ಗುಲ್ಬರ್ಗಾ

ಎಸ್ಬಿಎಚ್‌ನಿಂದ ಬಡ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಪರಿಕರ ವಿತರಣೆ

Published On :

ನಗರದಲ್ಲಿ ಸಂಗಮೇಶ್ವರ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್(ಎಸ್ಬಿಎಚ್) ತನ್ನ ಸಾಮಾಜಿಕ ಬ್ಯಾಂಕಿಂಗ್(ಸೋಸಿಯಲ್ ಬ್ಯಾಂಕಿಂಗ್) ಯೋಜನೆಯಡಿಯಲ್ಲಿ ವಿಶ್ವ ಮಹಿಳಾ ದಿನವಾದ ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿತು.
ಶೇಖ್ ರೋಜಾ ಬಡಾವಣೆಯ ಸರ್ಕಾರಿ ಉರ್ದು ಶಾಲೆಯ ಬಡ ಪ್ರತಿಭಾವಂತ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ತಲಾ 1 ಸಾವಿರ ರು. ಮೌಲ್ಯದ ಅಧ್ಯಯನ ಪರಿಕರಗಳನ್ನು ನೀಡಿತು. ಕೂಡಿ ಕಳೆಯುವ ಲೆಕ್ಕದಲ್ಲೇ ಸದಾಕಾಲ ಮಗ್ನರಾಗಿರುವ ಬ್ಯಾಂಕ್ ಅಧಿಕಾರಿಗಳು ತುಂಬ ತನ್ಮಯರಾಗಿ ಈ ಶಾಲೆಯಲ್ಲಿ 2 ಗಂಟೆ ನಡೆದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಮಕ್ಕಳೊಂದಿಗೆ ನಕ್ಕು ನಲಿದರು. ಶಾಲೆಯ ಮುಖ್ಯಗುರು ಕಮಲಾ ಕುಲಕರ್ಣಿ ಮಾತನಾಡಿ, ವಿಶ್ವ ಮಹಿಳಾ ದಿನವನ್ನು ಮಕ್ಕಳಿಗೆ ಉಡುಗೋರೆ ಕೊಡುವ ಮೂಲಕ ಆಚರಿಸಲು ಎಸ್ಬಿಎಚ್ ತಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದರು. ಎಸ್ಬಿಎಚ್ ಸಂಗಮೇಶ್ವರ ಕಾಲೋನಿ ಶಾಖೆ ವ್ಯವಸ್ಥಾಪಕ ಉಸ್ಮಾನ್ ಪಟೇಲ್ ಬಿ.ಕೆ., ಬ್ಯಾಂಕ್ ಅಧಿಕಾರಿ ಉಸ್ಮಾನ್ ಪಟೇಲ್, ಬ್ಯಾಂಕಿನ ಪ್ರೋಬೇಷನರಿ ಅಧಿಕಾರಿ ಮನದೀಪ್ ನೇಗಿ ಮಾತನಾಡಿದರು. ಸಿಆರ್ಸಿ ಉಸ್ಮಾನ್ ಪಾಶಾ, ಅನ್ವರ್ ಪಟೇಲ್, ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕ ವೃಂದದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.