ಗುಲ್ಬರ್ಗಾ

ಕುಂದನೂರನಲ್ಲಿ ಉಲ್ಬಣಿಸಿದ ವಾಂತಿ- ಭೇದಿ

Published On :

ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣದ ಬಳಿಯ ಕುಂದನೂರ ಗ್ರಾಮದಲ್ಲಿ ಗುರುವಾರ ರಾತ್ರಿಯಿಂದ ವಾಂತಿ- ಭೇದಿ ಉಲ್ಬಣಿಸಿದ್ದು, 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಸರ್ದಾರ ಪಟೇಲ್ (85) ಎಂಬ ವೃದ್ಧನನ್ನು ವಾಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗಕ್ಕೆ ಕಳುಹಿಸಿಲಾಗಿದೆ.
ಇಡೀ ಗ್ರಾಮದಲ್ಲಿ ವ್ಯಾಪಿಸಿದೆ: ಗುರುವಾರ ರಾತ್ರಿ ಏಕಾಏಕಿ ಪ್ರಾರಂಭವಾದ ವಾಂತಿ- ಭೇದಿ ಬೆಳಗಾಗುವುದರಲ್ಲಿ ಇಡೀ ಗ್ರಾಮದಲ್ಲಿ ವ್ಯಾಪಿಸಿದ್ದು, ಸುಮಾರು 30ಕ್ಕೂ ಹೆಚ್ಚು ಜನರು ಬಳಲುತ್ತಿದ್ದಾರೆ. ಸಂತೋಷ (6) ಮಗು ಸೇರಿದಂತೆ ಮಲ್ಲಣ್ಣ, ಮಮ್ತಾಜ ಬೇಗಂ, ಸರ್ದಾರ ಪಟೇಲ್, ಇಮಾಮಬೀ ಸೇರಿದಂತೆ ಹಲವರನ್ನು ವಾಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವರು ಗ್ರಾಮದ ಹಾಗೂ ವಾಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಿಷಯ ತಿಳಿದ ತಾಲೂಕು ವೈದ್ಯಾಧಿಕಾರಿ ಮಾನಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿರಾದಾರ, ನಂದಕುಮಾರ ಕುಲ್ಕರ್ಣಿ ಗ್ರಾಮಕ್ಕೆ ಭೇಟಿ ನೀಡಿದರು.
ಗ್ರಾಮದ ಶಾಲಾ ಕೋಣೆಯಲ್ಲಿ ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿದ್ದು, ಅಗತ್ಯ ಔಷಧ ಸಾಮಗ್ರಿಗಳನ್ನು ಒದಗಿಸಲಾಗಿದ್ದು, ಎಸಿಸಿ ಕಾರ್ಖಾನೆಯಿಂದ ಗ್ರಾಮದ ಎಲ್ಲ ಬಡಾವಣೆಗಳಿಗೆ ಶುದ್ಧ ಕುಡಿವ ನೀರು ಒದಗಿಸಲು ಕೋರಿದೆಂದು ಇಒ ಅಧಿಕಾರಿ ಸುರೇಶ ತಿಳಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷೆ ಸಂಗೀತಾ ರಾಜೇಂದ್ರ, ಸದಸ್ಯರಾದ ಮುಕ್ರಂ  ಪಟೇಲ್, ಇಫ್ತಿಯಾರ್ ಅಹ್ಮದ್, ಅಬ್ದುಲ್ ಸಮದ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ನೀರು ನಿಂತಿದ್ದೆ ಕಾರಣ: ಕುಂದನೂರ ಗ್ರಾಮದ ಬಳಿ ಹರಿವ ಭೀಮಾ ನದಿಯಲ್ಲಿ ಬೇಕಾಬಿಟ್ಟಿ ಮರಳು ಲೂಟಿ ಮಾಡಿದ್ದರಿಂದ ತೆಗ್ಗುಗಳು ಉಂಟಾಗಿದ್ದು, ಅಂಥ ತೆಗ್ಗು ನೀರಿನಲ್ಲಿ ನಿಂತ ನೀರಿನಿಂದ ವಾಂತಿ ಭೇದಿ ಪ್ರಾರಂಭವಾಗಿರಬಹುದು ಅಥವಾ ನದಿಗೆ ಬಂದ ಹೊಸ ನೀರಿನಿಂದಲು ಈ ಸಮಸ್ಯೆ ಪ್ರಾರಂಭವಾಗಿರಬಹುದು ಎನ್ನುತ್ತಾರೆ   ತಾಲೂಕು ವೈಧ್ಯಾಧಿಕಾರಿ ಮಾನಕರ್, ಇಲ್ಲಿಯ ಜನರು ಬಳಸುವ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆ ನಂತರ ಸೂಕ್ತ ಕಾರಣ ಗೊತ್ತಾಗುತ್ತದೆ ಎಂದು ಹೇಳಿದರು.
ಎಡಿಬಿ ವಿಳಂಬ: ಎಡಿಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಹಲವು ವರ್ಷಗಳಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಈ ಬಗ್ಗೆ ತಾಪಂ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ್ಯ ವಹಿಸಿದ್ದು ಇಂದಿನ ಸಮಸ್ಯೆಗೆ ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.