ಗುಲ್ಬರ್ಗಾ

ನೆಲ, ಜಲದೊಂದಿಗೆ ಕನ್ನಡವೂ ಉಳಿಸಿ: ಸೊನ್ನಶ್ರೀ

Published On :

ಕನ್ನಡಪ್ರಭ ವಾರ್ತೆ, ಜೇವರ್ಗಿ, ಮಾ.5
ನೆಲ, ಜಲ, ಸಂಸ್ಕೃತಿ ಉಳಿಸಿಕೊಂಡು ಬಂದಾಗ ನಮಗೆ ಗೌರವ ಸಿಗುತ್ತದೆ. ಪರಿಷತ್ತು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗ್ರಾಮೀಣ ಭಾಗದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದ ಆವರಣದಲ್ಲಿ ಸೋಮವಾರ ನಡೆದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ವೀರಣ್ಣ ಪಡಶೆಟ್ಟಿ ಮಾತನಾಡಿ, ಜೇವರ್ಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇಲ್ಲಿ ಸರ್ಕಾರಿ ಸೌಲಭ್ಯಗಳು ಹೆಚ್ಚು ದೊರಕಿದರೂ ಈ ಪ್ರದೇಶದ ಜನತೆ ಶಿಕ್ಷಣದತ್ತ ಹೆಚ್ಚು ಒಲವು ತೋರುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಖ್ಯಾತ ರಂಗಕರ್ಮಿ ಎಲ್.ಬಿ.ಕೆ. ಆಲ್ದಾಳ, ಸುರೇಶ ಸಜ್ಜನ, ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಶರಣು ಗದ್ದುಗೆ, ಡಿ.ಬಿ. ಪಾಟೀಲ್, ಭುವನೇಶ್ವರಿ ಚಿಮಕೊಡೆ, ಹಬೀಬ್ ಪಟೇಲ, ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ ಆಗಮಿಸಿದ್ದರು.
ಪುಸ್ತಕ ಬಿಡುಗಡೆ: ಶಾಸಕ ನರಿಬೋಳ ಅವರು 'ಸಗರನಾಡು ಸಂಭ್ರಮ' ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಭಾವ ಪಲ್ಲಕ್ಕಿಯ ಪ್ರೇಮ ಪಾರಿವಾಳ, ಬದುಕಿನ ಗೂಡಾರ್ಥ, ಛಲವಂಥ ಶರಣರ ಜೀವನ ಚರಿತ್ರೆ, ಪ್ರೊ. ವೀರಣ್ಣ ಪಡಶೆಟ್ಟಿ ಅವರ ಜೀವನ ಚರಿತ್ರೆ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಮಧ್ಯಾಹ್ನ ನಡೆದ ಜೇವರ್ಗಿ ಸಾಹಿತ್ಯ ಚಿಂತನಗೋಷ್ಠಿಯಲ್ಲಿ ಜನಪದ ಸಾಹಿತ್ಯ ಕುರಿತು ಡಾ. ಘಾಳೆಪ್ಪ ಪೂಜಾರಿ, ತತ್ವ ಪದಕಾರರ ಕುರಿತು ಪ್ರೊ. ಶಿವರಾಜ ಪಾಟೀಲ್, ವಚನಕಾರರ ಕುರಿತು ಡಾ. ಮಹಾಂತಗೌಡ ಪಾಟೀಲ್ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಪ್ರಭಾಕರ ಸಾತಖೇಡ ಮಾತನಾಡಿದರು.
