ಹೊಸಹಳ್ಳಿಯಲ್ಲಿ ಹನುಮ ಜಾತ್ರೆ ವೈಭವ
ಹುಣಸಗಿ: ಇಲ್ಲಿಗೆ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಹನುಮ ದೇವರ ಜಾತ್ರೆ ವೈಭವದಿಂದ ನಡೆಯಿತು.
ಸಾಮೂಹಿಕ ಪವಮಾನ ಹೋಮವನ್ನು ಪೂಜ್ಯರಾದ ಪುರುಷೊತ್ತಮ ಆಚಾರ್ಯ ಪುರೋಹಿತ್ ಅವರು ನಡೆಸಿಕೊಟ್ಟರು. ದೇವಸ್ಥಾನದ ಅರ್ಚಕರಾದ ವೇ.ಮೂ ಹನುಮಂತಾಚಾರ್ಯ ಜೋಷಿ ಹನುಮನ ಪೂಜಾ ಕಾರ್ಯಕ್ರಮಗಳು ನಡೆಸಿದರು.
ಸೋಮಶೇಖರ ಜೋಷಿ ನೇತೃತ್ವದಲ್ಲಿ ಸಾವಿರಾರು ಭಕ್ತರು ಹನುಮನ ನಾಮಸ್ಮರಣೆ ಮಾಡಿದರು. ಒಂದು ತಿಂಗಳವರೆಗೆ ನಡೆದ ವಿಶೇಷ ಪುರಾಣವನ್ನು ಮಂಗಲಗೊಳಿಸಲಾಯಿತು. ಡೊಳ್ಳುಕುಣಿತ, ಹೋಮ ಕಾರ್ಯಕ್ರಮ, ಮಹಾಪ್ರಸಾದ, ಪಲ್ಲಕ್ಕಿ ಉತ್ಸವ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆದವು. ರಮೇಶ್ ಭಟ್, ಮನೋಹರ್ ಭಟ್, ಮಹೇಶ ಭಟ್ ಪಲ್ಲಕ್ಕಿ ಉತ್ಸವವನ್ನು ನಡೆಸಿಕೊಟ್ಟರು. ಕೃಷ್ಣಾಜೀರಾವ ಕುಲಕರ್ಣಿ, ರಾಮರಾವ ದ್ಯಾಮನಹಾಳ, ಪ್ರಭಾಕರ ಜೋಷಿ ಇತರರು ಇದ್ದರು.
--
ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಕರವೇ ನೇತೃತ್ವ
ಕೆಂಭಾವಿ: ಕನ್ನಡ ನುಡಿ, ಭಾಷೆ, ಗಡಿಯ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಯೊಂದು ಸಂಘಟನೆಗಳು ಶ್ರಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ ಹೇಳಿದರು. ಸಮೀಪದ ಗೊಡ್ರಿಹಾಳ ಗ್ರಾಮದಲ್ಲಿ ಕರವೇ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಗ್ರಾಮಗಳಲ್ಲಿರುವ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಕನ್ನಡಪರ ಹೋರಾಟಗಳಿಗೆ ಕರವೇ ಮುಂಚೂಣಿಯಲ್ಲಿದೆ ಎಂದು ಹೇಳಿದರು. ಸಮಾರಂಭದ ಸಾನ್ನಿಧ್ಯವನ್ನು ಹೆಗ್ಗಣದೊಡ್ಡಿ ಧರ್ಮರಮಠದ ಉತ್ತರಾಧಿಕಾರಿ ರಾಜು ಧಣಿ ವಹಿಸಿದ್ದರು. ಕರವೇ ಕೆಂಭಾವಿ ಹೋಬಳಿ ಘಟಕದ ಉಪಾಧ್ಯಕ್ಷ ರವಿರಾಜ ಕಂದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ ದೇವಣ್ಣ ದೊರಿ, ಮಲ್ಲಿಕಾರ್ಜುನ ಸ್ವಾಮಿ, ಭೀಮನಗೌಡ ಗೌಡಗೇರಾ, ಸತೀಶ ಪಂಚಬಾವಿ, ರವಿ ಉಪ್ಪಾರ, ಮಹಾಂತೇಶ ಯಳವರ, ಶಿವಕಾಂತ ರೈಟರ್, ಗೋವಿಂದಪ್ಪ ದೊರಿ, ಮಲ್ಲಣ್ಣ ಬಿರಾದಾರ ಇದ್ದರು. ಮಹೇಶ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಹೆಗ್ಗಣದೊಡ್ಡಿ ಸ್ವಾಗತಿಸಿದರು, ಶರಣಪ್ಪ ಪೂಜಾರಿ ವಂದಿಸಿದರು.
--
'ಎನ್ನೆಸ್ಸೆಸ್ಸಿಂದ ಸೇವಾ ಮನೋಭಾವ ವೃದ್ಧಿ'
ಹುಣಸಗಿ: ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸುಮಾರು ಒಂದು ವಾರಗಳ ಕಾಲ ಬಲಶೆಟ್ಟಿಹಾಳ ಗ್ರಾಮದಲ್ಲಿದ್ದು, ಗ್ರಾಮವನ್ನು ಸ್ವಚ್ಛ ಮಾಡುವುದರೊಂದಿಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಳ್ಳಿಯಲ್ಲಿನ ಜನರ ಮೂಢನಂಬಿಕೆ, ಗ್ರಾಮ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದರಿಂದ ಸೇವಾ ಮನೋಭಾವನೆ ಹೆಚ್ಚಿದಂತಾಗಿದೆ ಎಂದು ಗ್ರಾಮದ ಹಿರಿಯ ಅಯ್ಯಣ್ಣ ಹಿರೇಮಠ ನುಡಿದರು. ಸಮೀಪದ ಬಲಶೆಟ್ಟಿಹಾಳದಲ್ಲಿ ಸ್ವಾಮಿ ವಿವೇಕಾನಂದ ಪದವಿ ಕಾಲೇಜು ಆಶ್ರಯದಲ್ಲಿ ನಡೆದ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇಂದಿನ ಗ್ರಾಮೀಣ ಯುವಕರಿಗೆ ಅವಶ್ಯವಾಗಿದೆ ಎಂದರು. ಶಿವಕುಮಾರ ವಿವೇಕಿ, ಸಂಸ್ಥೆಯ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್ ಮಾತನಾಡಿದರು. ಪಾಟೀಲ್ ಚನ್ನೂರು, ನಂದಪ್ಪ ಎಮ್ಮೆಟ್ಟಿ, ಐ.ಬಿ. ಮರೋಳ, ಬಸವರಾಜ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

