ಗುಲ್ಬರ್ಗಾ

ಇಂದು ಸಿನಿಮಾ- ಸಾಹಿತ್ಯ ಸಂವಾದ

Published On :


ಗುಲ್ಬರ್ಗ: ಇಲ್ಲಿನ ಜಿಲ್ಲಾ ಕಸಾಪ ಆಸರೆಯಲ್ಲಿ ಭಾನುವಾರ ಸಂಜೆ 5.15ಕ್ಕೆ ಕನ್ನಡ ಭವನದ ಅಂಗಳದಲ್ಲಿ ಸಿನಿಮಾ- ಸಾಹಿತ್ಯ ಕುರಿತು ಸಂವಾದ ನಡೆಯಲಿದೆ. ಕನ್ನಡ ಚಲನಚಿತ್ರ ನಟ ಸಮರಸಿಂಹ, ಅಭಿಜಿತ್ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಗುಲ್ಬರ್ಗ ಫಿಲ್ಮ್ಸ್ ಕ್ಲಬ್ ಅಧ್ಯಕ್ಷ ವಜ್ರಕುಮಾರ ಕಿವಡೆ, ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ, ನಿರ್ದೇಶಕ ಅರವಿಂದ ಮುಳಗುಂದ, ಬಸವರಾಜ ಹಿರೇಮಠ ಭಾಗವಹಿಸುತ್ತಿದ್ದಾರೆ.
ಇಂದು ಉಚಿತ ಚಿಕಿತ್ಸಾ ಶಿಬಿರ
ಗುಲ್ಬರ್ಗ: ನಗರದ ರಾಮ ಮಂದಿರ ಹತ್ತಿರದ ಓಜಾ ಕಾಲೋನಿಯಲ್ಲಿ ಪ್ರಾಣವೇದ ಹೆಲ್ತ್ ಕೇರ್ ಸಂಶೋಧನಾ ಕೇಂದ್ರದ ವತಿಯಿಂದ ಮಾ.17ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಂಧಿವಾತ ಹಾಗೂ ವಾತವ್ಯಾಧಿಗಳ(ಬೆನ್ನುನೋವು ಹಾಗೂ ಕೀಲುನೋವು) ಕುರಿತು ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಡಾ. ಮಹೇಶ ಭಾಲ್ಕೆ- 99023 45619ಗೆ ಸಂಪರ್ಕಿಸಿ
ನೇಮಕಾತಿ:
ತಾತ್ಕಾಲಿಕ ಸ್ಥಗಿತ
ಗುಲ್ಬರ್ಗ: 2012-13ನೇ ಸಾಲಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮಾ.24ರ ಭಾನುವಾರ ಬೆಳಗ್ಗೆ 10.30ಕ್ಕೆ ನಿಗದಿಪಡಿಸಲಾಗಿತ್ತು.ಆದರೆ ಅನಿವಾರ್ಯ ಹಾಗೂ ತಾಂತ್ರಿಕ ಅಡಚಣೆಯಿಂದಾಗಿ ಆ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬೆಂಗಳೂರಿನ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಸೂಚಿಸಿರುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ  ಉಪನಿರ್ದೇಶಕರು ತಿಳಿಸಿದ್ದಾರೆ.
ಗುರುತಿನ ಚೀಟಿ
ಪಡೆಯಲು ಮನವಿ
ಗುಲ್ಬರ್ಗ: ಕರ್ನಾಟಕ ಸರ್ಕಾರದ ಆದೇಶ ಮೇರೆಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಅಂಗವಿಕಲರ ವಿವಿದೋದ್ದೇಶ ಸರ್ಕಾರೇತರ ಸೇವಾ ಸಂಘದ ಕಚೇರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ತಯಾರಿಸಲು ಪರವಾನಗಿ ನೀಡಲಾಗಿದ್ದು, ಇನ್ನು ಮುಂದೆ ಎಲ್ಲ ಹಿರಿಯ ನಾಗರಿಕರು ಗುರುತಿನ ಚೀಟಿಗಾಗಿ ಕಚೇರಿಗೆ ಸಂಪರ್ಕಿಸಬಹುದು.ಇತ್ತೀಚಿನ 3 ಭಾವಚಿತ್ರ, ಬ್ಲಡ್ ಗ್ರೂಪ್, ಚುನಾವಣಾ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್‌ನ್ನು  ಕಚೇರಿಯಲ್ಲಿ ನೀಡಿ ಗುರುತಿನ ಚೀಟಿ ಪಡೆದುಕೊಳ್ಳಬೇಕೆಂದು ಜಿಲ್ಲಾ ಅಂಗವಿಕಲರ ವಿವಿದೋದ್ದೇಶ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಕುಲ್ಕರ್ಣಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ವಿವಿದೋದ್ದೇಶ ಸರ್ಕಾರೇತರ ಸೇವಾ ಸಂಘ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಕೇಂದ್ರ, ಲಕ್ಷ್ಮಿ ನಿವಾಸ, ಆದರ್ಶನಗರಕ್ಕೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.