ಸುದ್ದಿ ಸಂಕ್ಷೇಪ
ಚಿಲ್ಲಾಳ ತಾಲೂಕು ಬಿಜೆಪಿ ಅಧ್ಯಕ್ಷ
ಶಹಾಪುರ: ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ ಅವರನ್ನು ತಾಲೂಕಾ ಬಿಜೆಪಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಪಕ್ಷದ ವೀಕ್ಷಕರಾಗಿ ಎಚ್ಕೆಡಿಬಿ ಮಾಜಿ ಅಧ್ಯಕ್ಷ ಮಹಾಂತಗೌಡ ಪಾಟೀಲ, ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ ಆಗಮಿಸಿದ್ದರು. ನೂತನ ಕಾರ್ಯದರ್ಶಿಯಾಗಿ ಶಾಂತವೀರ ಪಾಟೀಲ, ರಾಘವೇಂದ್ರ ಗಿರಣಿ ಆಯ್ಕೆಯಾದರು. ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಕಾಮಾ, ಅಶೋಕ ಮಲ್ಲಾಬಾದಿ, ತ್ರಿಶೂಲ ಹವಲ್ದಾರ, ದೇವಿಂದ್ರ ಕೋನೇರ, ಮಂಜು ಗಂಗಾಧರಮಠ, ಬಸವರಾಜ ಅರುಣಿ, ನಾಗರಾಜ ಪತ್ತಾರ, ಅಂಬಣ್ಣ ನಾಯ್ಕೋಡಿ, ಶಾಂತಕುಮಾರ ಸ್ವಾಮಿ, ಪ್ರವೀಣ ವನದುರ್ಗ, ಭೀಮಣ್ಣಗೌಡ, ಶಂಕರ ಕೋನೇರ, ರಾಕೇಶ ಚಿಲ್ಲಾಳ, ಹಣಮಂತ, ಮಲ್ಲಿಕಾರ್ಜುನ ಇತರರು ಇದ್ದರು.
ಪದಾಧಿಕಾರಿಗಳ ನೇಮಕ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳ ಕೆಲವು ಪ್ರಮುಖ ಹೋರಾಟಗಾರರನ್ನು ಕೇಂದ್ರೀಯ ಹೋರಾಟ ಸಮಿತಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವೇಂದ್ರಪ್ಪ, ಗುಣವಂತರಾವ್ ಮಂಗಳೂರೆ, ಅಲ್ಲಮಪ್ರಭು ಬೆಟ್ಟದೂರ, ಡಾ.ರಜಾಕ್ ಉಸ್ತಾದ, ಚನ್ನಬಸವಣ್ಣ, ಆರ್.ಕೆ.ಹುಡಗಿ, ರಾಚಯ್ಯ ಸ್ವಾಮಿ ಅವರನ್ನು ಉಪಾಧ್ಯಕ್ಷರಾಗಿ, ಡಾ. ವಿಕ್ರಮ ವಿ.ಪಾಟೀಲ್ ಪ್ರಧಾನ ಕಾರ್ಯದರ್ಶಿಯಾಗಿ, ಶಿವಶಂಕರ ಗಾರಂಪಳ್ಳಿ ಕೋಶಾಧ್ಯಕ್ಷರಾಗಿ, ಡಾ.ಅಶೋಕ ಕುಮಾರ ನಾಗೂರೆ, ಶಿವಕುಮಾರ ಕುಕುನೂರ ಹಾಗೂ ಮಲ್ಕಪ್ಪ ಪಾಟೀಲ್ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಂಖ್ಯಿಕ ನೌಕರ
ಸಂಘ ಅಸ್ತಿತ್ವಕ್ಕೆ
ಯಾದಗಿರಿ: ಜಿಲ್ಲೆಯಲ್ಲಿ ನೂತನವಾಗಿ ಸಾಂಖ್ಯಿಕ ಸಹಾಯಕರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಇಲ್ಲಿಯ ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಾಗರಾಜ ನಾಗೂರ (ಅಧ್ಯಕ್ಷ), ಕೂಡ್ಲಪ್ಪ ಗೌಡ (ಗೌರವಾಧ್ಯಕ್ಷ), ಶಶಿಧರ ಹಿರೇಮಠ (ಉಪಾಧ್ಯಕ್ಷ), ಬಾಲಾಜಿ ಬಿರಾದರ (ಪ್ರಧಾನ ಕಾರ್ಯದರ್ಶಿ), ಶರಣಮ್ಮ (ಜಂಟಿ ಕಾರ್ಯದರ್ಶಿ), ರಂಗಪ್ಪ ಮಾಲಿಪಾಟೀಲ್ (ಖಜಾಂಜಿ), ಪ್ರಶಾಂತ (ಸಲಹೆಗಾರ) ಅವರನ್ನು ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