ಕವನ ವಾಚನ: ಮಧ್ಯಾಹ್ನ 2 ಗಂಟೆಗೆ ನಡೆದ ಕವಿಗೋಷ್ಠಿಯನ್ನು ಅವ್ವಣಗೌಡ ಪಾಟೀಲ್ ಉದ್ಘಾಟಿಸಿದರು. ಕವಿಗೋಷ್ಠಿಯಲ್ಲಿ ಸಿ.ಎಸ್. ಆನಂದ, ಸುನಂದಾ ಕಲ್ಲಾ, ಚಂದ್ರಶೇಖರ ದೇವಿಕೇರಿ, ಬಸಯ್ಯ ಸಾಲಿಮಠ, ಶಿವಪುತ್ರ ನೆಲ್ಲಗಿ, ಮಹಾದೇವಿ ಸಿಂಪಿ ಸೇರಿದಂತೆ 32 ಜನ ಕವಿಗಳು ಕವನ ವಾಚಿಸಿದರು. ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಅಬ್ದುಲ್ ಕರೀಂ ಮಾತನಾಡಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ ನಿರೂಪಿಸಿದರು.
ಮೆರವಣಿಗೆ: ಸಮ್ಮೇಳಾನಾಧ್ಯಕ್ಷ ಪ್ರೊ. ವೀರಣ್ಣ ಪಡಶೆಟ್ಟಿ ಅವರೊಂದಿಗೆ ಸಂವಾದ ನಡೆಯಿತು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿರುಪಾಕ್ಷಪ್ಪ ಹಿರೇಗೌಡ, ಮಲ್ಲಾರೆಡ್ಡಿ, ಹುಸೇನ ಬಾಷಾ ಮುರಗಾನೂರ, ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸೊನ್ನ ಗ್ರಾಮದ ಪ್ರಮುಖ ಬೀದಿಗಳಿಂದ ವೇದಿಕೆಯವರೆಗೆ ಸಕಲ ವಾದ್ಯ ಮೇಳ, ಶಾಲಾ ಮಕ್ಕಳ ನೃತ್ಯ, ಡೊಳ್ಳು ಕುಣಿತ, ಹಲಗೆಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಶಿವುಕುಮಾರ ಬಿದರಿ, ಶರಣಗೌಡ ಬಿರಾದಾರ, ಶಂಕರಗೌಡ ಹಾಲಗಡ್ಲಾ, ಕವಿತಾ ಹಳ್ಳಿ, ಅಮೃತ ದೊಡ್ಡಮನಿ, ವಿರೇಶ ಕಂದಗಲ, ಕರಬಸಪ್ಪ ಬಿಲ್ಲಾರ, ಮಂಜುನಾಥ ಹೇರೂರ, ಸಿದ್ದರಾಮ ಜಗಶೆಟ್ಟಿ, ರಾಜಕುಮಾರ ಸುಂಬಡ, ಬಸವರಾಜ ಕಲ್ಲಾ, ಗಿರೀಶಗೌಡ ಇನಾಮದಾರ, ಕಾಶೀಂ ಪಟೇಲ್, ಬಸವಂತ್ರಾಯಗೌಡ ಪಾಟೀಲ್, ಡಾ. ಅಮರೇಶ ಕೋಳಕೂರ, ಲಾಲಪ್ಪ ನಾಯಕ, ದಾನಪ್ಪಗೌಡ ಹಳಿಮನಿ ಸೇರಿದಂತೆ ಸಾವಿರಾರು ಕನ್ನಡಾಭಿಮಾನಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ವಿವಿಧ ಸಮುದಾಯದ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಮ್ಮೇಳನದ ನಿರ್ಣಯಗಳು: ಸೊನ್ನದಲ್ಲಿ ನಡೆದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ಮಂಡಿಸಲಾಯಿತು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸಗರನಾಡು ಶರಣರ ಅಧ್ಯಯನ ಪೀಠ ಸ್ಥಾಪನೆ, ಜೇವರ್ಗಿ ಪಟ್ಟಣದಲ್ಲಿ ರಂಗ ಭವನ ನಿರ್ಮಾಣ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು, ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು, ಆಹಾರ ಸಂಸ್ಕರಣ ಘಟಕ ಕಾಮಗಾರಿ ಬೇಗನೆ ಪ್ರಾರಂಭಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.