ಗುಲ್ಬರ್ಗಾ

ಸಾರಿಗೆ ನೌಕರರ ಸಮಸ್ಯೆ: ಕೇಂದ್ರ ಭವಿಷ್ಯ ನಿಧಿ ಆಯುಕ್ತರನ್ನು ಕಾಣಲು ನಿರ್ಧಾರ

Published On :

ಇಲ್ಲಿನ ಎನ್‌ಇಕೆಆರ್ಟಿಸಿ ಅಧ್ಯಕ್ಷ ಶಿವಾನಂದ ವಿ. ಕಲ್ಲೂರ ಹಾಗೂ ವಾಕರಸಾ ಸಂಸ್ಥೆ ಅಧ್ಯಕ್ಷ ಎಮ್.ಎಸ್. ಕರಿಗೌಡರ ಇಬ್ಬರೂ ಹುಬ್ಬಳ್ಳಿಯಲ್ಲಿ ಈಚೆಗೆ ಮಹತ್ವದ ಸಭೆ ನಡೆಸಿ ವಿಜಾಪುರ ಸಾರಿಗೆ ಸಂಸ್ಥೆಯ ನೌಕರರ ಭವಿಷ್ಯ ನಿಧಿ ಸಮಸ್ಯೆ ಪರಿಹರಿಸಲು ಕೇಂದ್ರ ಕಾರ್ಮಿಕ ಆಯುಕ್ತರನ್ನು ಶೀಘ್ರವೇ ಭೇಟಿಯಾಗಲು ನಿರ್ಧರಿಸಿದ್ದಾರೆ.
ಸಭೆಯಲ್ಲಿ ವಾಕರಸಾ ಸಂಸ್ಥೆ ಕೇಂದ್ರ ಕಚೇರಿ, ಸಹಾಯಕ ಲೆಕ್ಕಾಧಿಕಾರಿ ಪ್ರಕಾಶ ಕರಗುದರಿ ಹಾಗೂ ವಿಜಾಪುರ ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಮಹಾಂತೇಶ ಕರಾಳೆ ರವರನ್ನೊಳಗೊಂಡು ಮಹತ್ವದ ಚರ್ಚೆ ನಡೆಯಿತು. 1998ನೇ ಸಾಲಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ನೇಮಕಾತಿಗೊಂಡು ಸುಮಾರು 12 ಸಾವಿರ ಜನ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿಜಾಪುರ ವಿಭಾಗವು ವಾ.ಕ.ರ.ಸಾ.ಸಂಸ್ಥೆಯ ವಿಭಾಗಗಳೊಂದಾಗಿತ್ತು.
ಕಡಿತ: ಪ್ರಸ್ತುತ ಈಕರಸಾ ಸಂಸ್ಥೆಯಲ್ಲಿ ವಿಲೀನಗೊಂಡಿರುವುದರಿಂದ ವಿಜಾಪುರ ವಿಭಾಗದ 1998ರ ನಂತರ ನೇಮಕಾತಿ ಹೊಂದಿದ ಸಿಬ್ಬಂದಿ ಅವರ ವೇತನದಲ್ಲಿ ಭವಿಷ್ಯ ನಿಧಿಯ ಮೊತ್ತವನ್ನು ಕಡಿತಗೊಳಿಸಿರುತ್ತಾರೆ.
ಕಡಿತಗೊಂಡ ಮೊತ್ತವು ಕರಾರಸಾ ಸಂಸ್ಥೆ ಭವಿಷ್ಯ ನಿಧಿ ನ್ಯಾಸ ಮಂಡಳಿಗೆ ಜಮೆಯಾಗಿರುವುದಿಲ್ಲ. ಇದರಿಂದ ನೌಕರರ ಸಮಸ್ಯೆಗಳು ಹೆಚ್ಚುತ್ತಲಿದ್ದು, ಭವಿಷ್ಯ ನಿಧಿ ನ್ಯಾಸ ಮಂಡಳಿಯಿಂದ ಸಾಲ ತೆಗೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗನೆ ನೌಕರರ ವೇತನದಲ್ಲಿ ಕಡಿತಗೊಂಡ ಭವಿಷ್ಯ ನಿಧಿ ಮೊತ್ತವನ್ನು ಕರಾರಸಾ ಸಂಸ್ಥೆ, ಭವಿಷ್ಯ ನಿಧಿ ನ್ಯಾಸ ಮಂಡಳಿಗೆ ಜಮೆ ಮಾಡಲು ಹಾಗೂ ಕೇಂದ್ರ ಭವಿಷ್ಯನಿಧಿ ಆಯುಕ್ತ ಆರ್.ಸಿ. ಮಿಶ್ರಾ ಅವರನ್ನು ಹೊಸ ದೆಹಲಿಯಲ್ಲಿ ಭೇಟಿ ಮಾಡಿ ಈ ವಿಚಾರ ಚರ್ಚಿಸಿ ಪರಿಹಾರ ಹುಡುಕುವ ಬಗ್ಗೆ ಈ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಣಪ್ಪ ಅಭಿನಂದನೆ
ಗುಲ್ಬರ್ಗ:
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯಿಂದ ಚುನಾವಣೆ ನಡೆಸಿಕೊಟ್ಟ ಜಿಲ್ಲಾಧಿಕಾರಿ, ಎಸ್ಪಿ, ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಮತದಾರರಿಗೆ ಬಿಜೆಪಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

11ರಂದು ನಿಷೇಧಾಜ್ಞೆ
ಗುಲ್ಬರ್ಗ:
ಜಿಲ್ಲೆಯ ನಗರ ಸ್ಥಳೀಯ ಚುನಾವಣೆ ಮತ ಎಣಿಕೆ ಆಯಾ ತಾಲೂಕಾ ಕೇಂದ್ರ ಸ್ಥಾನಗಳಲ್ಲಿ ಮಾ. 11ರಂದು ಬೆಳಗ್ಗೆ 8 ಗಂಟೆಯಿಂದ ನಡೆಸಲಾಗುತ್ತದೆ. ಮತ ಎಣಿಕೆ ಕೇಂದ್ರಗಳ ಸುತ್ತ-ಮುತ್ತ 250 ಮೀಟರ್ ವ್ಯಾಪ್ತಿಯಲ್ಲಿ ಮತ ಎಣಿಕೆ ಮುಗಿಯುವವರೆಗೆ ಕಲಂ 144 ಸಿಆರ್ಪಿಸಿ ಪ್ರಕಾರ ಜಿಲ್ಲಾಧಿಕಾರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.