ಎದೆ ಹಾಲು ಮಗುವಿಗೆ ಅಮೃತವಿದ್ದಂತೆ: ಡಾ. ಗುಣಕಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.28
ಗರ್ಭಿಣಿಯರು ಮೊದಲಿನಿಂದಲೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಅವರಿಗೆ ಹುಟ್ಟುವ ಮಕ್ಕಳು ಆರೋಗ್ಯವಂತಾರಾಗಿರುತ್ತಾರೆ. ಆಗಾಗ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ನೀವು ಬೆಳೆದ ಆಹಾರವನ್ನು ಮೊದಲು ನೀವು ಚೆನ್ನಾಗಿ ಉಪಯೋಗಿಸಬೇಕು. ಅಲ್ಲದೇ ಹುಟ್ಟಿದ ಮಗುವಿಗೆ ತಾಯಿಯ ಮೊಲೆ ಹಾಲು ಕುಡಿಸಬೇಕು. ಅದು ಮಗುವಿಗೆ ಅಮೃತವಿದ್ದಂತೆ ಎಂದು ವೈದ್ಯಾಧಿಕಾರಿ ಡಾ.ಎಶ್.ಎಂ.ಗುಣಕಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ಇವುಗಳ ಆಶ್ರಯದಲ್ಲಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಪೌಷ್ಟಿಕ ಆಹಾರ ಅಗತ್ಯ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು. ಹಣ್ಣು, ಹಾಲು, ತರಕಾರಿಗಳನ್ನು ಹೆಚ್ಚೆಚ್ಚು ನೀಡುವುದರಿಂದ ಮಗು ಆರೋಗ್ಯವಂತವಾಗಿ ಬೆಳೆಯುತ್ತದೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ತಾಯಂದಿರು ಈ ನಿಟ್ಟಿನಲ್ಲಿ ಮಗುವಿನ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು. ತಾಯಂದಿರೂ ತಮ್ಮ ಆರೋಗ್ಯದ ಬಗ್ಗೆ ಲಕ್ಷ್ಯ ವಹಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಭಾಗಮ್ಮ ಉದ್ಘಾಟಿಸಿದರು. ಸಿಆರ್ಪಿ ದೇವಿಂದ್ರಪ್ಪ ಈಟೆ ಮಾತಾನಾಡಿ, ಕಲಿಕೆ ಸಂಸ್ಥೆಯ ಈ ಆರೋಗ್ಯ ಕಾರ್ಯಕ್ರಮ ಉತ್ತಮವಾಗಿದ್ದು, ಅದರ ಲಾಭವನ್ನು ಊರಿನ ಜನ ಪಡೆಯಬೇಕಾದ ಅಗತ್ಯವಿದೆ. ತಾಯಂದಿರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಮಕ್ಕಳಿಗೆ ತಾಯಿಯ ಮೊದಲ ಹಾಲಿನ ಮಹತ್ವ, ಪೌಷ್ಟಿಕಾಂಶ ಆಹಾರದ ಬಗ್ಗೆ, ಸ್ವಚ್ಛತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಸಾರ್ವಜನಿಕರ ಸಹಕಾರ ಅಗತ್ಯ: ಕಾರ್ಯಕ್ರಮ ಸಂಯೋಜಕ ಈರಣ್ಣ ಬಿರಾದಾರ ಮಾತಾನಾಡಿ, ಕಲಿಕೆ ಸಂಸ್ಥೆ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಹೈಸ್ಕೂಲ್ವರೆಗೆ ತನ್ನ ಕಾರ್ಯಗಳನ್ನು ವಿಸ್ತರಿಸಿ ಉತ್ತಮವಾದ ಗುಣಾತ್ಮಕ ಶಿಕ್ಷಣ ನೀಡಲು ಬದ್ಧವಾಗಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಇನ್ನೂ ಉತ್ತಮವಾದ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಿದ್ದಪ್ಪ ಸಿಂಗೆ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪ್ರಿಯಾ ಸ್ವಾಗತಿಸಿದರು. ಈರಣ್ಣ ನಿರೂಪಿಸಿದರು. ಮಾಹಾದೇವಿ ರಾಮಣಗೌಡ ವಂದಿಸಿದರು. ಶಾಲೆಯ ಮುಖ್ಯಾಧ್ಯಾಪಕಿ ಮಧುಮತಿ, ರಜಿಯಾ ಬೇಗಂ, ಈರಮ್ಮ, ಪದ್ಮವಾತಿ, ಸಂಪತಕುಮಾರಿ, ಅನ್ನಪೂರ್ಣ, ತೋಟಮ್ಮ, ಕಾಂತಮ್ಮ, ಕಾಶಮ್ಮ, ಭಾಗಮ್ಮ, ಕಾಶಿಬಾಯಿ ಇತರರು ಇದ್ದರು. ಪಾಲಕರು ತಮ್ಮ ಮಕ್ಕಳನ್ನು ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

