ಶರಣ ಸಂಸ್ಕೃತಿ ಯಾತ್ರೆಗೆ ಭವ್ಯ ಸ್ವಾಗತ
ಶಹಾಬಾದ್: ಶಹಾಬಾದ್ ಪಟ್ಟಣಕ್ಕೆ ಇತ್ತೀಚೆಗೆ ಆಗಮಿಸಿದ ಶರಣ ಸಂಸ್ಕೃತಿ ಮಹಾಯಾತ್ರೆಗೆ ಬಸವೇಶ್ವರ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಚಿತ್ತಾಪುರದಿಂದ ಆಗಮಿಸಿದ ಯಾತ್ರೆಯನ್ನು ವಾಡಿ ಕ್ರಾಸ್‌ನಿಂದ ನೂರಾರು ಯುವಕರು ದ್ವಿಚಕ್ರ ವಾಹನಗಳ ಮೆರವಣಿಗೆಯೊಂದಿಗೆ ಬಸವೇಶ್ವರ ವೃತ್ತಕ್ಕೆ ಬರಮಾಡಿಕೊಂಡರು. ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ಉಪಾಧ್ಯಕ್ಷ ಅಣ್ಣಪ್ಪ ದಸ್ತಾಪುರ, ಭಂಕೂರನ ಬಸವ ಸಮಿತಿ ಅಧ್ಯಕ್ಷ ಬಸಯ್ಯ ಪೂಜಾರಿ, ವಚನೋತ್ಸವ ಸಮಿತಿಯ ಮಹಾಲಿಂಪ್ಪ ಇಂಗಿನಶೆಟ್ಟಿ, ಶರಣು ಬಿರಾಳ ಸೇರಿದಂತೆ ಬಸವಾಭಿಮಾನಿಗಳು ಹೂಗಳನ್ನು ಚಲ್ಲಿ ಸ್ವಾಗತಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಮೆರವಣಿಗೆ ನಡೆಯಿತು.
ಸಮಾಜದ ಮುಖಂಡರಾದ ಸೂರ್ಯಕಾಂತ ವಾರದ, ಸಾಹೇಬಗೌಡ ಬೊಗುಂಡಿ, ಚಂದ್ರಕಾಂತ ದಸ್ತಾಪುರ, ಅರುಣಕುಮಾರ ಪಟ್ಟಣಕರ್, ಅಣವೀರ ಇಂಗಿನಶೆಟ್ಟಿ, ನಾಗಣ್ಣ ರಾಂಪುರೆ, ಗಿರಿಮಲ್ಲಪ್ಪ ವಳಸಂಗಿ, ಹಳೆ ಶಹಾಬಾದ್ ಬಸವ ಸಮಿತಿ ಸದಸ್ಯರು, ನಗರ ವೀರಶೈವ ಸಮಾಜ, ಬಸವ ಸಮಿತಿ ಸದಸ್ಯರು, ವಿವಿಧ ಸಮಾಜದ ಬಸವಾಭಿಮಾನಿಗಳು ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

