ಕಮಲಾಪುರದಲ್ಲೇ ಮುಂದುವರಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.20
ಕಮಲಾಪುರ ಗಡಿ ಗ್ರಾಮದ ಹಳ್ಳಿಗಳಾದ ಗೊಬ್ಬುರವಾಡಿ, ನೇಳಕೂಡ, ಸೊಂತ, ಪಟವಾಡ, ಮಳಸಾಪುರ, ಮರಮಂಚಿ ಕಿಣ್ಣಿಸರಫೋಸ್, ಹೊನ್ನಳ್ಳಿ, ಡೋರಜಂಬಗಾ ಕಿಣ್ಣಿಸಡಕ ಗ್ರಾಮಗಳನ್ನು ಚಿಟ್ಟಗುಪ್ಪ ತಾಲೂಕಿಗೆ ಸೇರಿಸದೆ ಈಗಿರುವಂತೆ ಕಮಲಾಪುರ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ಮರಗತ್ತಿ ಕ್ರಾಸ್ ಹತ್ತಿರ ಜಿಪಂ ಮಾಜಿ ಸದಸ್ಯ ಶಿವಶೆಟ್ಟಿ ಪಾಟೀಲ್ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಚಳವಳಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಶಿವಶೆಟ್ಟಿ ಪಾಟೀಲ್, ರಾಜಕೀಯ ಕುತಂತ್ರದಿಂದ ಚಿಟ್ಟಗುಪ್ಪ ತಾಲೂಕಿಗೆ ಕಡಿಮೆ ಹಳ್ಳಿಗಳಿವೆ ಎಂದು ಕಮಲಾಪುರ ಗಡಿ ಗ್ರಾಮದ ಕೆಲವು ಹಳ್ಳಿಗಳನ್ನು ಚಿಟ್ಟಗುಪ್ಪ ತಾಲೂಕಿಗೆ ಸೇರಿಸುವ ಹುನ್ನಾರ ನಡೆದಿದೆ. ಈ ಹಳ್ಳಿಗಳನ್ನು ಕಮಲಾಪುರ ತಾಲೂಕಿನಲ್ಲಿಯೇ ಮುಂದುವರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಸಿದರು.
ಸೊಂತ, ಡೊಂಗರಗಾಂವ ಗ್ರಾಮಗಳನ್ನು ಕಂದಾಯ ಸರ್ಕಲ್‌ಗಳಾಗಿ ಘೋಷಿಸಿ ಈ ಗ್ರಾಮಗಳಲ್ಲಿ ಸರ್ಕಾರಿ ಪಪೂ ಕಾಲೇಜುಗಳನ್ನು ಸ್ಥಾಪಿಸಬೇಕು. ಕುಡಿವ ನೀರಿಗಾಗಿ 5 ಕೋಟಿ ಬಿಡುಗಡೆ ಮಾಡಬೇಕು. ಪಟವಾಡದಲ್ಲಿ ಚಿಕಿತ್ಸಾ ಕೇಂದ್ರ, ಕಿಣ್ಣಿಸಡಕದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಬಾಬು ಹೊನ್ನಾನಾಯಕ, ಕಮಲಾಕರ ರಾಠೋಡ್, ಎಲ್.ಎಸ್. ರಾಠೋಡ, ನೀಲಕಂಠ ಚವ್ಹಾಣ, ಬಿ.ಕೆ. ಕುಲ್ಕರ್ಣಿ, ಬಸವರಾಜ ಗೊಬ್ಬೂರವಾಡಿ ಹಾಗೂ ಪ್ರಭು ಜಾಧವ ಮಾತನಾಡಿ, ಯಾವುದೇ ಕಾರಣಕ್ಕೂ ಕಮಲಾಪುರ ತಾಲೂಕಿನ ಗಡಿ ಗ್ರಾಮಗಳನ್ನು ಚಿಟ್ಟಗುಪ್ಪ ವ್ಯಾಪ್ತಿಗೆ ಸೇರಿಸದೆ ಕಮಲಾಪುರದಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಂದ್ರಕಾಂತ ರಾಮಾ, ರಾಜು ಪಾಟೀಲ್, ನರಸಿಂಹರಾವ ಮರಮಂಚಿ, ಗುಂಡೇರಾವ ಪಾಟೀಲ್, ಕೃಷ್ಣಪ್ಪ ಕಟ್ಟಿಮನಿ, ಭೋಜಪ್ಪ ಡೊಂಗರಗಾಂವ, ಅಶೋಕ ಗಂದಗಿ, ರಾಜುಕುಮಾರ ರಟಕಲ್, ಭೀಮಸಿಂಗ್ ನೇಳಕೂಡ ಸೇರಿದಂತೆ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

