ಗುಲ್ಬರ್ಗಾ

ಚೌಡಯ್ಯ ಜಯಂತ್ಯುತ್ಸವ

Published On :

ಚಿಂಚೋಳಿ: ನಿಜಶರಣ ಅಂಬಿಗರ ಚೌಡಯ್ಯನವರ ತತ್ವ, ಸಿದ್ಧಾಂತಗಳು ಮತ್ತು ಅವರ ಆದರ್ಶ ವಿಚಾರಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕೋಲಿ ಸಮಾಜದ ಮುಖಂಡ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೇರೂರ ಹೇಳಿದರು.
ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಂಘ ವತಿಯಿಂದ ಗುರುವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಸಚಿವ ಬಾಬುರಾವ ಚವ್ಹಾಣ, ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ರವಿರಾಜ ಕೊರವಿ, ಮುಕ್ರಂಖಾನ್, ಸೇಡಂ ಮತ್ತು ತಾಲೂಕು ಕೋಲಿ ಸಮಾಜ ಅಧ್ಯಕ್ಷ ಲಕ್ಷ್ಮಣ ಆವಂಟಿ ಮಾತನಾಡಿದರು.
ಜ್ಞಾನಪ್ರಕಾಶ ಮಹಾರಾಜರು, ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಭಾಷ ರಾಠೋಡ, ಶಿವಕುಮಾರ ಕೊತ್ತಪೇಟ್, ನರೇಶ ಮಲಕೂಡ, ಸತೀಶರೆಡ್ಡಿ ರಂಜೋಳ, ಜಿಪಂ ಸದಸ್ಯ ಸಂಜೀವನ ಯಾಕಾಪುರ, ತಾಪಂ ಉಪಾಧ್ಯಕ್ಷೆ ತಾರಾಮತಿ ಕುಂಬಾರ, ಡಾ. ಉಮೇಶ ಜಾಧವ ಇದ್ದರು.

ಗ್ಲೌಕೋಮಾ ಜಾಗೃತಿ ಜಾಥಾ
ಗುಲ್ಬರ್ಗ: ನಗರದ ರೋಟರಿ ಕ್ಲಬ್ ಹಾಗೂ ನೇತ್ರ ಚಿಕಿತ್ಸೆ ಸಂಘದ ಸಂಯುಕ್ತಾಶ್ರಯದಲ್ಲಿ ಈಚೆಗೆ ವಿಶ್ವ ಗ್ಲೌಕೋಮಾ ಜಾಗೃತಿ ಜಾಥಾ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ರೋಟರಿ ಕ್ಲಬ್ ಆವರಣದವರೆಗೆ ನಡೆಯಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ದೇವಿಂದ್ರಪ್ಪ ಚಿಂಚೋಳಿ, ತಮ್ಮ 13ವರ್ಷದ ನೇತ್ರ ಶಿಬಿರದ ಅನುಭವವನ್ನು
ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.