ವೀರೇಂದ್ರ ಪಾಟೀಲರ ಜನ್ಮ ದಿನಾಚರಣೆ
ಹುಣಸಗಿ: ಪಟ್ಟಣದ ನಾರಾಯಣಪುರ ಮುಖ್ಯ ರಸ್ತೆಯಲ್ಲಿರುವ ದಿ.ವೀರೇಂದ್ರ ಪಾಟೀಲರ ವೃತ್ತದ ಬಳಿ ಗುರುವಾರ ಅವರ ಜನ್ಮದಿನಾಚರಣೆಯನ್ನು ಸ್ಫೂರ್ತಿ ಗ್ರೂಪ್ಸ್ ವತಿಯಿಂದ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಹೊನ್ನಕೇಶವ ದೇಸಾಯಿ, ವೀರೇಂದ್ರ ಪಾಟೀಲರು ರಾಷ್ಟ್ರದ ಹೆಮ್ಮೆಯ ನಾಯಕರ ಪೈಕಿ ಪ್ರಮುಖರು. ಸಮಾಜ ಸೇವೆಯಿಂದ ಹೆಚ್ಚೆಚ್ಚು ಹೆಸರಾಗಿದ್ದವರು. ಅವರು ನಿಧನರಾಗಿ ಅನೇಕ ವರ್ಷಗಳೇ ಕಳೆದರೂ, ನಮ್ಮ ಮನದಲ್ಲಿ ಅವರು ಹೆಸರು ಅಚ್ಚಳಿಯದೇ ಉಳಿದಿದೆ. ಅದಕ್ಕೆ ಅವರು ಮಾಡಿದ ಜನಸೇವೆಯೇ ಕಾರಣ ಎಂದು ಹೇಳಿದರು.ಎಂ.ಜಿ ಕೊಣ್ಣೂರ ಮಾತನಾಡಿ, ಪಾಟೀಲರ ಸಮಾಜಸೇವೆ ನಮಗೆಲ್ಲರಿಗೂ ಆದರ್ಶ. ಹೈದರಾಬಾದ್ - ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆಗಳು ಬರಲು ಪ್ರಮುಖ ಪಾತ್ರವಹಿಸಿದ ಪಾಟೀಲರ ಕೊಡುಗೆ ಅಪಾರ ಎಂದು ಹೇಳಿದರು. ಪ್ರದೀಪ ಮೀರಜಕರ್, ಮಹೇಶ ಕುಪ್ಪಿ ವೀರೇಂದ್ರ ಪಾಟೀಲರ ಜೀವನದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಅನಿಲ್ ಬಳಿ, ವಿಜಯಕುಮಾರ ದಂಡಿನ್, ನಾಗರಾಜ ಡಂಗಿ, ಚಂದ್ರಶೇಖರ, ಅಂಬರೀಶ ಆರಮುಗ, ರಾಘವೇಂದ್ರ, ಆದಪ್ಪ, ಯಲ್ಲಯ್ಯ ಗುತ್ತೇದಾರ ಇತರರು ಇದ್ದರು.
ಶಿವಯೋಗಿಗಳ ಮೂರ್ತಿ ಮೆರವಣಿಗೆ
ಯಾದಗಿರಿ: ಅಮೃತ ಶಿಲೆಯಿಂದ ನಿರ್ಮಿಸಿರುವ ತಾಲೂಕಿನ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗಿಗಳ ಮೂರ್ತಿಯನ್ನು ನಗರದಲ್ಲಿ ಶುಕ್ರವಾರ ಭವ್ಯ ಮೆರವಣಿಗೆ ಮಾಡಲಾಯಿತು. ಶುಕ್ರವಾರ ನಗರದ ಬಸವೇಶ್ವರ ಗಂಜ್ನಿಂದ ಪ್ರಾರಂಭವಾದ ಮೆರವಣಿಗೆಗೆ ಅಬ್ಬೆತುಮಕೂರಿನ ಗಂಗಾಧರ ಸ್ವಾಮೀಜಿ ಚಾಲನೆ ನೀಡಿದರು. ಸಹಸ್ರಾರು ಭಕ್ತರ ಮಧ್ಯೆ ಡೊಳ್ಳು ಕುಣಿತ ಮತ್ತು ಮಾತೆಯರಿಂದ ತನಾರತಿ ಹಿಡಿದ ಮೆರವಣಿಗೆಯು, ನಗರದ ಮೈಲಾಪುರ ಬೇಸ್, ಗಾಂಧಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಾಗಿತು. ಶಿವಯೋಗಿಗಳ ಮೂರ್ತಿ ಮಾ. 5ರಂದು ಬಾಳೆಹೊನ್ನೂರಿನ ಸೋಮೇಶ್ವರ ಶಿವಾಚಾರ್ಯರ ಅಮೃತ ಹಸ್ತದಿಂದ ಹೆಡಗಿಮದ್ರಿ ಗ್ರಾಮದ ಶಾಂತ ಶಿವಯೋಗಿಗಳ ಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಮೆರವಣಿಗೆಯಲ್ಲಿ ಶಾಸಕ ಡಾ. ಎ.ಬಿ. ಮಾಲಕರಡ್ಡಿ, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಮುಖಂಡರಾದ ಡಾ. ಶರಣಭೂಪಾಲರಡ್ಡಿ ನಾಯ್ಕಲ್, ವೆಂಕಟರಾವ ಮಾಲಿಪಾಟೀಲ್, ನಾಗರಡ್ಡಿ ಅಣಬಿ, ರಾಮರಡ್ಡಿ ಬನ್ನೆಟ್ಟಿ, ಅಮರೇಶ ಕೆಂಭಾವಿ, ಸುರೇಶ ಕೆಂಭಾವಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

