ಗುಲ್ಬರ್ಗಾ

ಕೆಬಿಜೆಎನ್ನೆಲ್ ಕಚೇರಿ ಎದುರು ದಸಂಸ ಧರಣಿ

Published On :

ಶಹಾಪುರ: ನೀರಿನ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದು ದಸಂಸ ಕಾರ್ಯಕರ್ತರು ಕೆಬಿಜೆಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
  ಕಳೆದ ಮೂರು ವರ್ಷಗಳಿಂದ ಜೆಬಿಸಿ ಹೊಲಗಾಲುವೆಯಿಂದ ಹೆಚ್ಚುವರಿ ನೀರು ಹರಿಯುತ್ತಿದ್ದು, ಜಮೀನಿನಲ್ಲಿ ನೆಟ್ಟ ಮಾವು, ತೆಂಗು, ಲಿಂಬು ಗಿಡಗಳು ಕೊಳೆತು ಹೊಗಿವೆ. ಬಸಿಗಾಲುವೆ ಕಾಮಗಾರಿ ಮಾಡುವಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೇವರ್ಗಿ ತಾಲೂಕು ದಸಂಸ ಕಾರ್ಯಕರ್ತರು ಇಲ್ಲಿಯ ಭೀಮರಾಯನಗುಡಿ ಕೆಬಿಜೆಎನ್ನೆಲ್ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಕ್ರಮ ಕೈಗೊಂಡಿಲ್ಲ: ಅನೇಕ ಬಾರಿ ಭೀಮಗುಡಿ ಮುಖ್ಯ ಎಂಜೀನಿಯರ್ಗಳಿಗೆ ಮನವಿ ಮಾಡಿಕೊಂಡರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಸಮರ್ಥರಾಗಿದ್ದಾರೆಂದು ಆರೋಪಿಸಿದರು.
  ಈ ಸಂದರ್ಭದಲ್ಲಿ ಗುಲ್ಬರ್ಗ ಜಿಲ್ಲಾ ದಸಂಸ ಸಂಘಟನಾ ಸಂಚಾಲಕ ಪುಂಡಲೀಕ ಗಾಯಕವಾಡ ಮಾತನಾಡಿ, ಕೆಬಿಜೆಎನ್ಎಲ್ ಅಧಿಕಾರಿಗಳು, ಇಲಾಖೆ ಜೆಇಗಳು ಕಾಮಗಾರಿ ನಿರ್ಮಾಣದಲ್ಲಿ ಹಣಕಾಸಿನ ತೊಂದರೆ ಎನ್ನುತ್ತಿದ್ದಾರೆ. ಕ್ರಿಯಾ ಯೋಜನೆಯಲ್ಲಿ ಹಣ ಒದಗಿಸಿಲ್ಲವೆಂದು ಕುಂಟ ನೆಪ ಹೇಳಿ ಪಟ್ಟಭದ್ರ ಹಿತಾಸಕ್ತಿಗಳ ಇಚ್ಛಾಶಕ್ತಿಗೆ ಸಹಕಾರ ನೀಡುತ್ತಿದ್ದಾರೆ. ಮುಖ್ಯ ಎಂಜಿನಿಯರಗಳ ಧೋರಣೆ ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಜವಾಬ್ದಾರಿ: ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಎಂಜೀನಿಯರ್ ಜುಮ್ಮನಾಳರು ಧರಣಿ ನಿರತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಜವಾಬ್ದಾರಿತನ ಪ್ರದರ್ಶನ ಮಾಡಿದ್ದಾರೆ. ಇದು ಅಧಿಕಾರಿತನದ ಬಾಲಿಶತನ ಕ್ರಮವಾಗಿದೆ ಎಂದು ರಾಜ್ಯ ಚೆಲುವಾದಿ ಮಾಹಾಸಭಾದ ಮುಖಂಡರಾದ ಮಾರುತಿ ಜಂಬಗಾರವರು ಆರೋಪಿಸಿದರು.
 ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕ ಹೊನ್ನಪ್ಪ ಗಂಗನಾಳ, ದಲಿತ ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಈರಣ್ಣ ಮೌರ್ಯ, ದಸಂಸ ಸಂಚಾಲಕ ಸಿದ್ರಾಮಕಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.