'ಹಿಂದಿನ ನಿರ್ಣಯ ಮೊದಲು ಜಾರಿಗೊಳಿಸಿ'
ಕನ್ನಡಪ್ರಭ ವಾರ್ತೆ ಚಿತ್ತಾಪುರ ಜೂ.27
ಕಳೆದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸದೆ ಮುಂದಿನ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಬಾರದು ಎಂದು ಅಳ್ಳೋಳ್ಳಿ ಕ್ಷೇತ್ರದ ಸದಸ್ಯೆ ಸಿದ್ದಮ್ಮ ಕಾಶನೂರ ಒತ್ತಾಯಿಸಿದರು. ಅವರು ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವರದಿಯನ್ನು ಜಿಪಂ ಕಚೇರಿಗೆ ವರದಿ ಸಲ್ಲಿಸಿದೆ ಎಂದು ಹೇಳುತ್ತ ಬರುತ್ತಿರುವಿರಿ. ಇದರಿಂದ ಇಲ್ಲಿಯ ನಿರ್ಣಯಗಳಿಗೆ ಬೆಲೆಯಿಲ್ಲವೇ? ಎಂದು ಪ್ರಶ್ನಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿರಾದಾರ ವರದಿ ಜಿಪಂ ಕಳಿಸಲಾಗಿದೆ. ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ನಿರ್ಲಕ್ಷ್ಯ: ಚಿತ್ತಾಪುರ ಬಿಸಿಎಂ ಬಾಲಕಿಯರ ವಸತಿ ನಿಲಯದಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅಲ್ಲಿಯ ಮಕ್ಕಳಿಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಹಸಿಬಿಸಿ ಅನ್ನ ಹಾಕುತ್ತಾರೆ. ಬಕೀಟ್ ತಂಬಿಗೆಗಳಿಗೆ ಪರದಾಟುತ್ತಿದ್ದಾರೆ. ರಾತ್ರಿ ಪಾಳಿಗೆ ಕಾವಲುಗಾರರಿಲ್ಲ. ಅಲ್ಲಿಯ ಸಿಬ್ಬಂದಿ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ವರ್ಗಾವಣೆ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂದು ಅಳ್ಳಳ್ಳಿ ತಾಪಂ ಸದಸ್ಯೆ ಸಿದ್ದಮ್ಮ ಅವರು ಒತ್ತಾಯಿಸಿದರು. ಇದಕ್ಕೆ ಎಲ್ಲ ಸದಸ್ಯರಿಂದ ಬೆಂಬಲ ವ್ಯಕ್ತವಾಯಿತು. ಆಶಾ ಕಾರ್ಯಕರ್ತೆ ನೇಮಕದಲ್ಲಿ ತಾಪಂ ಸದಸ್ಯರಿಗೆ ನಿರ್ಲಕ್ಷಿಸಲಾಗಿದೆ ಎಂದು ತಾಪಂ ಸದಸ್ಯ ಸಿದ್ದಮ್ಮ ಅಳ್ಳಳ್ಳಿ ತಾಪಂ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.
ಕಳೆದ 6 ತಿಂಗಳಿಂದ ಸಾಮಾನ್ಯ ಸಭೆ ಕರೆದಿಲ್ಲ ಚುನಾವಣೆ ಮುಗಿದು 2 ತಿಂಗಳು ಕಳೆದಿವೆ. ಆದರೆ ಏಕೆ ಸಭೆ ಕರೆದಿಲ್ಲ? ಕ್ಷೇತ್ರದ ಸಮಸ್ಯೆ ಯಾರಿಗೆ ಕೇಳಬೇಕು? ಎಂದು ತಾಪಂ ಸದಸ್ಯ ನಿಂಗಣ್ಣ ಹುಳಗೋಳ ತಾಪಂ ಅಧಿಕಾರಿಗೆ ಪ್ರಶ್ನಿಸಿದರು. ಚುನಾವಣೆ ನಿಮಿತ್ತ ಸಭೆ ಕರೆದಿಲ್ಲ. ಮುಂದೆ 2 ತಿಂಗಳಿಗೊಮ್ಮೆ ಸಭೆ ಕರೆಯುವುದಾಗಿ ತಾಪಂ ಇಓ ಸುರೇಶ ಬಿರಾದಾರ ಸಭೆಗೆ ತಿಳಿಸಿದರು.
ಅವ್ಯವಸ್ಥೆ: ಮರತೂರನಲ್ಲಿ ಮೂರು ದಿನದಿಂದ ವಿದ್ಯುತ್ ಸಂಪರ್ಕವಿಲ್ಲ. ಇದರಿಂದ ಗ್ರಾಮದಲ್ಲಿ ಕಳ್ಳತನ ಹೆಚ್ಚಳವಾಗಿವೆ. ಹಾವು, ಚೇಳುಗಳ ಹಾವಳಿ ಬಹಳ ಇದೆ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪೋನ್ ಮಾಡಿದರೆ ಸ್ವೀಕರಿಸುವುದಿಲ್ಲ ಎಂದು ತಾಪಂ ಸದಸ್ಯ ಸಂಜಿವ ಮರತೂರ ಶಹಾಬಾದ್ ಜೆಸ್ಕಾಂ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಎಲ್ಲ ಸದಸ್ಯರು ದನಿಗೂಡಿಸಿದರು. ತಕ್ಷಣವೇ ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸೂಚಿಸಿದರು.
ತಂಡ ರಚಿಸಿ: ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಪರವಾಗಿ ಮಾಹಿತಿ ನೀಡಲು ಬಂದ ಅಧಿಕಾರಿಗೆ ಪ್ರಶ್ನಿಸಿ ಗ್ರಾಪಂ ಸದಸ್ಯರು ಓದು ಬರಹ ಬರದವರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತಡೆ ಹಿಡಿಯಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳ ತಂಡ ರಚಿಸಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ತೋನಸನಹಳ್ಳಿಯಲ್ಲಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ನೀಡಿ, ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ಸದಸ್ಯ ನಿಂಗಣ್ಣ ಹುಳಗೋಳ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

