಮತ್ತು 11 ಕೆವಿಎಚ್ ಫೀಡರ್ ಮೇಲೆ ತುರ್ತು ದುರಸ್ತಿ ಕಾರ್ಯ ಜೂ. 27ರಂದು ಕೈಗೊಳ್ಳಲಾಗಿದೆ. ಮ.1.30 ರಿಂದ ಸಂಜೆ 5.30ರವರೆಗೆ ಅರಿಯಂತನಗರ, ಜಯನಗರ, ಓಕಳಿಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಸೂರ್ಯನಗರ, ತಿಲಕನಗರ, ತೇಲಕರ್ ಲೇಔಟ್, ಪೂಜಾ ಕಾಲೋನಿ, ಜಿಡಿಎ ಲೇಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯನಗರ, ಪಿಡಬ್ಲ್ಯೂಡಿ ಕ್ವಾರ್ಟರ್ಸ್, ಕೆಜಿಬಿ ಬ್ಯಾಂಕ್, ಪ್ರಶಾಂತನಗರ(ಎ) ಮತ್ತು ಡೆಂಟಲ್ ಕಾಲೇಜ್ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಟಂಟಂ ಪಲ್ಟಿ: ಇಬ್ಬರಿಗೆ ಗಾಯ
ಗುಲ್ಬರ್ಗ: ಟಂಟಂ ಉರುಳಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಅಲಗೂಡ ಕ್ರಾಸ್ ಹತ್ತಿರ ನಡೆದಿದೆ. ಅವರಾದ(ಬಿ) ಗ್ರಾಮದಿಂದ ಸುಶೀಲಾಬಾಯಿ ಪಾಟೀಲ್ ಎಂಬ ಮಹಿಳೆ ಟಂಟಂನಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಚಾಲಕನ ಅಲಕ್ಷ್ಯತದಿಂದ ಟಂಟಂ ಉರುಳಿ ಬಿದ್ದಿದ್ದು, ಸುಶೀಲಾಬಾಯಿ ಮತ್ತು ಚಾಲಕ ರವಿಕುಮಾರ ಗಾಯಗೊಂಡಿದ್ದಾರೆ. ಗುಲ್ಬರ್ಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಬಾ ಸುಲ್ತಾನ್ ಗಂಡ ಸೈಯ್ಯದ ಇರಫಾನ್ ಎಂಬ ಮಹಿಳೆ ಕಿರುಕುಳಕ್ಕೆ ಒಳಗಾದವರು. ನಗರದ ಬುಲಂದ ಪರವೇಜ್ ಕಾಲೋನಿಯ ತಾಯಬಾಳನ್ನು ಮುಂಬೈನ ಸೈಯ್ಯದ್ ಇರ್ಫಾನ್ ಜತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಕಾರು ಖರೀದಿ ಮಾಡಬೇಕಾಗಿದೆ ಎಂದು ಗಂಡ ತಾಯಬಾಗೆ ಬೆಲ್ಟ್ ಮತ್ತು ಕೈಯಿಂದ ಹೊಡೆಯುತ್ತಿದ್ದನು. ಇದರಿಂದ ಬೇಸತ್ತ ತಾಯಬಾ ತವರು ಮನೆಗೆ ಬಂದಿದ್ದಳು. ಇತ್ತೀಚೆಗೆ ಗಂಡ ಸೈಯ್ಯದ್ ಇರ್ಫಾನ್ ಗುಲ್ಬರ್ಗಕ್ಕೆ ಬಂದು 1 ಲಕ್ಷ ತೆಗೆದುಕೊಂಡು ಬರುವವರೆಗೂ ಮುಂಬೈಗೆ ಬರಬಾರದೆಂದು ಹೇಳಿ ಹೊಡೆದು ಹೋಗಿದ್ದಾನೆ. ಈ ಕುರಿತು ತಾಯಬಾ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪತ್ನಿಯ ಕೊಲೆ
ಗುಲ್ಬರ್ಗ: ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಂಗಳವಾರ ನಗರದ ನಯಾಮೊಹಲ್ಲಾ ಬಡಾವಣೆಯಲ್ಲಿ ನಡೆದಿದೆ. ಪರವೀನ ಬೇಗಂ ಗಂಡ ಶೇಖ ಮಹಿಬೂಬ್ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಮನೆಗೆ ಆಹಾರ ತೆಗೆದುಕೊಂಡು ಬಾ ಎಂದು ಹೇಳಿದ್ದಕ್ಕೆ ಗಂಡ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಕುರಿತು ಮೃತಳ ಸಹೋದರ ಅಲ್ಲಾವುದ್ದೀನ್ ಪಟೇಲ್ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

